Featured

ದೆಹಲಿ ಟ್ರಿಪಲ್ ಮರ್ಡರ್ ಕೇಸ್ ಪ್ರಕರಣಕ್ಕೆ ಟ್ವಿಸ್ಟ್ : ಸ್ವಂತ ಮಗನಿಂದಲೇ ಪೈಶಾಚಿಕ ಕೃತ್ಯ  – vishwanews24

ದೆಹಲಿ ಟ್ರಿಪಲ್ ಮರ್ಡರ್ ಕೇಸ್ ಪ್ರಕರಣಕ್ಕೆ ಟ್ವಿಸ್ಟ್ : ಸ್ವಂತ ಮಗನಿಂದಲೇ ಪೈಶಾಚಿಕ ಕೃತ್ಯ

ದೆಹಲಿ : ದೆಹಲಿಯಲ್ಲಿ ನಡೆದ ಪತಿ , ಪತ್ನಿ ಮತ್ತು ಮಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು ಸ್ವಂತ ಮಗನೇ ತನ್ನ ತಂದೆ ತಾಯಿ ಮತ್ತು ಸಹೋದರಿಯನ್ನು ಕೊಲೆ ಮಾಡಿದ್ದಾನೆ.

ದೆಹಲಿಯಲ್ಲಿ ತ್ರಿವಳಿ ಕೊಲೆ ನಡೆದ 24 ಗಂಟೆಗಳಲ್ಲಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ದಂಪತಿ ಹಾಗೂ ಅವರ ಪುತ್ರಿ ಸೇರಿ ಮೂವರನ್ನು ಯಾರೋ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದರು. ಮಗ ಮಾತ್ರ ಜಾಗಿಂಗ್ ಹೋಗಿದ್ದರಿಂದ ಬಚಾವಾಗಿದ್ದ ಎಂದು ಎಲ್ಲರೂ ನಂಬಿದ್ದರು ಆದರೆ ಆಗಿದ್ದೇ ಬೇರೆ.

ದಕ್ಷಿಣ ದೆಹಲಿಯ ನೆಬ್ ಸರಾಯ್​ನಲ್ಲಿ ಬೆಳ್ಳಂಬೆಳಿಗ್ಗೆ ಮೂವರ ಕೊಲೆಯಾಗಿತ್ತು, ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ 23 ವರ್ಷದ ಮಗಳು ಕವಿತಾ ಅವರ ಶವಗಳು ನೆಬ್ ಸರೈನಲ್ಲಿರುವ ಅವರ ಮನೆಯಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿತ್ತು.

ಯಾರೋ ಅಪರಿಚಿತರು ಮನೆ ನುಗ್ಗಿ ಕೊಲೆ ಮಾಡಿದ್ದಾರೆ ಎಂದು ಮೊದಲು ವರದಿಯಾಗಿತ್ತು. ಅಲ್ಲದೆ ಕೊಲೆಯಾದ ವೇಳೆ ಮಗ ಜಾಗಿಂಗ್ ಹೋಗಿದ್ದರಿಂದ ಬದುಕಿದ್ದಾನೆ ಎಂದು ಜನ ತಿಳಿದುಕೊಂಡಿದ್ದರು. ಆದರೆ ಅಸಲಿ ವಿಚಾರನೇ ಬೇರೆಯಾಗಿತ್ತು, ಇದೀಗ ಕೊಲೆ ಹಿಂದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಅದು ಮತ್ಯಾರು ಅಲ್ಲ ಆ ದಂಪತಿಯ ಮಗನೇ ಎಂಬುದು ತಿಳಿದುಬಂದಿದೆ. ತಂದೆ ತನಗೆ ಅವಮಾನ ಮಾಡಿದ್ದರು, ಜತೆಗೆ ಅಷ್ಟೂ ಆಸ್ತಿಯನ್ನು ತನ್ನ ಸಹೋದರಿಗೆ ನೀಡುವುದಾಗಿ ಹೇಳಿದ್ದರು, ಹಾಗಾಗಿ ಅವರ ಮದುವೆ ವಾರ್ಷಿಕೋತ್ಸವದಂದೇ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದೆ ಎಂದು ಆತ ಬಾಯ್ಬಿಟ್ಟಿದ್ದಾನೆ.

