ಹೊಸದುರ್ಗ :ಇನ್ಮುಂದೆ ತಮ್ಮ ಹೆಸರಿನ ಮುಂದೆ “ಡಾ” ಎಂದು ಬಳಸದಂತೆ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಸ್ವಾಮೀಜಿ ,ಮಠದ ಭಕ್ತರಿಗೆ, ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು, “ಇತ್ತೀಚಿಗೆ ಗೌರವ ಡಾಕ್ಟರೇಟ್ ಎನ್ನುವುದು ವ್ಯಾಪಾರೀಕರಣವಾಗಿದೆ. ದುಡ್ಡಿನ ಆಸೆಗಾಗಿ ಪ್ರಬಲರಿಗೆ ಹಾಗೂ ಹಣವಂತರಿಗೆ ಡಾಕ್ಟರೇಟ್ ಪದವಿಯನ್ನು ನೀಡುತ್ತಿದ್ದಾರೆ. ಜೊತೆಗೆ ಹಣವಂತರು ದುಡ್ಡು ಕೊಟ್ಟು ಡಾಕ್ಟರೇಟ್ ಪದವಿ ಪಡೆಯುತ್ತಿರುವುದು ಅಸಹ್ಯ ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ತರಕಾರಿ ವ್ಯಾಪಾರದಂತೆ ಗೌರವ ಡಾಕ್ಟರೇಟ್ ಪದವಿಗಳನ್ನು 10, 20 ಸಾವಿರಕ್ಕೆ ಮಾರಾಟ ಮಾಡಿಕೊಳ್ಳಲಾಗುತ್ತಿದೆ. ದುರ್ಬಲರು, ಶ್ರೀಮಂತರು ದುಡ್ಡು ಕೊಟ್ಟು ಡಾಕ್ಟರೇಟ್ ಪದವಿ ಪಡೆದು ಪ್ರತಿಷ್ಠೆ ತೋರಿಸುತ್ತಾರೆ. ಮಠಾಧೀಶರನ್ನು ಸಹ ಬಿಟ್ಟಿಲ್ಲ ಇಂತಹ ನಕಲಿಗಳಿಂದ ಅಸಲಿ, ಸಮರ್ಥರು, ಅರ್ಹರಿಗೆ ಆಗೌರವ ತರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೀಗಾಗಿ ನನಗೆ ನೀಡಿದ ಡಾಕ್ಟರೇಟ್ ಪದವಿಯನ್ನು ತಿರಸ್ಕರಿಸಲಾಗಿದೆ ಎಂದರು. ಅಲ್ಲದೇ ಡಾಕ್ಟರೇಟ್ ಪದವಿ ನೀಡುವುದಾಗಿ ಎರಡು ದೇಶಗಳಿಂದ ಬಂದಿರುವ ಮನವಿಯನ್ನು ಸ್ವೀಕರಿಸುವುದಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
2018ರಲ್ಲಿ ಗೌಡಾಶ್ರೀ ಶಾಂತವೀರ ಸ್ವಾಮೀಜಿಯವರ ಕೃಷಿ ಮತ್ತು ಸಮಾಜ ಸೇವೆಯನ್ನು ಗುರುತಿಸಿ, ಈ ಹಿಂದೆ 2018 ಮತ್ತು 2019ನೇ ಸಾಲಿನಲ್ಲಿ ಡಾಕ್ಟರೇಟ್ ಪದವಿಯನ್ನು ಮೈಸೂರಿನಲ್ಲಿ ನೀಡಿ ಗೌರವಿಸಲಾಗಿತ್ತು. ಆ ಬಳಿಕ ಶ್ರೀಗಳನ್ನು ಎಲ್ಲೆಡೆ ಉಲ್ಲೇಖಿಸುವಾಗ ಹೆಸರಿನಲ್ಲಿ ಡಾ. ಶಾಂತವೀರ ಸ್ವಾಮೀಜಿ ಎಂದು ಸೇರಿಸಲಾಗಿತ್ತು. ಆದರೆ ಇದೀಗ ಶ್ರೀಗಳು ಈ ರೀತಿ ಸೇರಿಸುವುದು ಬೇಡ ಎಂದು ತಿಳಿಸಿದ್ದಾರೆ. ಅಲ್ಲದೇ ತನಗೆ ಬಂದ ಗೌರವ ಡಾಕ್ಟರೇಟ್ ಪದವಿಗಳನ್ನು ನಯವಾಗಿ ತಿರಸ್ಕರಿಸಿರುವುದಾಗಿ ಹೇಳಿದ್ದಾರೆ.
ಮೈಸೂರು: ಮದುವೆ ನಿಶ್ಚಯವಾಗಿದ್ದ SBI ಉದ್ಯೋಗಿಗಳಿಬ್ಬರು ಆತ್ಮಹತ್ಯೆಗೆ ಶರಣು ಮೈಸೂರು: ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ SBI ಉದ್ಯೋಗಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆಗೆ…
ಬಂಟ್ವಾಳ : ಅಡುಗೆ ಸಿಬ್ಬಂದಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ವಿದ್ಯಾರ್ಥಿಗೆ ಸಿಎಂ ಮೆಚ್ಚುಗೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು…
ಸಂಘಪರಿವಾರದ ಪ್ರಮುಖರಿಗೆ ನಿರ್ಬಂಧ ವಿಧಿಸಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ಕ್ರಮ .. ನಿರ್ಬಂಧಗಳ ಮೂಲಕ ಸಂಘಪರಿವಾರದ ಮುಖಂಡರ ರಾಷ್ಟ್ರಭಕ್ತಿ ಮತ್ತು…
ತಾರ್ಕಿಕ ಅಂತ್ಯ ಕಾಣಲಿರುವ ಶಿರ್ವ ಡೇವಿಡ್ ಡಿ'ಸೋಜಾ ಕೊಲೆ ಪ್ರಕರಣ ಹೊರ ರಾಜ್ಯದಲ್ಲಿ ಮಧ್ಯವರ್ತಿಯ ಹುಡುಕಾಟ .. ಪೊಲೀಸರಿಂದ ಆರೋಪಿಗಳ…
ಬಿ.ಪಿ.ಎಲ್. ಪಡಿತರ ಚೀಟಿ ಆದಾಯ ಮಿತಿ ರೂ. 3 ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ ಉಡುಪಿ:…
ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ವಿಷ ಸೇವಿಸಿದ್ದ ಯುವತಿ.. ಪ್ರೇಯಸಿ ಆತ್ಮಹತ್ಯೆ ಸುದ್ದಿ ತಿಳಿದು ನೇಣಿಗೆ ಶರಣಾದ ಪ್ರಿಯಕರ ಧಾರವಾಡ: ಪ್ರೇಯಸಿ…