ದಕ್ಷಿಣ ಕನ್ನಡ

ದೇಶದ ಉನ್ನತ 100 ವಿಶ್ವವಿದ್ಯಾನಿಲಯಗಳಲ್ಲಿ ದೇರಳಕಟ್ಟೆಯ ಯೇನಪೊಯ ವಿಶ್ವವಿದ್ಯಾನಿಲಯ 92ನೇ ಸ್ಥಾನ

ಉಳ್ಳಾಲ: ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2018ರ ಎನ್‌ಐಆರ್‌ಎಫ್‌ ರ್‍ಯಾಂಕಿಂಗ್ಸ್‌ನಲ್ಲಿ ದೇಶದ 100 ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ದೇರಳಕಟ್ಟೆಯ ಯೇನಪೊಯ ವಿಶ್ವವಿದ್ಯಾನಿಲಯ 92ನೇ ಸ್ಥಾನವನ್ನು ಪಡೆದುಕೊಂಡಿದೆ.

ದೇಶದ ಸುಮಾರು ಎಂಟು ನೂರು ವಿ.ವಿ.ಗಳನ್ನು ಮೌಲ್ಯಾಂಕನ ಮಾಡಲಾಗಿದ್ದು, ಅದರಲ್ಲಿ ಪ್ರತಿಷ್ಠಿತ ನೂರು ವಿ.ವಿ.ಗಳನ್ನು ಆರಿಸಿದ್ದು  ಯೇನಪೊಯ ವಿಶ್ವವಿದ್ಯಾನಿಲಯ 92ನೇ ರ್‍ಯಾಂಕ್‌ ಪಡೆದುಕೊಂಡಿದೆ. ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅಭಿವೃದ್ಧಿ, ಬೋಧನೆ ಮತ್ತು ಕಲಿಕಾ ನಿಯತಾಂಕದಲ್ಲಿ 19ನೇ ಸ್ಥಾನದಲ್ಲಿದ್ದರೆ, ಸಂಸ್ಥೆಗಳು ಮತ್ತು ಕಾಲೇಜುಗಳನ್ನು ಮೌಲ್ಯಮಾಪನ ಮಾಡಲು ಬಳಸಲಾಗುವ 5 ಪ್ರಮುಖ ನಿಯತಾಂಕಗಳಲ್ಲಿ ಇದು 7ನೇ ಸ್ಥಾನವನ್ನು ಪಡೆದುಕೊಂಡಿದೆ. ಶಿಕ್ಷಣದ ಗುಣಮಟ್ಟ ಮತ್ತು ಸಾರ್ವಜನಿಕ ಗ್ರಹಿಕೆ ಸುಧಾರಿಸುವ ದಿಕ್ಕಿನಲ್ಲಿ ವಿಶ್ವವಿದ್ಯಾನಿಲಯ ಗಮನಾರ್ಹವಾದ ಕ್ರಮಗಳನ್ನು ಕೈಗೊಂಡಿದ್ದು, ಸಂಸ್ಥೆಯನ್ನು ಇನ್ನಷ್ಟು  ಎತ್ತರಕ್ಕೆ ಬೆಳೆಸುವ ನಿಟ್ಟಿನಲ್ಲಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಪ್ರತಿಷ್ಠಿತ ಸಾಲಿನಲ್ಲಿ ಗುರುತಿಸಿಕೊಂಡಿರುವುದು ಸಂಸ್ಥೆಗೆ ಪ್ರೇರಣೆ ನೀಡಲಿದೆ ಎಂದು ಯೇನಪೊಯ ವಿವಿ ಕುಲಾಧಿಪತಿ ವೈ. ಅಬ್ದುಲ್‌ ಕುಂಞಿ ತಿಳಿಸಿದ್ದಾರೆ.

 

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

10 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

10 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

1 day ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago