ಹೈದರಾಬಾದ್: ನಾಯಿಗಳಿಗಾಗಿಯೇ ಮೀಸಲಾದ ದೇಶದ ಮೊದಲ ಉದ್ಯಾನವನ ಇಲ್ಲಿನ ಕೊಂಡಾಪುರ್ ಪ್ರದೇಶದಲ್ಲಿ ಉದ್ಘಾಟನೆಗೆ ಅಣಿಯಾಗಿದೆ. 1.3 ಎಕರೆ ಪ್ರದೇಶದಲ್ಲಿರುವ ಈ ಕೇಂದ್ರ ನಾಯಿಗಳಿಗೆ ಅನುಕೂಲವಾದ ನಡಿಗೆಪಥ, ವಿಹಾರಕ್ಕೆ ಅನುಕೂಲವಾದ ಜಾಗ, ಕ್ಲಿನಿಕ್ ಸಹ ಒಳಗೊಂಡಿದೆ.
‘ನಾಯಿಗಳಿಗೆ ತರಬೇತಿ ಮತ್ತು ವ್ಯಾಯಾಮಕ್ಕೆ ಅನುಕೂಲವಾದ ಉಪಕರಣ, ಈಜುಕೊಳ, ಎರಡು ಹುಲ್ಲುಗಾವಲು ಪ್ರದೇಶ, ವರ್ತುಲ ಕ್ರೀಡಾಂಗಣ, ಆಟೋಟ ಕೇಂದ್ರಗಳು ಇದರಲ್ಲಿವೆ. ದೊಡ್ಡ ಮತ್ತು ಚಿಕ್ಕದಾದ ನಾಯಿಗಳಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಎಚ್‌ಎಂಸಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ಒಂದು ವರ್ಷದಿಂದ ಈ ಉದ್ಯಾನ ನಿರ್ಮಾಣವಾಗುತ್ತಿದ್ದು, ವಾಸ್ತುಶಿಲ್ಪ ಹಾಗೂ ಶ್ವಾನಪ್ರೇಮಿಗಳ ಸಲಹೆ ಮೇರೆಗೆ ಆಧುನಿಕ ಉಪಕರಣ ಹಾಗೂ ಕೇಂದ್ರದ ವಿನ್ಯಾಸ ಮಾಡಲಾಗಿದೆ.
ಹತ್ತು ದಿನದಲ್ಲಿ ಉದ್ಘಾಟನೆ: ಮುಂದಿನ ಹತ್ತು ದಿನಗಳಲ್ಲಿ ತೆಲಂಗಾಣ ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ಉದ್ಘಾಟಿಸಲಿದ್ದಾರೆ. ಇದರ ಯಶಸ್ಸನ್ನು ಆಧರಿಸಿ, ನಗರದ ಪೂರ್ವಭಾಗದಲ್ಲಿ ಮತ್ತೊಂದು ಉದ್ಯಾನವನ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲು ಜಿಎಚ್‌ಎಂಸಿ ನಿರ್ಧರಿಸಿದೆ.
ನಗರದಲ್ಲಿ 2.5 ಲಕ್ಷ ನಾಯಿ:ಜಿಎಚ್‌ಎಂಸಿ ನಡೆಸಿದ ಸಮೀಕ್ಷೆ ಪ್ರಕಾರ, ಪಶ್ಚಿಮ ವಲಯ ಮತ್ತು ಕೇಂದ್ರ ವಲಯದಲ್ಲಿ 2.5 ಲಕ್ಷ ಮಂದಿ ನಾಯಿಗಳನ್ನು ಸಾಕುತ್ತಿದ್ದಾರೆ. ನಗರದ ಕೇಂದ್ರಭಾಗದಲ್ಲಿ ಉದ್ಯಾನ ಇರುವ ಕಾರಣ ಇಲ್ಲಿಗೆ ನಾಯಿಗಳನ್ನು ಕರೆತರುವುದು ಸುಲಭ. ಉಳಿದಂತೆ ಮಾಮೂಲಿ ಉದ್ಯಾನದಲ್ಲಿ ನಾಯಿಗಳ ಓಡಾಟವನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…