ದೇಶಕ್ಕಾಗಿ ಆರ್​ಎಸ್​ಎಸ್​ನ ಯಾರು ತಮ್ಮ ಪ್ರಾಣತ್ಯಾಗ ಮಾಡಿಲ್ಲ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರೂರತ್ವ ತುಂಬಿದೆ : ಸಿದ್ದರಾಮಯ್ಯ -Vishwanews24

ಮೈಸೂರು: “ಸಾವರ್ಕರ್​​ ಆರ್​ಎಸ್​ಎಸ್​​ನ ಆರಾಧ್ಯ ದೈವ, ಆತನ ಕೊಡುಗೆ ದೇಶಕ್ಕೆ ಶೂನ್ಯ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದಲ್ಲಿ ನಡೆದ ಸಿಎಎ ವಿರುದ್ಧದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ಅವನ ಹೆಸರು ದಾಮೋದರ ಸಾವರ್ಕರ್. ಆದರೆ, ಆರ್​ಎಸ್​​ಎಸ್​​ನವರು ಅವನಿಗೆ ವೀರ ಸಾವರ್ಕರ್​​ ಎಂದು ಹೆಸರಿಟ್ಟಿದ್ದಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ ಜೈಲಿಗೆ ಹೋಗಿಲ್ಲ. ಸಾವರ್ಕರ್ ತನ್ನ ಇಂಗ್ಲೆಂಡ್‌ ಮೂಲದ ಸ್ನೇಹಿತನ ಕಾರಣಕ್ಕಾಗಿ ಜೈಲಿಗೆ ಹೋಗಿದ್ದ ಎಂದರು.

ಆರ್​ಎಸ್​​ಎಸ್​​​ನಲ್ಲಿ ಒಬ್ಬನೇ ಒಬ್ಬ ಕೂಡ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ದೇಶಕ್ಕಾಗಿ ಆರ್​ಎಸ್​ಎಸ್​ನ ಯಾರು ತಮ್ಮ ಪ್ರಾಣತ್ಯಾಗ ಮಾಡಿಲ್ಲ. ಅಂಡಮಾನ್​​ ಜೈಲಿಗೆ ಹೋಗಿದ್ದ ಸಾವರ್ಕರ್​​​​​, ನಾನು ತಪ್ಪು ಮಾಡುವುದಿಲ್ಲ. ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಬ್ರಿಟೀಷರಿಗೆ ಮನವಿ ಪತ್ರ ಬರೆದಿದ್ದ ಎಂದರು ಸಿದ್ದರಾಮಯ್ಯ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರೂರತ್ವ ತುಂಬಿದೆ. ಇಲ್ಲಿ ಮಾನವೀಯತೆಗೆ ಬೆಲೆ ಇಲ್ಲ. ಕೇವಲ ಕ್ರೂರತೆ ತುಂಬಿರುವ ಸರ್ಕಾರ. ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿಸುವವರು ದೇಶದ್ರೋಹಿಗಳು ಎನ್ನುವುದಾದರೆ ಸಂವಿಧಾನದ ವಿರುದ್ಧ ಇರುವ ನಿಮ್ಮನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದ್ದಾರೆ.

 

Vishwa News 24

Recent Posts

ಡಿವೈಡರ್‌ಗೆ ಕಾರು ಡಿಕ್ಕಿ : ಖ್ಯಾತ ನಟಿ  ಮಾಡೆಲ್ ಹರ್ಷಿಲ್ ಕಾಲಿಯಾ ಸಾವು – vishwanews24

ಡಿವೈಡರ್‌ಗೆ ಕಾರು ಡಿಕ್ಕಿ :  ಭೀಕರ ಅಪಘಾತದಲ್ಲಿ ಖ್ಯಾತ ನಟಿ  ಮಾಡೆಲ್ ಹರ್ಷಿಲ್ ಕಾಲಿಯಾ ಸಾವು ಜೈಪುರ: ಜೈಪುರದಲ್ಲಿ ಕಾರು…

8 minutes ago

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

6 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

6 days ago