ದೇಶಕ್ಕೆ ಆಪತ್ತು ಬಂದಾಗ ಹೋರಾಟ ನಡೆಸಿರುವುದು ಮುಸಲ್ಮಾನರು : ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ -Vishwanews24

ಉಳ್ಳಾಲ: ದೇಶವನ್ನಾಳುವ ಸರಕಾರಕ್ಕೆ ದೇಶದ ದಲಿತರು, ಬಿಲ್ಲವರು, ಬಂಟರ ಮೇಲೆ ವಿರೋಧವಿದೆ. ಶೂದ್ರ ಸಮುದಾಯ ತಮ್ಮ ಪಕ್ಕಕ್ಕೆ ಬಂತು ಅನ್ನುವ ಹೆದರಿಕೆಯಿಂದ ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಹೇಳಿದರು.

ಅವರು ಪೌರತ್ವ ಸಂರಕ್ಷಣಾ ಸಮಿತಿ ಮಂಜನಾಡಿ ವತಿಯಿಂದ ಮಂಜನಾಡಿ ಪೊಟ್ಟೋಳಿಕೆ ಮೈದಾನದಲ್ಲಿ ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ಮಸೂದೆಗಳ ವಿರುದ್ದ ಶುಕ್ರವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮುಸಲ್ಮಾನರು ಭಯಪಟ್ಟಿದ್ದೇವೆ ಅಂತ ಅಮಿತ್ ಷಾ ಅವರಿಗೆ ಯಾರು ಹೇಳಿದ್ದಾರೆ. ಹಿಂದೆ ದೇಶಕ್ಕೆ ಆಪತ್ತು ಬಂದಾಗ ಹೋರಾಟ ನಡೆಸಿರುವುದು ಮುಸಲ್ಮಾನರೇ ಅನ್ನುವುದನ್ನು ಗಮನದಲ್ಲಿಟ್ಟುಕೊಳ್ಳಲಿ. ಹಿಂದೂ ಅನ್ನುವುದು ಒಡೆಯುವ ಧರ್ಮ ಅಲ್ಲ, ಜೋಡಿಸುವ ಧರ್ಮವಾಗಿದೆ. ದೇಶದ ಉನ್ನತ ಬ್ರಾಹ್ಮಣರೆಂದರೆ ಚಿಟ್ಪಾವನ್ ಆಗಿರುತ್ತಾರೆ.

ಕಲ್ಲಡ್ಕ ಭಟ್ ತಾನು ಮದುವೆಯಾಗುವಾಗ ಏಳು ಸುತ್ತು ಮಾತ್ರ ಹಾಕಿರುವುದು ಅನ್ನುವುದನ್ನು ತಲೆಯಲ್ಲಿಟ್ಟುಕೊಳ್ಳಲಿ. ಅದನ್ನು ಹೊರತುಪಡಿಸಿ ಯಾವುದೇ ದಾಖಲೆಗಳನ್ನು ತಯಾರಿಸಿಲ್ಲ, ಅನ್ನುವುದು ತಲೆಯಲ್ಲಿರಲಿ. ಶೃಂಗೇರಿ ಕ್ಷೇತ್ರವನ್ನು ಉಳಿಸಿದ ಟಿಪ್ಪು ಸುಲ್ತಾನನ ಸ್ಮರಣೆಯಾಗಿ ಈಗಲೂ ಕ್ಷೇತ್ರದಲ್ಲಿ ಸಲಾಂ ಆರತಿ ನಡೆಯುತ್ತಾ ಇದೆ. ಮುಸ್ಲಿಂ ಸಮುದಾಯವನ್ನು ಒಂದುಗೂಡಿಸುವ ಮೂಲಕ ಕಳೆದ 70 ವರ್ಷಗಳಲ್ಲಿ ಆಗದ ಸ್ಥಿತಿಯನ್ನು ಮೋದಿ ಮತ್ತು ಷಾ ಕಳೆದ ಮೂರು ತಿಂಗಳಲ್ಲಿ ನಡೆಸಿರುವುದು ಅಭಿನಂದನೀಯ.

ತನ್ನನ್ನು ಮುಸ್ಲಿಂ ನಾಯಕನೆಂದು ಎಲ್ಲಿಯೂ ಬಣ್ಣಿಸದಿರಿ. ತಾನೊಬ್ಬ ರಾಷ್ಟ್ರನಾಯಕ. ಈ ಹಿಂದೆ ಅಡ್ವಾಣಿಯವರು ಮುಸ್ಲಿಮರ ಮತಾಂತರದ ವಿರುದ್ಧ ದನಿ ಎತ್ತಿದಾಗ, ತಮ್ಮ ಸಮುದಾಯದಲ್ಲಿ ಹುಟ್ಟಿಸಿದವರನ್ನೇ ನೋಡಲು ಸಾಧ್ಯವಿಲ್ಲ, ಇನ್ನು ಹೊರಗಿನವರು ಯಾಕೆ?. ತನಗೇ 11 ಮಕ್ಕಳಿದ್ದಾರೆ ಎಂದು ಲೇವಡಿಯಾಡಿದ್ದರು. 800 ವರ್ಷ ದೇಶವನ್ನು ಮುಸಲ್ಮಾನರು ಆಳಿದರೂ, ಸಮುದಾಯದ ಸಂಖ್ಯೆ ಕೇವಲ 30 ಕೋಟಿ ಮಾತ್ರ ಇದ್ದಾರೆ. ಪ್ರಧಾನಿ ಮೋದಿ ಕೈಯಲ್ಲಿ ದೇಶವನ್ನು ಕೊಟ್ಟು, ಹುಚ್ಚನ ಕೈಯಲ್ಲಿ ಷೇವಿಂಗ್ ಸೆಟ್ ಕೊಟ್ಟಂತಾಗಿದೆ. ಎಲ್ಲಿ ಕುತ್ತಿಗೆಗೆ ಚೂರಿ ಹಾಕುವನೋ? ಅಥವಾ ಗಡ್ಡ ತೆಗೆಯುವನೋ ಅನ್ನುವ ಭಯ ಕಾಡುವಂತಾಗಿದೆ. ಇಸ್ಲಾಂ ಹೋರಾಟ ಆಗುತ್ತಿದ್ದಲ್ಲಿ ಹಸಿರು ಧ್ವಜ ಆಗುತ್ತಿತ್ತು. ದೇಶದ ಹೋರಾಟ ಆಗುವುದರಿಂದ ರಾಷ್ಟ್ರ ಧ್ವಜ ಹಿಡಿದುಕೊಂಡಿದ್ದೇವೆ. ಮೆರವಣಿಗೆಗೆ ಎಲ್ಲಾ ಸಮಾಜದವರನ್ನು ಕರೆಯಬೇಕಿದೆ ಎಂದರು.

 

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

5 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

6 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

1 day ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago