Featured

ದುಡ್ಡು ಮಾಡಬೇಕು, ಹಣ ಚೆಲ್ಲಬೇಕು, ಚುನಾವಣೆ ಗೆಲ್ಲಬೇಕು ಇಷ್ಟೇ ಬಿಜೆಪಿಗೆ ಇರುವ ಧ್ಯೇಯ : ದಿನೇಶ್​ ಗುಂಡೂರಾವ್​ -Vishwanews24

ದುಡ್ಡು ಮಾಡಬೇಕು, ಹಣ ಚೆಲ್ಲಬೇಕು, ಚುನಾವಣೆ ಗೆಲ್ಲಬೇಕು ಇಷ್ಟೇ ಬಿಜೆಪಿಗೆ ಇರುವ ಧ್ಯೇಯ : ದಿನೇಶ್​ ಗುಂಡೂರಾವ್​ -Vishwanews24

ಬೆಂಗಳೂರು: ದುಡ್ಡು ಮಾಡಬೇಕು, ಹಣ ಚೆಲ್ಲಬೇಕು, ಚುನಾವಣೆ ಗೆಲ್ಲಬೇಕು ಎಂಬುವುದಷ್ಟೇ ಬಿಜೆಪಿಗೆ ಇರುವ ಧ್ಯೇಯ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ತಿಳಿಸಿದ್ದಾರೆ.

ಇಂದು ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್​.. ಇಂದು ಚುನಾವಣೆ ನಡೆಯುತ್ತಿರುವ ಪಕ್ಷದ ವರಿಷ್ಠನಾಯಕರು ಹಾಗೂ ಮೂರು ಕ್ಷೇತ್ರಗಳ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ. ಒಳ್ಳೆಯ ಸ್ಪರ್ಧೆ ಒಡ್ಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ತಲೆ ತಗ್ಗಿಸುವ ರೀತಿ‌ ಕೆಲಸ ಮಾಡ್ತಿದೆ, ಅವರಿಗೆ ಯಾವುದೇ ಕಾರ್ಯಕ್ರಮವಿಲ್ಲ, ಉತ್ತಮ ಉದ್ದೇಶವಿಲ್ಲ. CM ಆಡಿಯೋ ರೆಕಾರ್ಡಿಂಗ್​ ಹೊರಬಂದಿದೆ, ಇವತ್ತು ಬೇರೆ ಬೇರೆ CD ಗಳು‌ ಬರ್ತಿವೆ. ಎಲ್ಲಾ ಬೆಳವಣಿಗೆಗಳಿಂದ ರಾಜ್ಯ ಅಸ್ತವ್ಯಸ್ಥವಾಗ್ತಿದೆ. ಅದಾನಿ ಅಂಬಾನಿಯವರನ್ನ ಶ್ರೀಮಂತರ ಆದಾಯ ಹೆಚ್ಚಾಗುತ್ತಿದೆ, ಬಡವರು ಬಡವರಾಗೇ ಉಳಿಯುತ್ತಿದ್ದಾರೆ. ಕೆಂದ್ರ ಸರ್ಕಾರ ಅತ್ಯಂತ ಹೀನಾಯವಾದ ಆಡಳಿತವನ್ನ ನೀಡುತ್ತಿದೆ. ರಾಜ್ಯದಲ್ಲಿ ಸರ್ಕಾರ ಇದ್ಯೋ ಇಲ್ವೋ ಗೊತ್ತಿಲ್ಲ, ಡಿಪಾರ್ಟ್​ ಮೆಂಟ್​ಗಳನ್ನ ಲೂಟಿ ಮಾಡ್ತಿದ್ದಾರೆ, ಟ್ರಾನ್ಸ್​ಫರ್​ ದಂಧೆ ನಡೆಯುತ್ತಿದೆ. ಇದೆಲ್ಲವನ್ನೂ ಜನ ನೋಡ್ತಿದ್ದಾರೆ, ಜನ ಸರ್ಕಾರಕ್ಕೆ ತಕ್ಕ ಪಾಠವನ್ನ ಕಲಿಸೇ ಕಲಿಸುತ್ತಾರೆ. ನಾವು ಪ್ರತೀ ಕ್ಷೇತ್ರಕ್ಕೆ ಉತ್ತಮವಾದ ಅಭ್ಯರ್ಥಿಗಳನ್ನ ಹಾಕಿದ್ದೇವೆ, ಆದ್ದರಿಂದ ಸುಲಭವಾಗಿ ಗೆಲ್ಲುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ :  ಲಸಿಕೆ ಪಡೆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಕೋವಿಡ್‌ ಪಾಸಿಟಿವ್ -Vishwanews24

ಇದೇ ವೇಳೆ ತಮಿಳುನಾಡು ವಿಧಾನಸಭೆ ಚುನಾವಣೆಯ ಬಗ್ಗೆ ಮಾತನಾಡಿದ ಗುಂಡೂರಾವ್​ ಬಿಜೆಪಿ ಜೊತೆ ಹೋಗಲು ಎಐಡಿಎಂಕೆಗೂ ಇಷ್ಟವಿಲ್ಲ. ಆದರೂ ಒತ್ತಾಯ ಮಾಡಿ ಅವರ ಜೊತೆ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ. ಯಾರು ವಿರುದ್ಧವಾಗಿ ಮಾತನಾಡ್ತಾರೆ ಅವರ ಮೇಲೆ ರೇಡ್​ ಮಾಡಿಸೋದು, ಮೀಡಿಯಾಗಳ ಮೇಲೂ ಹಿಡಿತ ಸಾಧಿಸೋದು ಹೀಗೆ ಅಧಿಕಾರ ಹಿಡಿಯೋಕೆ ಎಲ್ಲಾ ಕುತಂತ್ರಗಳನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

23 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

24 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

1 day ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

1 day ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

1 day ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

3 days ago