ಉಳ್ಳಾಲ: ದೇಶವನ್ನಾಳುವ ಸರಕಾರಕ್ಕೆ ದೇಶದ ದಲಿತರು, ಬಿಲ್ಲವರು, ಬಂಟರ ಮೇಲೆ ವಿರೋಧವಿದೆ. ಶೂದ್ರ ಸಮುದಾಯ ತಮ್ಮ ಪಕ್ಕಕ್ಕೆ ಬಂತು ಅನ್ನುವ ಹೆದರಿಕೆಯಿಂದ ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಹೇಳಿದರು.
ಅವರು ಪೌರತ್ವ ಸಂರಕ್ಷಣಾ ಸಮಿತಿ ಮಂಜನಾಡಿ ವತಿಯಿಂದ ಮಂಜನಾಡಿ ಪೊಟ್ಟೋಳಿಕೆ ಮೈದಾನದಲ್ಲಿ ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ಮಸೂದೆಗಳ ವಿರುದ್ದ ಶುಕ್ರವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಸಲ್ಮಾನರು ಭಯಪಟ್ಟಿದ್ದೇವೆ ಅಂತ ಅಮಿತ್ ಷಾ ಅವರಿಗೆ ಯಾರು ಹೇಳಿದ್ದಾರೆ. ಹಿಂದೆ ದೇಶಕ್ಕೆ ಆಪತ್ತು ಬಂದಾಗ ಹೋರಾಟ ನಡೆಸಿರುವುದು ಮುಸಲ್ಮಾನರೇ ಅನ್ನುವುದನ್ನು ಗಮನದಲ್ಲಿಟ್ಟುಕೊಳ್ಳಲಿ. ಹಿಂದೂ ಅನ್ನುವುದು ಒಡೆಯುವ ಧರ್ಮ ಅಲ್ಲ, ಜೋಡಿಸುವ ಧರ್ಮವಾಗಿದೆ. ದೇಶದ ಉನ್ನತ ಬ್ರಾಹ್ಮಣರೆಂದರೆ ಚಿಟ್ಪಾವನ್ ಆಗಿರುತ್ತಾರೆ.
ಕಲ್ಲಡ್ಕ ಭಟ್ ತಾನು ಮದುವೆಯಾಗುವಾಗ ಏಳು ಸುತ್ತು ಮಾತ್ರ ಹಾಕಿರುವುದು ಅನ್ನುವುದನ್ನು ತಲೆಯಲ್ಲಿಟ್ಟುಕೊಳ್ಳಲಿ. ಅದನ್ನು ಹೊರತುಪಡಿಸಿ ಯಾವುದೇ ದಾಖಲೆಗಳನ್ನು ತಯಾರಿಸಿಲ್ಲ, ಅನ್ನುವುದು ತಲೆಯಲ್ಲಿರಲಿ. ಶೃಂಗೇರಿ ಕ್ಷೇತ್ರವನ್ನು ಉಳಿಸಿದ ಟಿಪ್ಪು ಸುಲ್ತಾನನ ಸ್ಮರಣೆಯಾಗಿ ಈಗಲೂ ಕ್ಷೇತ್ರದಲ್ಲಿ ಸಲಾಂ ಆರತಿ ನಡೆಯುತ್ತಾ ಇದೆ. ಮುಸ್ಲಿಂ ಸಮುದಾಯವನ್ನು ಒಂದುಗೂಡಿಸುವ ಮೂಲಕ ಕಳೆದ 70 ವರ್ಷಗಳಲ್ಲಿ ಆಗದ ಸ್ಥಿತಿಯನ್ನು ಮೋದಿ ಮತ್ತು ಷಾ ಕಳೆದ ಮೂರು ತಿಂಗಳಲ್ಲಿ ನಡೆಸಿರುವುದು ಅಭಿನಂದನೀಯ.
ತನ್ನನ್ನು ಮುಸ್ಲಿಂ ನಾಯಕನೆಂದು ಎಲ್ಲಿಯೂ ಬಣ್ಣಿಸದಿರಿ. ತಾನೊಬ್ಬ ರಾಷ್ಟ್ರನಾಯಕ. ಈ ಹಿಂದೆ ಅಡ್ವಾಣಿಯವರು ಮುಸ್ಲಿಮರ ಮತಾಂತರದ ವಿರುದ್ಧ ದನಿ ಎತ್ತಿದಾಗ, ತಮ್ಮ ಸಮುದಾಯದಲ್ಲಿ ಹುಟ್ಟಿಸಿದವರನ್ನೇ ನೋಡಲು ಸಾಧ್ಯವಿಲ್ಲ, ಇನ್ನು ಹೊರಗಿನವರು ಯಾಕೆ?. ತನಗೇ 11 ಮಕ್ಕಳಿದ್ದಾರೆ ಎಂದು ಲೇವಡಿಯಾಡಿದ್ದರು. 800 ವರ್ಷ ದೇಶವನ್ನು ಮುಸಲ್ಮಾನರು ಆಳಿದರೂ, ಸಮುದಾಯದ ಸಂಖ್ಯೆ ಕೇವಲ 30 ಕೋಟಿ ಮಾತ್ರ ಇದ್ದಾರೆ. ಪ್ರಧಾನಿ ಮೋದಿ ಕೈಯಲ್ಲಿ ದೇಶವನ್ನು ಕೊಟ್ಟು, ಹುಚ್ಚನ ಕೈಯಲ್ಲಿ ಷೇವಿಂಗ್ ಸೆಟ್ ಕೊಟ್ಟಂತಾಗಿದೆ. ಎಲ್ಲಿ ಕುತ್ತಿಗೆಗೆ ಚೂರಿ ಹಾಕುವನೋ? ಅಥವಾ ಗಡ್ಡ ತೆಗೆಯುವನೋ ಅನ್ನುವ ಭಯ ಕಾಡುವಂತಾಗಿದೆ. ಇಸ್ಲಾಂ ಹೋರಾಟ ಆಗುತ್ತಿದ್ದಲ್ಲಿ ಹಸಿರು ಧ್ವಜ ಆಗುತ್ತಿತ್ತು. ದೇಶದ ಹೋರಾಟ ಆಗುವುದರಿಂದ ರಾಷ್ಟ್ರ ಧ್ವಜ ಹಿಡಿದುಕೊಂಡಿದ್ದೇವೆ. ಮೆರವಣಿಗೆಗೆ ಎಲ್ಲಾ ಸಮಾಜದವರನ್ನು ಕರೆಯಬೇಕಿದೆ ಎಂದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…