ದಕ್ಷಿಣ ಕನ್ನಡ

ದಕ್ಷಿಣ ಭಾರತದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಮಂಗಳೂರು : ದಕ್ಷಿಣ ಭಾರತದ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ವಿಮಾನ ನಿಲ್ದಾಣವಾಗಿ ಮಂಗಳೂರು ವಿಮಾನ ನಿಲ್ದಾಣ ತನ್ನನ್ನು ಗುರುತಿಸಿಕೊಳ್ಳುತ್ತಿದೆ. ಕಳೆದೊಂದು ವರ್ಷದ ಅವಧಿಯಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 30ರಷ್ಟು ಏರಿಕೆ ಕಂಡಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 2016-17ರಲ್ಲಿ ಒಟ್ಟು 17.5 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರೆ, 2017-18ರಲ್ಲಿ ಈ ಸಂಖ್ಯೆ 23.4 ಲಕ್ಷಕ್ಕೇರಿದೆ. ಈಗ ವಿಮಾನ ನಿಲ್ದಾಣದಲ್ಲಿ ಪ್ರತಿದಿನ 60ಕ್ಕೂ ಹೆಚ್ಚು ವಿಮಾನಗಳ ಸಂಚಾರವಿದ್ದು, ಮುಂದಿನ ಕೆಲವು ದಿನಗಳಲ್ಲಿ ಈ ಸಂಖ್ಯೆ 80ಕ್ಕೇರಲಿದೆ.

“ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಾಗುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ವಿಮಾನಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಗಮನಿಸಿ ಇಲ್ಲಿನ ಟರ್ಮಿನಲ್ ಕಟ್ಟಡದ ವಿಸ್ತೀರ್ಣವನ್ನು ಮುಂದಿನ ಕೆಲವು ವರ್ಷಗಳಲ್ಲಿ ಒಂದೂವರೆ ಪಟ್ಟು ಹೆಚ್ಚಿಸುವ ಪ್ರಸ್ತಾಪವಿದೆ” ಎಂದು ನಿರ್ದೇಶಕ ವಾಸಂಸೆಟ್ಟಿ ವೆಂಕಟೇಶ್ವರ ರಾವ್ ಹೇಳಿದ್ದಾರೆ. ಸದ್ಯ ಈ ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು ಕಾರ್ಯಾರಂಭಗೊಂಡ 18 ತಿಂಗಳೊಳಗಾಗಿ ಮುಗಿಸುವ ಅಂದಾಜಿದೆ.

ಪರ್ಯಾಯ ಟ್ಯಾಕ್ಸಿ ಟ್ರ್ಯಾಕ್ ಮೊದಲನೇ ಹಂತ ಈಗಾಗಲೇ ಪೂರ್ಣಗೊಂಡು ಕಾರ್ಯಾಚರಿಸುತ್ತಿರುವುದರಿಂದ ಪ್ರತಿ ಗಂಟೆಗೆ ನಿರ್ವಹಿಸಬಹುದಾದ ವಿಮಾನಗಳ ಸಂಖ್ಯೆ ಹಿಂದಿನ 10ರಿಂದ 14ಕ್ಕೇರಿದೆ. ಈ ಯೋಜನೆಯ ಎರಡನೇ ಹಂತ ಪೂರ್ಣಗೊಂಡಾಗ ಪ್ರತಿ ಗಂಟೆಯಲ್ಲಿ 17 ವಿಮಾನಗಳನ್ನು ನಿರ್ವಹಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಸುರಕ್ಷತಾ ಕ್ರಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರನ್-ವೇ ಬದಿಯ ಬೇಸಿಕ್ ಸ್ಟ್ರಿಪ್ ಅಗಲವನ್ನು 75 ಮೀಟರಿನಿಂದ 150 ಮೀಟರಿಗೆ ಹೆಚ್ಚಿಸಲಾಗಿದೆ. ಭದ್ರತಾ ವ್ಯವಸ್ಥೆಗಳೂ ಇನ್ನಷ್ಟು ಆಧುನಿಕಗೊಂಡಿದ್ದು ಸರ್ವೇಲೆನ್ಸ್ ಹಾಗೂ ಮೊನೋಪಲ್ಸ್ ಸರ್ವೇಲೆನ್ಸ್ ರಾಡಾರ್ ಹಾಗೂ ಡಿವಿಓಆರ್ ಇವುಗಳನ್ನು ಅಳವಡಿಸಲಾಗಿದೆ.

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago