Featured

ದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೇಸ್ ನಿಂದ ದೇಶ್ ಕಿ ಬಾತ್ ಕಾರ್ಯಕ್ರಮ -Vishwanews24

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ಗೆ ಪ್ರತಿಯಾಗಿ ಕಾಂಗ್ರೆಸ್ ದೇಶ್ ಕಿ ಬಾತ್ ಕಾರ್ಯಕ್ರಮವನ್ನು ಇಂದಿನಿಂದ ನಡೆಸಲಿದ್ದು ಸೋಷಿಯಲ್ ಮೀಡಿಯಾಗಳ ಮೂಲಕ ನೇರ ಪ್ರಸಾರ ಮಾಡಲು ಉದ್ದೇಶಿಸಿದೆ.

ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಮುಖ್ಯಸ್ಥ ರೋಹನ್​ ಗುಪ್ತಾ, ದೇಶ್​ ಕಿ ಬಾತ್​ ಕಾರ್ಯಕ್ರಮವು ಸಾಮಾನ್ಯ ವ್ಯಕ್ತಿಯ ಕಳವಳವನ್ನು ಪರಿಹರಿಸುವ ಪ್ರಯತ್ನ ಮಾಡಲಿದೆ. ಈಡೇರದ ಭರವಸೆ, ನಿರುದ್ಯೋಗ, ಆರ್ಥಿಕ ಪರಿಸ್ಥಿತಿ, ಅಪರಾಧ, ಕೃಷಿ ಬಿಕ್ಕಟ್ಟು ಹಾಗೂ ಏರುತ್ತಿರುವ ಬೆಲೆ ಮುಂತಾದ ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಜನರ ಪರವಾಗಿ ನಾವು ಕಾರ್ಯಕ್ರಮದ ಮೂಲಕ ಧ್ವನಿ ಎತ್ತಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತಾ, ದೇಶದ ಸಾಮಾನ್ಯ ಜನತೆಯ ಸಮಸ್ಯೆಗಳನ್ನು ಮತ್ತು ಸರ್ಕಾರದ ವೈಫಲ್ಯಗಳನ್ನು, ಈಡೇರಿಸದಿರುವ ಭರವಸೆಗಳನ್ನು ಮತ್ತು ಪ್ರಮುಖ ಸಾರ್ವಜನಿಕ ಸಮಸ್ಯೆಗಳನ್ನು ದೇಶ್ ಕಿ ಬಾತ್ ನಲ್ಲಿ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.

ಇತ್ತೀಚಿನ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಜನರ ತೀರ್ಪು ಏನೆಂಬುದು ಸ್ಪಷ್ಟವಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಜವಾಬ್ದಾರಿಯುತ ವಿರೋಧಪಕ್ಷವಾಗಿ ಕಾಂಗ್ರೆಸ್ ದೇಶದ ಜನರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳನ್ನು ದೇಶ್ ಕಿ ಬಾತ್ ನಲ್ಲಿ ಚರ್ಚಿಸಲಿದೆ. ಆದರೆ ಮಾಧ್ಯಮಗಳು ಈ ವಿಷಯಗಳನ್ನು ಜನರಿಗೆ ತಲುಪಿಸಬೇಕು.

ಅದರ ಮೊದಲ ಅವತರಣಿಕೆ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು ಪಕ್ಷದ ವಕ್ತಾರ ಪವನ್ ಖೆರಾ ನಡೆಸಿಕೊಡಲಿದ್ದಾರೆ.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

2 days ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago