Featured

ದಕ್ಷಿಣ ಕನ್ನಡ, ಉಡುಪಿ : ಜಿಲ್ಲೆಗಳ 17 ಖಾಸಗಿ ಪ.ಪೂ. ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ – Vishwanews24

ದಕ್ಷಿಣ ಕನ್ನಡ, ಉಡುಪಿ: 17 ಖಾಸಗಿ ಪ.ಪೂ. ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ

ಉಡುಪಿ: ದಕ್ಷಿಣ ಕನ್ನಡದ 10 ಹಾಗೂ ಉಡುಪಿಯ 7 ಸೇರಿದಂತೆ ಉಭಯ ಜಿಲ್ಲೆಗಳ 17 ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ ವರದಿಯಾಗಿದೆ. ಸತತ ಮೂರು ವರ್ಷಗಳಿಂದ ಶೂನ್ಯ ದಾಖಲಾತಿಯಿದ್ದರೆ ಅಂತಹ ಕಾಲೇಜು ಗಳಿಗೆ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ.

ರಾಜ್ಯದ 541 ಖಾಸಗಿ ಪಿಯು ಕಾಲೇಜು ಗಳ‌ಲ್ಲಿ ಶೂನ್ಯ ದಾಖಲೆಯಿದ್ದು, ಬೆಂಗಳೂರು ದಕ್ಷಿಣ ಮೊದಲು (93), ಬೆಂಗಳೂರು ಉತ್ತರ 2ನೇ (61) ಸ್ಥಾನದಲ್ಲಿದೆ. ಶಿರಸಿಯ 3 ಕಾಲೇಜುಗಳಲ್ಲಿ ಶೂನ್ಯ ದಾಖಲಾತಿಯಿದ್ದು, ಕೊನೆ ಸ್ಥಾನದಲ್ಲಿದೆ ಎಂದು ಇಲಾಖೆ ತಿಳಿಸಿದೆ.

2019-20, 2020-21 ಹಾಗೂ 2021- 22ನೇ ಸಾಲಿನಲ್ಲಿ ಶೂನ್ಯ ದಾಖಲಾತಿಯಾಗಿದ್ದು, ಶೈಕ್ಷಣಿಕ ಚಟುವಟಿಕೆ ನಡೆಯದೆ ಸ್ಥಗಿತ ಗೊಂಡಿರುವ ಕಾಲೇಜುಗಳು 2022-23ನೇ ಸಾಲಿಗೆ ವಿದ್ಯಾರ್ಥಿಗಳ ಸೇರ್ಪಡೆ ಮಾಡಿ ಕೊಳ್ಳಲು ಅಥವಾ ಎಸ್‌ಎಟಿಎಸ್‌ನಲ್ಲಿ ವಿದ್ಯಾರ್ಥಿ ಗಳ ಮಾಹಿತಿ ಅಪ್‌ಲೋಡ್‌ ಮಾಡಲು ಅವಕಾಶ ಇರುವುದಿಲ್ಲ.

ಶೂನ್ಯ ದಾಖಲಾತಿ ಹೊಂದಿರುವ ಖಾಸಗಿ ಪ.ಪೂ. ಕಾಲೇಜುಗಳು ಕೊರೊನಾ ಹಿನ್ನೆಲೆ ಯಲ್ಲಿ ಸ್ಥಗಿತಗೊಂಡಿದ್ದಲ್ಲಿ ವಿಶೇಷ ಪ್ರಕರಣದಡಿ ವಿನಾಯಿತಿ ಕಲ್ಪಿಸಿ 2022-23ನೇ ಸಾಲಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಸರಕಾರ ಅವಕಾಶ ಕೊಟ್ಟಿದೆ. ಕಾಲೇಜನ್ನು ಪುನಃ ಆರಂಭಿಸಲು ಇಚ್ಛಿಸಿದಲ್ಲಿ ಕಾಲೇಜಿನ ಮಂಜೂರಾತಿ ಆದೇಶ ಪ್ರತಿ, ಶೈಕ್ಷಣಿಕ ಮಾನ್ಯತೆ ಆದೇಶಪ್ರತಿ, 2016-17ನೇ ಸಾಲಿನ ಮಾನ್ಯತೆ ನವೀಕರಣ ಪ್ರತಿ, 2022-23ರಲ್ಲಿ ಮಾನ್ಯತೆ ಶುಲ್ಕ ಪಾವತಿಸಿರುವ ಚಲನ್‌, ಮಂಜೂರಾದ ಸಂಯೋ ಜನೆ ಮತ್ತು ವಿಭಾಗದ ಆದೇಶ ಪ್ರತಿ, 2017-18, 2018-19ರಲ್ಲಿ ಸಂಯೋಜನೆ, ವಿಭಾಗವಾರು ವಿದ್ಯಾರ್ಥಿಗಳ ದಾಖಲಾತಿ, ಫ‌ಲಿತಾಂಶದ ವಿವರ ಸಹಿತ ಅಗತ್ಯ ದಾಖಲೆಗಳನ್ನು ಜು. 16ರೊಳಗೆ ಇಲಾಖೆಗೆ ಸಲ್ಲಿಸ ಬೇಕು ಎಂದು ಇಲಾಖೆಯ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

8 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

8 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

8 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

8 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

8 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

9 hours ago