ಕೇಂದ್ರ ಚುನಾವಣಾ ಆಯೋಗ ಮಾರ್ಚ್ 10ರಂದು ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿತ್ತು. ಲೋಕಸಭೆ ಚುನಾವಣೆಗಳ ಜತೆಗೆ ಅರುಣಾಚಲಪ್ರದೇಶ, ಆಂದ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಯಲಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ತಮಗೆ ಟಿಕೆಟ್ ನಿರಾಕರಿಸಿದರೂ ಸ್ವತಂತ್ರವಾಗಿ ಸ್ಪರ್ಧಿಸುವುದು ಖಚಿತ ಎಂದು ಈ ಮೊದಲು ಸಾಕ್ಷಿ ಮಹಾರಾಜ್ ಹೇಳಿದ್ದರು. ತಮಗೆ ಪಕ್ಷ ಟಿಕೆಟ್ ನಿರಾಕರಿಸುವುದು ಉತ್ತಮ ಆಯ್ಕೆಯಾಗದು ಎಂದು ಸಾಕ್ಷಿ ಮಹಾರಾಜ್ ಎಚ್ಚರಿಸಿದ್ದರು.