ತೌಕ್ತೆ ಚಂಡಮಾರುತ ಎಫೆಕ್ಟ್: ಮೂರ್ತೆದಾರರನ್ನು ಮರೆತು ಬಿಟ್ಟರೆ ಲಾಲಾಜಿ
ಕಾಪು: ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿ ಕರಾವಳಿ ಭಾಗದಲ್ಲಿ ಆಗಿರುವ ಹಾನಿ ಮತ್ತು ಅನುದಾನ ಕುರಿತಾಗಿ ಚರ್ಚಿಸಿದ್ದಾರೆ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮೂರ್ತೆದಾರ ಕುಟುಂಬ ಹೊರತು ಪಡಿಸಿ ಉಳಿದೆಲ್ಲರಿಗೂ ಪರಿಹಾರ ನೀಡುವ ಬಗ್ಗೆ ಒತ್ತಾಯ ಹಾಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ತೌಕ್ತೆ ಚಂಡಮಾರುತ ಹಾನಿಯಿಂದಾಗಿ ನೂರಾರು ಮೂರ್ತೆ ಮಾಡುತ್ತಿದ್ದ ಕಲ್ಪವೃಕ್ಷಗಳು ಧರೆಗುಳಿದು ಅದನ್ನಂಬಿದ್ದ ಕುಟುಂಬಿಕರು ಹಾಗೂ ಮೂರ್ತೆದಾರರು ಕಂಗಲಾಗಿದ್ದಾರೆ.
ಆದರೇ ಈ ಬಗ್ಗೆ ಹಲವಾರು ವರ್ಷಗಳಿಂದಲೂ ಇದೇ ಸಮಸ್ಯೆ ಎದುರಿದ್ದರು ಕಾಪು ಶಾಸಕ ಲಾಲಾಜಿ ಮೆಂಡನ್ ಮಾತ್ರ ಈ ಬಗ್ಗೆ ಚಕಾರ ಎತ್ತದೆ ಕೇವಲ ಕೆಲವೇ ಕೆಲವು ಸಮುದಾಯಕ್ಕೆ ಬೆನ್ನಿಗೆ ನಿಂತು ಮೂರ್ತೆದಾರರನ್ನು ಕಡೆಗಣಿಸುತ್ತಿದ್ದಾರೆಂಬುದು ಮೂರ್ತೆದಾರರಿಗೆ ನೋವು ಉಂಟುಮಾಡಿದೆ.
ಪರಿಹಾರ ಒದಗಿಸುವ ಸಂಧರ್ಭದಲ್ಲಿ ಯಾವುದೇ ರೀತಿಯ ಜಾತಿ ಮತ ಪಂಥದ ಭೇದ ಮಾಡದೆ ಪರಿಹಾರ ಒದಗಿಸಬೇಕು ಅಲ್ಲದೆ ಕರಾವಳಿ ಭಾಗದ ನಿರ್ಣಾಯಕ ಮತದಾರರಲ್ಲಿ ಮೂರ್ತೆದಾರರ ಪಂಗಡವು ಸೇರಿಕೊಂಡಿದೆ ಮೂರ್ತೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದ್ದು ಲಾಲಾಜಿ ಮೆಂಡನ್ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿಯುತ್ತಿದೆ ,ಈ ವಿಚಾರದಲ್ಲಿ ಶಾಸಕರು ಹೇಗೆ ಸ್ಪಂದಿಸುತ್ತಾರೆಂಬುದು ಕಾದು ನೋಡಬೇಕಿದೆ.
ಪೊಲಿಟಿಕಲ್ ಬ್ಯೂರೋ -vishwanews24
ಬೆಂಗಳೂರು: ಫುಟ್‌ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ : ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಬೆಂಗಳೂರು…
ಅಣಬೆ ಬೆಳೆದಿದ್ದ ಹೊಲಕ್ಕೆ ಅದರ ಮಾಲೀಕರಿಂದ ಕ್ರಿಮಿನಾಶಕ ಔಷಧಿ ಸಿಂಪಡಿಕೆ.. ಕೀಟನಾಶಕದ ಅಂಶ ಅಣಬೆಯೊಳಗೆ ಸೇರಿ ವಿಷವಾಗಿ ಮಾರ್ಪಟ್ಟು ಇಡೀ…
ಉಡುಪಿ: ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣ ; ಆರೋಪಿ ಝೀನತ್ ವಿರುದ್ಧ ಮತ್ತೆರಡು ಹೊಸ ಪ್ರಕರಣ ದಾಖಲು ಉಡುಪಿ:ಬಹುಕೋಟಿ ವಂಚನೆ…
ಆಗುಂಬೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ - ಮಹತ್ವದ ತೀರ್ಪು ನೀಡಿದ ಶಿವಮೊಗ್ಗ ನ್ಯಾಯಾಲಯ ತೀರ್ಥಹಳ್ಳಿ: ಲೈಂಗಿಕ ದೌರ್ಜನ್ಯಕ್ಕೆ…
ರಾಮ ಮಂದಿರದಲ್ಲಿ ನಡೆದ ಘಟನೆ ಅವಮಾನಕರ; ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ :ಸಿಎಂ ಡಿ.ಕೆ. ಶಿ ಬೆಳಗಾವಿ: ಮುಜರಾಯಿ…
ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ರೂ.ವಂಚನೆ ಪ್ರಕರಣ: ಮುಂಬಯಲ್ಲಿ ಉಡುಪಿ ಮೂಲದ ಮಹಿಳೆ ಬಂಧನ ಮುಂಬೈ,: ಷೇರು…