Featured

ದೇವರ ಫೋಟೋಗಳನ್ನು ಎಸೆದು ವಾಸ್ತವದ ನಡುವೆ ಬದುಕಿ ; ರಾಮ ಮಂದಿರ ಕಟ್ಟುವವರಿಗೆ ವೋಟ್ ಹಾಕ್ಬೇಡಿ : ವಿವಾದಾತ್ಮಕ ಹೇಳಿಕೆ ನೀಡಿದ ಪ್ರೊ. ಕೆ.ಎಸ್. ಭಗವಾನ್

ಮೈಸೂರು: ಶಾಲಾ, ಕಾಲೇಜುಗಳಲ್ಲಿ ಓದುವ ಇತಿಹಾಸದಲ್ಲಿನ ಪಠ್ಯಗಳು ಶೇಕಡ 50 ರಷ್ಟು ಸುಳ್ಳು. ಬುದ್ಧ ಬರುವುದಕ್ಕೆ ಮುನ್ನ ಹಿಂದೂ ಧರ್ಮ ಮೂಢನಂಬಿಕೆ, ಕಂದಾಚಾರದಿಂದ ತುಂಬಿದ ಧರ್ಮ ಆಗಿತ್ತು ಎಂದು ವಿವೇಕಾನಂದರೇ ಹೇಳಿದ್ದಾರೆ ಅಂತಾ ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಹಿಷ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್​. ಭಗವಾನ್​, ಹರಪ್ಪ ನಾಗರಿಕತೆಯಲ್ಲೇ ಶಿವನ ಹೆಸರಿದೆ. ಶಿವ ಯಜ್ಞ, ಯಾಗಗಳನ್ನು ನಿರಾಕರಿಸಿದವನು. ದೇಶದ ಮೂಲ ದೇವರಾದ ಶಿವನ ದೇವಸ್ಥಾನ ಕಟ್ಟುತ್ತಿಲ್ಲ, ಆದ್ರೆ ಜಾತಿ, ವರ್ಣಭೇದ ಮಾಡಿದ ರಾಮನ ದೇವಸ್ಥಾನ ನಿರ್ಮಾಣ ಮಾಡಲು ಹೊರಟಿದ್ದಾರೆ. ಇರುವುದು ಎರಡು ಜಾತಿ.. ಜನಿವಾರ ಹಾಕಿದವರು, ಜನಿವಾರ ಹಾಕದವರು. ರಾಮಾಯಣದಲ್ಲಿ ರಾಮನ ಬಾಯಲ್ಲಿ ಬುದ್ಧನನ್ನು ಬೈಯಿಸಿದ್ದಾರೆ. ಆದರೆ ಪುರಾಣದಲ್ಲಿ ರಾಮನ ಒಂದು ಅವತಾರ ಬುದ್ಧ ಅಂತ ಹೇಳುತ್ತಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮನುವಾದಿಗಳನ್ನ ತಿರಸ್ಕರಿಸಿ. ರಾಮನ ದೇವಸ್ಥಾನ ಕಟ್ಟಲು ಹೊರಟಿರೋ ಮಂದಿಗೆ ಓಟ್ ಹಾಕ್ಬೇಡಿ. ರಾಮ ಮಂದಿರ ಕಟ್ಟುವ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಿ. ರಾಮ ಮಂದಿರ ಕಟ್ಟುವ ಬದಲು ಹೊಸ ಡ್ಯಾಂಗಳನ್ನ ಕಟ್ಟಿ. ದೇಶದ ಮೇಲೆ 27 ಬಾರಿ ವಿದೇಶಿಯರಿಂದ ಆಕ್ರಮಣ  ಆಯ್ತು. ನಿಮ್ಮ ರಾಮ, ಚಾಮುಂಡೇಶ್ಚರಿ, ಶಿವ ಎಲ್ಲಿ ಹೋಗಿದ್ರು, ಯಾಕೆ ರಕ್ಷಣೆ ಮಾಡಲಿಲ್ಲ? ಹೀಗಾಗಿ ದೇವರ ಪೊಟೋಗಳನ್ನ ಎಸೆದು ವಾಸ್ತವದ ನಡುವೆ ಬದುಕಿ, ನಮಗೆ ರಾಮರಾಜ್ಯ ಬೇಡ, ಭೀಮರಾಜ್ಯ ಬೇಕು  ಎಂದು ಹೇಳಿದ್ದಾರೆ.

 

 

Vishwa News 24

Recent Posts

ಯುವಜನರಲ್ಲಿ ಹೆಚ್ಚುತ್ತಿರುವ HIV ಸೋಂಕು: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯ ..! vishwanews24

ಯುವಜನರಲ್ಲಿ ಹೆಚ್ಚುತ್ತಿರುವ HIV ಸೋಂಕು: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯ ..! ಬೆಂಗಳೂರು: ಯುವ ಜನರಲ್ಲಿ ಹೆಚ್‌ಐವಿ ಸೋಂಕಿನ…

1 hour ago

ಸಚಿವ ಯು.ಟಿ. ಖಾದರ್ ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ – vishwanews24

ಸಚಿವ ಯು.ಟಿ. ಖಾದರ್ ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

2 hours ago

ಸಿ. ಟಿ. ರವಿ ಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಸರಕಾರ : ಯಶ್ಪಾಲ್ ಸುವರ್ಣ – vishwanews24

ಸಿ. ಟಿ. ರವಿ ಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಸರಕಾರ :…

2 hours ago

ಮಂಗಳೂರು: ಡಿವೈಡರ್‌ಗೆ ಬಸ್  ಡಿಕ್ಕಿ; 35 ಪ್ರಯಾಣಿಕರು ಅಪಾಯದಿಂದ ಪಾರು – vishwanews24

ಮಂಗಳೂರು: ಡಿವೈಡರ್‌ಗೆ ಬಸ್  ಡಿಕ್ಕಿ; 35 ಪ್ರಯಾಣಿಕರು ಅಪಾಯದಿಂದ ಪಾರು ಮಂಗಳೂರು : ಖಾಸಗಿ ಎಕ್ಸ್‌ಪ್ರೆಸ್ ಬಸ್ಸೊಂದು ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ…

2 hours ago

ಕಾಪು  : ಟೈಮಿಂಗ್ಸ್ ವಿಚಾರದಲ್ಲಿ ಜಗಳ: ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ – vishwanews24

 ಕಾಪು  : ಟೈಮಿಂಗ್ಸ್ ವಿಚಾರದಲ್ಲಿ ಜಗಳ: ಎಕ್ಸ್‌ಪ್ರೆಸ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ ಕಾಪು: ಎರಡು ಎಕ್ಸ್‌ಪ್ರೆಸ್ ಬಸ್ಸುಗಳು ಪ್ರಯಾಣಿಕರು…

2 hours ago

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ – vishwanews24

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…

2 days ago