ಮಂಗಳೂರು,: ಉದ್ಯಮಿ, ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿದ್ದ ವಿಕ್ಟರ್ ಡಿಸೋಜ ಪಲಿಮಾರ್ (55) ಶುಕ್ರವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಡುಪಿ ಪಲಿಮಾರು ನಿವಾಸಿಯಾಗಿದ್ದ ಇವರು 90 ರ ದಶಕದ ಆರಂಭದಲ್ಲಿ ಮುಂಬೈನಲ್ಲಿ ‘ಪಲಿಮಾರ್ ಎಲೆಕ್ಟ್ರಿಕಲ್ಸ್’ ಹೆಸರಿನಲ್ಲಿ ತಮ್ಮ ವಿದ್ಯುತ್ ಗುತ್ತಿಗೆ ಮತ್ತು ಇಂಟಿರಿಯರ್ ಡೆಕೊರೇಟರ್ ಉದ್ಯಮವನ್ನು ಸ್ಥಾಪಿಸಿದ್ದ ವಿಕ್ಟರ್ ಡಿಸೋಜಾ, ಕೆಲವು ವರ್ಷಗಳ ಹಿಂದೆಯಷ್ಟೇ ವಾಸ್ತವ್ಯವನ್ನು ಪಲಿಮಾರಿಗೆ ಸ್ಥಳಾಂತರಿಸಿದ್ದರು. ಇವರು ‘ವಿಲ್ಸನ್ ಹೊಲೊ ಬ್ಲಾಕ್ಸ್’ ಜೊತೆಗೆ ಉಡುಪಿ ಮತ್ತು ಮಂಗಳೂರಿನಲ್ಲಿ ಇಂಟಿರಿಯರ್ ಡೆಕೊರೇಟರ್ ಉದ್ಯಮವನ್ನು ನಡೆಸುತ್ತಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಮ್ಮ ಊರಾದ ಪಲಿಮಾರು ಮತ್ತು ಮಂಗಳೂರಿನಲ್ಲಿ ಉತ್ತಮ ವ್ಯವಹಾರ ಸಂಬಂಧ ಹೊಂದಿದ್ದ ಅವರದ್ದು ಪ್ರಾಮಾಣಿಕತೆ ಮತ್ತು ಸ್ನೇಹಜೀವಿ ವ್ಯಕ್ತಿತ್ವವಾಗಿತ್ತು.
ಮೃತರ ಅಂತ್ಯಕ್ರಿಯೆಯು ಶನಿವಾರ (ನ.30) ಸಂಜೆ 4 ಗಂಟೆಗೆ ಫಲಿಮಾರಿನ ಸೈಂಟ್ ಪಿಯೂಸ್ ಚರ್ಚ್ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…