Featured

ದಾನಿಗಳ ನೆರವಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಶೀಘ್ರದಲ್ಲಿ ನೂತನ ಬ್ರಹ್ಮರಥ -Vishwanews24

ಸುಬ್ರಹ್ಮಣ್ಯ :ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದಾನಿಗಳ ನೆರವಿನಿಂದ ನಿರ್ಮಾಣವಾಗುತ್ತಿರುವ ನೂತನ ಬ್ರಹ್ಮರಥವನ್ನು ಮುಂದಿನ ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ  ತರುವ ನಿರ್ಧಾರ ಹಾಗೂ ಮುಂದಿನ ತಿಂಗಳಲ್ಲಿ ಆದಿ ಸುಬ್ರಹ್ಮಣ್ಯದಲ್ಲಿ ನೂತನವಾಗಿ ನಿರ್ಮಾಣವಾದ 182 ಕೊಠಡಿಗಳಿರುವ ನೂತನ ವಸತಿಗೃಹವನ್ನು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

ಅಕ್ಟೋಬರ್ ನಲ್ಲಿ 3 ರಂದು ರಥ ಸುಬ್ರಹ್ಮಣ್ಯ ತಲುಪಲಿದೆ. ಚಂಪಾ ಷಷ್ಠಿ ಸಂದರ್ಭ ಎಳೆಯುವ 400 ವರ್ಷಗಳ ಇತಿಹಾಸವಿರುವ ಬ್ರಹ್ಮರಥ ಶಿಥಿಲವಾಗಿದ್ದು, ನೂತನ ರಥ ನಿರ್ಮಿಸುವುದು ಸೂಕ್ತ ಎಂಬುದಾಗಿ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿತ್ತು. ಬಿಡದಿ ರಿಯಾಲಿಟಿ ವೆಂಚರ್‌ ಪ್ರೋರ್‌ ಗ್ರೂಪ್‌ ಸಂಸ್ಥೆಯ ಪಾಲುದಾರರಾದ ಉದ್ಯಮಿ ಮುತ್ತಪ್ಪ ರೈ ಹಾಗೂ ಅಜಿತ್‌ ರೈ ಅವರು 2 ಕೋಟಿ ರೂ.ವೆಚ್ಚದ ಬ್ರಹ್ಮರಥವನ್ನು ದಾನ ರೂಪದಲ್ಲಿ ನೀಡುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಚೇರಿಯ ಎರಡನೆ ಮಹಡಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆ ಬಳಿಕ ಅವರು ಸಭೆಯಲ್ಲಿ ಕೈಗೊಂಡ ಕೆಲ ನಿರ್ಧಾರಗಳ ಬಗ್ಗೆ ತಿಳಿಸಿದರು.ಕುಂದಾಪುರ ಕೋಟೇಶ್ವರದಲ್ಲಿ ನೂತನ ಬ್ರಹ್ಮರಥ ನಿರ್ಮಾಣವಾಗುತ್ತಿದ್ದು ರಥದ ಕೆಲಸ ಬಹುತೇಕ ಅಂತಿಮಗೊಂಡಿದೆ. ರಥವನ್ನು ಕುಕ್ಕೆಗೆ ಮುಂದಿನ ತಿಂಗಳು ತರುವ ಕುರಿತು ನಿರ್ಧರಿಸಲಾಗಿದೆ. ಆ.31 ರಂದು ದೇವಸ್ಥಾನದ ಆಡಳಿತ ಸಮಿತಿ ನೇತೃತ್ವದಲ್ಲಿ ನಿಯೋಗ ಕೋಟೇಶ್ವರಕ್ಕೆ ತೆರಳಲಿದೆ. ರಥ ತರುವ ರಸ್ತೆ- ಹೆದ್ದಾರಿ ಅನುಮತಿ ಇತ್ಯಾದಿಗಳ ಕುರಿತು ರಥ ಶಿಲ್ಪಿ, ರಥದ ದಾನಿಗಳ ಜತೆ ಅಲ್ಲಿ ಚರ್ಚೆ ನಡೆಸಿ ಬಳಿಕ ದಿನ ನಿಗದಿಪಡಿಸಿ ಶುಭಮಹೂರ್ತದಲ್ಲಿ ತರುವ ಕೆಲಸ ನಡೆಯುತ್ತದೆ ಎಂದರು.

