ಬೆಂಗಳೂರು: ದುಡ್ಡು ಮಾಡಬೇಕು, ಹಣ ಚೆಲ್ಲಬೇಕು, ಚುನಾವಣೆ ಗೆಲ್ಲಬೇಕು ಎಂಬುವುದಷ್ಟೇ ಬಿಜೆಪಿಗೆ ಇರುವ ಧ್ಯೇಯ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇಂದು ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್.. ಇಂದು ಚುನಾವಣೆ ನಡೆಯುತ್ತಿರುವ ಪಕ್ಷದ ವರಿಷ್ಠನಾಯಕರು ಹಾಗೂ ಮೂರು ಕ್ಷೇತ್ರಗಳ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ. ಒಳ್ಳೆಯ ಸ್ಪರ್ಧೆ ಒಡ್ಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ತಲೆ ತಗ್ಗಿಸುವ ರೀತಿ ಕೆಲಸ ಮಾಡ್ತಿದೆ, ಅವರಿಗೆ ಯಾವುದೇ ಕಾರ್ಯಕ್ರಮವಿಲ್ಲ, ಉತ್ತಮ ಉದ್ದೇಶವಿಲ್ಲ. CM ಆಡಿಯೋ ರೆಕಾರ್ಡಿಂಗ್ ಹೊರಬಂದಿದೆ, ಇವತ್ತು ಬೇರೆ ಬೇರೆ CD ಗಳು ಬರ್ತಿವೆ. ಎಲ್ಲಾ ಬೆಳವಣಿಗೆಗಳಿಂದ ರಾಜ್ಯ ಅಸ್ತವ್ಯಸ್ಥವಾಗ್ತಿದೆ. ಅದಾನಿ ಅಂಬಾನಿಯವರನ್ನ ಶ್ರೀಮಂತರ ಆದಾಯ ಹೆಚ್ಚಾಗುತ್ತಿದೆ, ಬಡವರು ಬಡವರಾಗೇ ಉಳಿಯುತ್ತಿದ್ದಾರೆ. ಕೆಂದ್ರ ಸರ್ಕಾರ ಅತ್ಯಂತ ಹೀನಾಯವಾದ ಆಡಳಿತವನ್ನ ನೀಡುತ್ತಿದೆ. ರಾಜ್ಯದಲ್ಲಿ ಸರ್ಕಾರ ಇದ್ಯೋ ಇಲ್ವೋ ಗೊತ್ತಿಲ್ಲ, ಡಿಪಾರ್ಟ್ ಮೆಂಟ್ಗಳನ್ನ ಲೂಟಿ ಮಾಡ್ತಿದ್ದಾರೆ, ಟ್ರಾನ್ಸ್ಫರ್ ದಂಧೆ ನಡೆಯುತ್ತಿದೆ. ಇದೆಲ್ಲವನ್ನೂ ಜನ ನೋಡ್ತಿದ್ದಾರೆ, ಜನ ಸರ್ಕಾರಕ್ಕೆ ತಕ್ಕ ಪಾಠವನ್ನ ಕಲಿಸೇ ಕಲಿಸುತ್ತಾರೆ. ನಾವು ಪ್ರತೀ ಕ್ಷೇತ್ರಕ್ಕೆ ಉತ್ತಮವಾದ ಅಭ್ಯರ್ಥಿಗಳನ್ನ ಹಾಕಿದ್ದೇವೆ, ಆದ್ದರಿಂದ ಸುಲಭವಾಗಿ ಗೆಲ್ಲುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಲಸಿಕೆ ಪಡೆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಕೋವಿಡ್ ಪಾಸಿಟಿವ್ -Vishwanews24
ಇದೇ ವೇಳೆ ತಮಿಳುನಾಡು ವಿಧಾನಸಭೆ ಚುನಾವಣೆಯ ಬಗ್ಗೆ ಮಾತನಾಡಿದ ಗುಂಡೂರಾವ್ ಬಿಜೆಪಿ ಜೊತೆ ಹೋಗಲು ಎಐಡಿಎಂಕೆಗೂ ಇಷ್ಟವಿಲ್ಲ. ಆದರೂ ಒತ್ತಾಯ ಮಾಡಿ ಅವರ ಜೊತೆ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ. ಯಾರು ವಿರುದ್ಧವಾಗಿ ಮಾತನಾಡ್ತಾರೆ ಅವರ ಮೇಲೆ ರೇಡ್ ಮಾಡಿಸೋದು, ಮೀಡಿಯಾಗಳ ಮೇಲೂ ಹಿಡಿತ ಸಾಧಿಸೋದು ಹೀಗೆ ಅಧಿಕಾರ ಹಿಡಿಯೋಕೆ ಎಲ್ಲಾ ಕುತಂತ್ರಗಳನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…
ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಶಾಂಭವಿ ಹೋಟೇಲ್ ಎದುರು ರಸ್ತೆಯಲ್ಲಿ…
ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ ಉಡುಪಿ, : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಆರ್ಥಿಕವಾಗಿ…
ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’ ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…
ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…