ದಂಪತಿಯ ಪುತ್ರ ಅರ್ಜುನ್ ಈ ಕೊಲೆ ಆರೋಪಿ, ಈತ ದೆಹಲಿ ಒಲಿಂಪಿಕ್ ಸ್ಟೇಟ್ ಬಾಕ್ಸಿಂಗ್‌ನಲ್ಲಿ ಅರ್ಜುನ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಅರ್ಜುನ್ ಬೆಳಿಗ್ಗೆ 5:30ಕ್ಕೆ ಮನೆಯಿಂದ ವಾಕಿಂಗ್‌ಗೆ ಹೋಗಿದ್ದಾನೆ. ಬಳಿಕ 6.30ಕ್ಕೆ ಮನೆಗೆ ಬಂದಾಗ ಮನೆಯವರ ಕೊಲೆ ಮಾಡಲಾಗಿದೆ. ಕೂಡಲೇ ಪೊಲೀಸರಿಗೆ ಅರ್ಜುನ್ ಮಾಹಿತಿ ನೀಡಿದ್ದಾನೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಮುಂದುವರೆಸಿದಾಗ ಮನೆಯ ಸಿಸಿಟಿವಿಯಲ್ಲಿ ಮನೆಗೆ ಬೇರೆ ಯಾರೂ ನುಗ್ಗಿದ ಕುರಿತಂತೆ ಮಾಹಿತಿ ಇರಲಿಲ್ಲ. ಅಲ್ಲದೆ ಆರೋಪಿ ಅರ್ಜನ್ ಕೈಯಲ್ಲಿ ಗಾಯದ ಗುರುತುಗಳಿದ್ದವು, ಆತನನ್ನು ವಿಚಾರಿಸಿದ ವೇಳೆ ಸರಿಯಾದ ಮಾಹಿತಿ ನೀಡಿಲ್ಲ. ಬಳಿಕ ಪೊಲೀಸರಿಗೆ ಈತನ ಮೇಲೆ ಅನುಮಾನ ಬಂದು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ವಿಚಾರಣೆ ವೇಳೆ ಆರೋಪಿ ಅರ್ಜುನ್ ಅಪ್ಪ ತನಗೆ ನಿರಂತರವಾಗಿ ಅವಮಾನ ಮಾಡುತ್ತಿದ್ದರು, ಇತ್ತೀಚೆಗಷ್ಟೇ ಮನೆಯ ಹೊರಗಿನ ಕೆಲ ಸ್ನೇಹಿತರ ಮುಂದೆ ತಂದೆ ಅರ್ಜುನ್‌ಗೆ ಕಪಾಳಮೋಕ್ಷ ಮಾಡಿದ್ದ. ಇದರಿಂದ ಅರ್ಜುವ್ ಬೇಸರಗೊಂಡಿದ್ದ, ಅಲ್ಲದೆ ಅಪ್ಪ ತಂಗಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರೂ, ಮತ್ತು ಆಸ್ತಿಯನ್ನು ತಂಗಿಗೆ ನೀಡುತ್ತಾರೆ ಎಂಬ ಸಂಶಯ ಕೂಡ ಇತ್ತು, ಇದರಿಂದ ಕೋಪಗೊಂಡ ಆತ ಡಿಸೆಂಬರ್ 4 ರಂದು ಮುಂಜಾನೆ 5 ಗಂಟೆಗೆ ಕೊಲೆಗೆ ಯೋಜನೆ ರೂಪಿಸಿ ಇಡೀ ಕುಟುಂಬವನ್ನೇ ಕೊಂದು ಹಾಕಿದ್ದ. ಮೊದಲು ತಂಗಿಯನ್ನು ಕೊಲೆ ಮಾಡಿದ ಬಳಿಕ ತಾಯಿಯನ್ನು ಕೊಂದು ಮೊದಲ ಮಹಡಿಯಲ್ಲಿದ್ದ ಅಪ್ಪನ್ನು ಕೊಲೆ ಮಾಡಿದ್ದಾನೆ.

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

16 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

16 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

17 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

17 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

17 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

2 days ago