ದೇವಸ್ಥಾನದ ಹೊರಾಂಗಣ ಸುತ್ತುಪೌಳಿ ಮರು ದುರಸ್ತಿ ಕಾರ್ಯವು ಟೆಂಡರು ಹಂತದಲ್ಲಿದೆ. ಅದು ಪ್ರಕ್ರಿಯೆ ಪೂರ್ಣಗೊಂಡಲ್ಲಿ ಅದರ ಕಾರ್ಯವನ್ನು ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ. ಕುಮಾರಸ್ವಾಮಿ ಅವರ ಮಹತ್ವಕಾಂಕ್ಷೆಯ ಚಿಣ್ಣದ ರಥ ನಿರ್ಮಾಣಕ್ಕೆ ಸಂಬಂದಿಸಿ ಶೀಘ್ರ ಅನುಮತಿ ದೊರೆತಲ್ಲಿ ನಿರ್ಮಾಣ ಕೆಲಸ ಆರಂಭಿಸಲಾಗುತ್ತದೆ. ರಥದ ಪೌಂಡೆಶನ್ ಇತ್ಯಾದಿ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.

ಈಗಿರುವ ಬ್ರಹ್ಮರಥವನ್ನು 400 ವರ್ಷಗಳ ಹಿಂದೆ (ಕ್ರಿ.ಶ. 1582-1629) ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿ ಕೊಟ್ಟಿದ್ದ ಎಂದು ದಾಖಲೆಯಿಂದ ತಿಳಿಯುತ್ತದೆ. 1923ರಲ್ಲಿ ಗಣಪತಿ ರಾವ್‌ಗಳ ದ.ಕ.ಜಿಲ್ಲೆಯ ಪ್ರಾಚೀನ ಇತಿಹಾಸ ದಾಖಲೆಯಲ್ಲಿ ಈ ಕುರಿತು ಉಲ್ಲೇಖವಿದೆ. ಇದೇ ಅವಧಿಯಲ್ಲಿ ವೆಂಕಟಪ್ಪ ನಾಯಕ ಕೊಟೇಶ್ವರ ದೇಗುಲಕ್ಕೂ ರಥ ನೀಡಿರುವುದಾಗಿ ಗ್ರಂಥದಲ್ಲಿ ಉಲ್ಲೇಖವಿದೆ.

Vishwa News 24

Recent Posts

ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ  ಯುವತಿಯ ಭೀಕರ ಹತ್ಯೆ -vishwanews24

ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ  ಯುವತಿಯ ಭೀಕರ ಹತ್ಯೆ ಬಂಟ್ವಾಳ : ಯುವತಿಯೊಬ್ಬಳನ್ನು ಚಾಕುವಿಂದ ಹತ್ಯೆ ಮಾಡಿದ ಘಟನೆ ಜುಲೈ…

9 hours ago

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ : ಇಂದಿನಿಂದ IRCTC ಹೊಸ ವೆಬ್‌ಸೈಟ್ ಆರಂಭ – vishwanews24

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಇಂದಿನಿಂದ IRCTC ಹೊಸ ವೆಬ್‌ಸೈಟ್ ಆರಂಭ: ಇನ್ಮುಂದೆ ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್…

2 days ago

ಭಟ್ಕಳ: ಬೈಕಿಗೆ  ಲಾರಿ ಢಿಕ್ಕಿ ; ಸವಾರ ಮೃತ್ಯು – vishwanews24

ಭಟ್ಕಳ: ಬೈಕಿಗೆ  ಲಾರಿ ಢಿಕ್ಕಿ ; ಸವಾರ ಮೃತ್ಯು ಭಟ್ಕಳ: ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್…

2 days ago

ರಾಮಮಂದಿರದ ಹುಂಡಿ ಕಳವು ಪ್ರಕರಣ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಯಾಗಬೇಕು : ಸೊರಕೆ ಆಗ್ರಹ – vishwanews24

ರಾಮಮಂದಿರ ಪ್ರಕರಣವನ್ನು ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿಯೂ ಉಲ್ಲೇಖಿಸುತ್ತಿಲ್ಲ : ವಿನಯ ಕುಮಾರ್ ಸೊರಕೆ ಮಂಗಳೂರು: ರಾಮಮಂದಿರದ ಹುಂಡಿ…

2 days ago

ಉಡುಪಿ :  ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ – vishwanews24

ಉಡುಪಿ :  ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ ಉಡುಪಿ : ಗೋಮಾತೆ…

2 days ago

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ – vishwanews24

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ ಬೆಂಗಳೂರು: ಬಸ್ ಪ್ರಯಾಣಿಕರ ಸೋಗಿನಲ್ಲಿ ಬಂದು ಅತ್ಯಂತ…

2 days ago