Featured

ದಿಲ್ಲಿ ವಿಧಾನಸಭಾ ಕಟ್ಟಡದಿಂದ ಕೆಂಪು ಕೋಟೆಗೆ ಬ್ರಿಟಿಷರ ಕಾಲದ ಸುರಂಗ ಪತ್ತೆ -Vishwanews24

ದಿಲ್ಲಿ ವಿಧಾನಸಭಾ ಕಟ್ಟಡದಿಂದ ಕೆಂಪು ಕೋಟೆಗೆ ಬ್ರಿಟಿಷರ ಕಾಲದ ಸುರಂಗ ಪತ್ತೆ -Vishwanews24

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಕಟ್ಟಡದಲ್ಲಿ ಗುರುವಾರ ಸುರಂಗ ರೀತಿಯ ನಿರ್ಮಾಣವೊಂದು ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿದ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಈ ಸುರಂಗವು ವಿಧಾನಸಭಾ ಕಟ್ಟಡವನ್ನು ಕೆಂಪು ಕೋಟೆಗೆ ಸಂಪರ್ಕ ಕಲ್ಪಿಸುತ್ತದೆ ಹಾಗೂ ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೋರ್ಟಿಗೆ ಸಾಗಿಸುವ ಸಂದರ್ಭ ಜನರಿಂದ ವಿರೋಧ ಎದುರಾಗದಂತೆ ಈ ಸುರಂಗ ಮಾರ್ಗದಲ್ಲಿ ರಹಸ್ಯವಾಗಿ ಸಾಗಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

“ನಾನು 1993ರಲ್ಲಿ ಶಾಸಕನಾದಾಗ ಈ ಸುರಂಗದ ಬಗ್ಗೆ ಕೆಲವರು ಮಾತನಾಡುವುದನ್ನು ಕೇಳಿದ್ದೆ. ಆದರೆ ಯಾವುದೇ ಸ್ಪಷ್ಟತೆಯಿರಲಿಲ್ಲ. ಈಗ ಸುರಂಗದ ಬಾಯಿ ಪತ್ತೆಯಾಗಿದೆ ಆದರೆ ಇನ್ನೂ ಹೆಚ್ಚು ಅಗೆಯುವ ಕೆಲಸ ನಡೆಸಲಾಗುವುದಿಲ್ಲ. ಸುರಂಗದ ಮುಂದಿನ ಭಾಗಗಳು ಮೆಟ್ರೋ ಕಾಮಗಾರಿ ಹಾಗೂ ಒಳಚರಂಡಿಗಳಿಂದಾಗಿ ನಾಶವಾಗಿರಬಹುದು,” ಎಂದು ಅವರು ಹೇಳಿದರು.

“1912ರಲ್ಲಿ ರಾಜಧಾನಿಯನ್ನು ಬ್ರಿಟಿಷರು ಕೊಲ್ಕತ್ತಾದಿಂದ ದಿಲ್ಲಿಗೆ ವರ್ಗಾಯಿಸಿದ ನಂತರ 1926ರಲ್ಲಿ ಅದನ್ನು ನ್ಯಾಯಾಲಯವಾಗಿ ಬಳಸುತ್ತಿದ್ದ ಸಂದರ್ಭ ಈ ಸುರಂಗ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೋರ್ಟಿಗೆ ಹಾಜರುಪಡಿಸಲು ಬಳಸಲಾಗುತ್ತಿತ್ತು,” ಎಂದು ಹೇಳಿದರು.

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

1 hour ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

2 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

2 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

2 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

2 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

2 hours ago