Featured

ಥೈಲ್ಯಾಂಡ್ ಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಗೋವಾ ನೈಟ್​ಕ್ಲಬ್​ ಮಾಲೀಕರ ಬಂಧನ – vishwanews24

ಥೈಲ್ಯಾಂಡ್ ಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಗೋವಾ ನೈಟ್​ಕ್ಲಬ್​ ಮಾಲೀಕರ ಬಂಧನ

ಪಣಜಿ: ನೈಟ್​ಕ್ಲಬ್​ನಲ್ಲಿ ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಥೈಲ್ಯಾಂಡ್ ಗೆ ಪರಾರಿಯಾಗಿದ್ದ ಗೋವಾದ ರೋಮಿಯೋ ಲೇನ್ ನೈಟ್​ಕ್ಲಬ್ ಮಾಲೀಕರನ್ನು ಬಂಧಿಸಲಾಗಿದೆ.

ಇತ್ತೀಚೆಗೆ ಕ್ಲಬ್​ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ರೋಮಿಯೋ ಲೇನ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಿದ್ದರು.

ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿಯ ನಂತರ ದೇಶದಿಂದ ಪಲಾಯನ ಮಾಡಿದ ಲೂತ್ರಾ ಸಹೋದರರ ಒಡೆತನದ ಗೋವಾದ ವಾಗೇಟರ್ ಪ್ರದೇಶದಲ್ಲಿರುವ ರೋಮಿಯೋ ಲೇನ್ ರೆಸ್ಟೋರೆಂಟ್ ಅನ್ನು ಕೆಡವಲಾಯಿತು. ಗೌರವ್ ಲೂತ್ರಾ ಮತ್ತು ಸೌರಭ್ ಲೂತ್ರಾ ಇದರ ಮಾಲೀಕರು.

ರೋಮಿಯೋ ಲೇನ್ ಬಳಿ ಇರುವ ಅವರ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್ ಡಿಸೆಂಬರ್ 7 ರಂದು ಬೆಂಕಿಗೆ ಆಹುತಿಯಾಗಿ 25 ಜನರು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕ್ಲಬ್​ನ ಮಾಲೀಕರನ್ನು ಥೈಲ್ಯಾಂಡ್​ನಲ್ಲಿ ಬಂಧಿಸಲಾಗಿದೆ.

ಶೀಘ್ರದಲ್ಲೇ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಕ್ಲಬ್‌ನ ನಾಲ್ವರು ಮಾಲೀಕರ ಪೈಕಿ ಅಜಯ್ ಗುಪ್ತಾನನ್ನು  ಗೋವಾ ಪೊಲೀಸರು ಬಂಧಿಸಿದ್ದಾರೆ.

Vishwa News 24

Recent Posts

ನೆಹರು ದೇಶದ ಅಭಿವೃದ್ಧಿಗೆ ಭದ್ರವಾದ ಅಡಿಪಾಯ ಹಾಕಿದ ಮಹಾನ್ ನಾಯಕ : ಸಿದ್ದರಾಮಯ್ಯ – vishwanews24

ದೇಶದ ಅಭಿವೃದ್ಧಿಗೆ ನೆಹರು ಹಾಕಿದ ಅಡಿಪಾಯ ಮರೆಯಲು ಸಾಧ್ಯವಿಲ್ಲ: ಸಿದ್ದರಾಮಯ್ಯ ಬೆಂಗಳೂರು : ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್…

2 hours ago

ಉಡುಪಿ:  ತಾಯಿಯ ಮೃತದೇಹದ ಎದುರು ಕಣ್ಣೀರಿಟ್ಟ ರವಿ ಪೂಜಾರಿ  – vishwanews24

ಉಡುಪಿ:  ತಾಯಿಯ ಮೃತದೇಹದ ಎದುರು ಕಣ್ಣೀರಿಟ್ಟ ರವಿ ಪೂಜಾರಿ  ಉಡುಪಿ: ಭೂಗತ ಪಾತಕಿ ರವಿ ಪೂಜಾರಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು…

3 hours ago

ಕಾಪು: ಗೃಹಲಕ್ಷ್ಮಿ ಕೆವೈಸಿ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಜನರ ಆಹ್ವಾನ : ಬಿಜೆಪಿ ಆರೋಪ – vishwanews24

ಕಾಪು: ಗೃಹಲಕ್ಷ್ಮಿ ಕೆವೈಸಿ ಹೆಸರಿನಲ್ಲಿ ಸಮಾವೇಶಕ್ಕೆ ಜನರ ಆಹ್ವಾನ : ಬಿಜೆಪಿ ಆರೋಪ ಕಾಪು : ಗ್ರಾಮೀಣ ಕಾಂಗ್ರೆಸ್ ಸಮಿತಿಯ…

3 hours ago

ಉಡುಪಿಯಲ್ಲಿ 28ರಿಂದ 30ರವರೆಗೆ ಮೂರು ದಿನಗಳ ಕಾಲ ಶ್ರೀ ಶಂಕರ ವಿಜಯೋತ್ಸವ – vishwanews24

ಶಂಕರಾಚಾರ್ಯರಿಂದ ದೇಶಾದ್ಯಂತ ಧರ್ಮಜಾಗೃತಿ : ವಾಗೀಶ್ ಶಾಸ್ತ್ರಿ 2.85 ಕೋಟಿ ವೆಚ್ಚ, ಲಕ್ಷಕ್ಕೂ ಅಧಿಕ ಅಧಿಕ ಭಕ್ತರ ಸೇರುವ ನಿರೀಕ್ಷೆ…

4 hours ago

ಮಂಗಳೂರು: ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶೀಯರ ಪತ್ತೆ – vishwanews24

ಮಂಗಳೂರು: ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶೀಯರ ಪತ್ತೆ ಮಂಗಳೂರು: ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ…

4 hours ago

ಕಡಬ : ಪಿಕಪ್ – ಕಾರಿನ ನಡುವೆ ಭೀಕರ ಅಪಘಾತ ; ಓರ್ವ ಮೃತ್ಯು, ಇನ್ನೋರ್ವ ಗಂಭೀರ – vishwanews24

ಕಡಬ : ಪಿಕಪ್ - ಕಾರಿನ ನಡುವೆ ಭೀಕರ ಅಪಘಾತ ; ಓರ್ವ ಮೃತ್ಯು, ಇನ್ನೋರ್ವ ಗಂಭೀರ ಕಡಬ: ಹಣ್ಣು…

5 hours ago