Featured

ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸೇನಾ ಪೊಲೀಸ್‌ ಹುದ್ದೆಗೆ ಮಹಿಳೆಯರನ್ನು ನೇಮಿಸಲು ಅರ್ಜಿ ಆಹ್ವಾನ – Vishwanews24

ಹೊಸದಿಲ್ಲಿ:ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಿಲಿಟರಿ ಪೊಲೀಸ್‌ ಸೇವೆಗೆ ಮಹಿಳೆಯರನ್ನು ನೇಮಿಸಿಕೊಳ್ಳುವ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, 100 ಪೊಲೀಸರ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಲಾಗಿದೆ.

ಸೇನೆಯಲ್ಲಿ ಈವರೆಗೆ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರು ಇನ್ನು ಪೊಲೀಸರಾಗಿಯೂ ಕೆಲಸ ಮಾಡಬಹುದು. ಪುರುಷರಿಗೆ ಸಮಾನವಾಗಿ ಮಹಿಳೆ ಯರಿಗೆ ಸೇನೆಯಲ್ಲಿ ಅವಕಾಶ ಕಲ್ಪಿಸುತ್ತಿಲ್ಲ ಎಂಬ ಆರೋಪದ ಮಧ್ಯೆ ಇದು ಮಹತ್ವದ ಮೈಲುಗಲ್ಲಾಗಿದ್ದು, ಇದೇ ಮೊದಲ ಬಾರಿಗೆ ಸೇನಾ ಪೊಲೀಸ್‌ ಹುದ್ದೆಗೆ ಮಹಿಳೆಯ ರನ್ನು ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.

ಗುರುವಾರದಿಂದ ಆನ್‌ಲೈನ್‌ ನೋಂದಣಿ ಆರಂಭವಾಗಿದ್ದು, ಜೂನ್‌ 8ರ ವರೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಮಹಿಳೆಯರನ್ನು ನೇಮಿಸುವ ಪ್ರಕ್ರಿಯೆಯನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್‌ ಅಧಿಕಾರ ವಹಿಸಿಕೊಂಡಾ ಗಲೇ ಆರಂಭಿಸಿದ್ದರು ಎಂದು ಸೇನೆ ಮೂಲಗಳು ತಿಳಿಸಿವೆ.

ಕಳೆದ ಜನವರಿಯಲ್ಲಿ ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದು, ಮಿಲಿಟರಿ ಪೊಲೀಸ್‌ ವಿಭಾಗದಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳಲು ನಾವು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದರು.

ಮಿಲಿಟರಿ ಪೊಲೀಸರು ಸಾಮಾನ್ಯ ಯೋಧರಂತೆ ಗಡಿಯಲ್ಲಿ ನಿಂತು ಕಾರ್ಯಾಚರಣೆ ಮಾಡುವ ಸಾಧ್ಯತೆ ಕಡಿಮೆ. ಈ ಹುದ್ದೆಗಳಿಗೆ ಮಹಿಳೆಯರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಪ್ರಕ್ರಿಯೆಯಾಗಿದೆ.

ಮಹಿಳಾ ಪೊಲೀಸರ ಕರ್ತವ್ಯವೇನು? 
ಮಿಲಿಟರಿಯಲ್ಲಿ ಪೊಲೀಸರಂತೆ ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಸೇನೆಯಲ್ಲಿ ಉತ್ತಮ ನಿಯಮಾವಳಿ ಮತ್ತು ಶಿಸ್ತು ಪಾಲನೆ ಇವರ ಪ್ರಧಾನ ಜವಾಬ್ದಾರಿಯಾಗಿರುತ್ತದೆ.
– ಅತ್ಯಾಚಾರ, ಚುಡಾವಣೆ ಮತ್ತು ಕಳವಿನ ಪ್ರಕರಣಗಳು ದಾಖಲಾದಾಗ ತನಿಖೆ ನಡೆಸುವುದು.
– ಮಿಲಿಟರಿ ಕಾರ್ಯಾಚರಣೆಗಳ ವೇಳೆ ಪೊಲೀಸರ ಸಹಕಾರ ಬೇಕೆಂದಾಗ ಒದಗಿಸುವುದು.
– ಗಡಿಯಲ್ಲಿ ಗಲಾಟೆಗಳಾದಾಗ ಗ್ರಾಮಸ್ಥರನ್ನು ತೆರವುಗೊಳಿಸುವುದು.
– ನಿರ್ವಸಿತರಾಗುವ ಮಹಿಳೆಯರು ಮತ್ತು ಮಕ್ಕಳ ಪುನರ್ವಸತಿ ವ್ಯವಸ್ಥೆ ಕಲ್ಪಿಸುವುದು.
– ಸೇನೆ ಕಾರ್ಯಾಚರಣೆ ವೇಳೆ ಮಹಿಳೆಯರನ್ನು ದೂರ ಕಳುಹಿಸಲು.
– ಸಂಘರ್ಷದ ಸಂದರ್ಭ ಯುದ್ಧ ಕೈದಿಗಳ ಶಿಬಿರಗಳ ಮೇಲ್ವಿಚಾರಣೆ.
– ಕಾಂಗೊ, ಸೊಮಾಲಿಯಾ, ರುವಾಂಡಾ, ಸಿಯೆರಾಲಿಯೊನ್‌ಮೊದಲಾದೆಡೆ ಕಳುಹಿಸುವ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಗೆ.

ನೇಮಕಾತಿ ಹೇಗೆ? 
– ಏಪ್ರಿಲ್‌ 25ರಿಂದ ಜೂನ್‌ 8ವರೆಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.
– ಕನಿಷ್ಠ ವಯೋಮಿತಿ 17.5 ವರ್ಷ, ಗರಿಷ್ಠ 21. ಯೋಧರ ವಿಧವೆಯರಿಗೆ 30 ವರ್ಷದವರೆಗೆ ವಿನಾಯಿತಿ.
– ಅಂಬಾಲಾ, ಲಖನೌ, ಜಬಲ್ಪುರ, ಬೆಂಗಳೂರು ಮತ್ತು ಶಿಲ್ಲಾಂಗ್‌ನಲ್ಲಿ ನೇಮಕಾತಿ ರಾರ‍ಯಲಿ.
– ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಲಿಖಿತ ಪರೀಕ್ಷೆ
– ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ವೈದ್ಯಕೀಯ ಪರೀಕ್ಷೆ.

ಯಾರಿಗೆ ಅವಕಾಶವಿಲ್ಲ? 
– ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡವರಿಗೆ
– ಗರ್ಭಿಣಿಯರಿಗೆ
– ತೋಳಿನ ಹೊರಭಾಗದಲ್ಲಿ ಟ್ಯಾಟೂ ಹಾಕಿಸಿರಬಾರದು.
– ದೇಹದ ಇತರ ಯಾವುದೇ ಭಾಗದಲ್ಲಿ ಶಾಶ್ವತ ಹಚ್ಚೆ ಇರಬಾರದು.

Vishwa News 24

Recent Posts

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ – vishwanews24

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…

15 hours ago

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ – vishwanews24

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…

16 hours ago

ದೇಣಿಗೆ ಕಳ್ಳತನ ವಿವಾದ: ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ – vishwanews24

ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…

16 hours ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ – vishwanews24

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ  ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…

16 hours ago

ರಾಮ ಮಂದಿರ ದೇಣಿಗೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್‌ ಎಚ್ಚರಿಕೆ – vishwanews24

ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್‌ ಲಕ್ನೋ: ರಾಮಭಕ್ತರ…

16 hours ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

18 hours ago