Featured

ದೇಶದ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ ಹೈಡ್ರಾಮಾ ಸೃಷ್ಟಿ ಮಾಡಿದೆ : ಕಾಂಗ್ರೆಸ್ ಆಕ್ರೋಶ -Vishwanews24

ನವದೆಹಲಿ: ಆರ್ಥಿಕ ಹಿಂಜರಿತದಿಂದ ದೇಶ ಜರ್ಜರಿತವಾಗುತ್ತಿದ್ದು, ಇದನ್ನು ಮರೆಮಾಚಲು ದೇಶದ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ ಹೈಡ್ರಾಮಾ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಸುದ್ದಿಸಂಸ್ಛೆಯೊಂದಿಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ ಅವರು, ಆರ್ಥಿಕ ಹಿಂಜರಿತದಿಂದ ದೇಶದ ಆರ್ಥಿಕತೆ ಕುಸಿಯುತ್ತಿದೆ. ಇಂತಹ ಗಂಭೀರ ವಿಚಾರವನ್ನು ದೇಶದ ಜನರಿಂದ ಮರೆಮಾಚಲು ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ ಬಂಧನ ಪ್ರಹಸನದ ಹೈಡ್ರಾಮಾ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

‘ಉತ್ತಮ ಆಡಳಿತ ನೀಡಲು ವಿಫಲವಾದ ಕೇಂದ್ರ ಸರ್ಕಾರ ದೇಶದ ಆರ್ಥಿಕ ಸ್ಥಿತಿ ಅಧಃಪತನಕ್ಕಿಳಿದಿರುವುದನ್ನು ಮರೆಮಾಚಲು ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದೆ. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮವನ್ನು ಪಕ್ಷ ಖಂಡಿಸಿದ್ದು, ಕಾಂಗ್ರೆಸ್ ವಿರುದ್ಧ ಹಗೆತನ ಸಾಧಿಸುವ ಆಡಳಿತಾರೂಢ ಕೇಂದ್ರ ಸರ್ಕಾರದ ತಂತ್ರಗಾರಿಕಾ ಕ್ರಮ ಇದು’.

ಈ ಹಿಂದೆ ಆರ್ಥಿಕ ಅಭಿವೃದ್ಧಿ ಶೇ.5ಕ್ಕೆ ಕುಸಿದಾಗ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರನ್ನು ಬಂಧಿಸಲಾಯಿತು. ಇದೀಗ ಆರ್ಥಿಕ ಹಿಂಜರಿತದಿಂದ ಷೇರುಮಾರುಕಟ್ಟೆ ಕುಸಿದಿದ್ದು, ಹೂಡಿಕೆದಾರರಿಗೆ 2.5 ಲಕ್ಷ ಕೋಟಿ ನಷ್ಟವಾಗಿದೆ. ಇದನ್ನು ಮರೆಮಾಚಲು ಡಿಕೆ ಶಿವಕುಮಾರ್ ಅವರ ಬಂಧನ ಮಾಡಲಾಗಿದೆ. ಬ್ರಿಟೀಷರು ದೇಶದಲ್ಲಿ ಡಿವೈಡ್ ಅಂಡ್ ರೂಲ್ ಆಟದ ಮೂಲಕ ಆಡಳಿತಕ್ಕೆ ಮುಂಜಾಗಿದ್ದರೆ, ಮೋದಿ ನೇತೃತ್ವದ ಬಿಜೆಪಿ ಮಿಸ್ ಲೀಡ್ ಮತ್ತು ಮಿಸ್ ರೂಲ್ (ತಪ್ಪುದಾರಿಗೆಳೆಯುವುದು ಮತ್ತು ದುರಾಡಳಿತ) ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

 

Vishwa News 24

Recent Posts

ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…

2 hours ago

ಕುಂದಾಪುರ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ಕಳವು – vishwanews24

ಕುಂದಾಪುರ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ಕಳವು ಕುಂದಾಪುರ: ಕುಂದಾಪುರದ ಬೊಬ್ಬರ್ಯನಕಟ್ಟೆಯ ಮನೆಯಲ್ಲಿ ಯಾರೂ ಇಲ್ಲದ…

2 hours ago

ಕರ್ನಾಟಕ ವಿಧಾನಸಭೆ ನೂತನ ಸ್ಪೀಕರ್​ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ – vishwanews24

ಕರ್ನಾಟಕ ವಿಧಾನಸಭೆ ಸ್ಪೀಕರ್​ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ ಬೆಂಗಳೂರು: ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ (ಜಿ.ಎಸ್.ಪಾಟೀಲ್)…

2 hours ago

ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಳಗೆ ನುಗ್ಗಿದ ನೀರು : 7 ಕಾರ್ಮಿಕರ ದಾರುಣ ಸಾವು ; 14ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ – vishwanews24

ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಳಗೆ ನುಗ್ಗಿದ ನೀರು .. 7 ಕಾರ್ಮಿಕರ ದಾರುಣ ಸಾವು ; 14ಕ್ಕೂ ಹೆಚ್ಚು ಮಂದಿಗೆ…

3 hours ago

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ; ಮನವಿಗೆ  ಸ್ಪಂದಿಸಿದ ಸಿಎಂ  – vishwanews24

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ; ಮನವಿಗೆ  ಸ್ಪಂದಿಸಿದ ಸಿಎಂ  ಚುನಾವಣೆ, ಪಕ್ಷ ಸಂಘಟನೆ ಕಾರಣ…

3 hours ago

ಮನೆ ತೆರಿಗೆ ಲಕ್ಷಾಂತರ ಹಣ ದುರುಪಯೋಗ: ಶಿವಪುರ ಗ್ರಾ.ಪಂ ಸಿಬ್ಬಂದಿ ವಜಾ – vishwanews24

ಮನೆ ತೆರಿಗೆ ಲಕ್ಷಾಂತರ ಹಣ ದುರುಪಯೋಗ: ಶಿವಪುರ ಗ್ರಾಪಂ ಸಿಬ್ಬಂದಿ ವಜಾ ಉಡುಪಿ: ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಯಲ್ಲಿ…

3 hours ago