ಉಡುಪಿ: ದೇಶದ ಬಗ್ಗೆ ಅಭಿಮಾನ, ಗೌರವ, ದೇಶಭಕ್ತಿ ಇರುವವರೇ ಈ ದೇಶವನ್ನು ಆಳಬೇಕು. ಪ್ರಧಾನಿ ಮೋದಿ ಅವರಲ್ಲಿ ಇಂತಹ ಆದರ್ಶ ಗುಣವಿದೆ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಅವರು ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಟೀಮ್ ಮೋದಿ ಕರ್ನಾಟಕದ ವತಿಯಿಂದ ಮೋದಿ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಹಮ್ಮಿಕೊಂಡಿರುವ ಮೋದಿ ರಥಯಾತ್ರೆಗೆ ಶ್ರೀಕೃಷ್ಣ ಮಠದ ರಾಜಾಂಗಣದ ಮುಂಭಾಗ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಭಾರತಾಂಬೆಯನ್ನು ಪ್ರತಿಯೊಬ್ಬರೂ ಪೂಜಿಸಬೇಕಿದೆ. ಶ್ರೀರಾಮ ದೇವರು ಕೂಡಾ ಪೂಜಿಸಿದ್ದರು. ಪ್ರಧಾನಿ ಮೋದಿಗೆ ಸಂಸತ್ತಿನ ಮೇಲೆ ಅಪಾರ ಗೌರವವಿದ್ದು, ಉತ್ತಮ ಆಳ್ವಿಕೆ ನೀಡಿದ್ದಾರೆ. ಇಂತಹ ನಾಯಕರೇ ನಮ್ಮನ್ನು ಆಳಬೇಕಿದೆ ಎಂದರು.
ಮೋದಿಗೆ ಸೇನೆಯ ಬಗ್ಗೆ ಅಪಾರ ಗೌರವವಿದೆ. ತಮ್ಮ ಹುಟ್ಟುಹಬ್ಬವನ್ನು ಅನೇಕ ಬಾರಿ ಸೈನಿಕರೊಂದಿಗೆ ಆಚರಿಸಿಕೊಂಡು ಧೈರ್ಯ ತುಂಬುವ ಕೆಲಸ ಮಾಡಿದ್ದರು. ವಿರೋಧಿಗಳ ಹೇಯಕೃತ್ಯಕ್ಕೆ ತಕ್ಕ ಉತ್ತರವೂ ಕೊಟ್ಟಿದ್ದರು. ಇವರ ಆಳ್ವಿಕೆಯಲ್ಲಿ ಸೈನಿಕರ ಆತ್ಮ ಸ್ಥೈರ್ಯ ತುಂಬುವ ಕೆಲಸವೂ ಆಗಿದೆ ಎಂದರು.
ಈ ಸಂದರ್ಭ ಒಂದು ನಿಮಿಷದ ಮೌನ ಪ್ರಾರ್ಥಿಸಿ ಸಲ್ಲಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಕನಿಷ್ಠ 300 ಸೀಟ್ ಗೆಲ್ಲಬೇಕೆಂಬ ಗುರಿಯೊಂದಿಗೆ ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ..
ಟೀಮ್ ಮೋದಿ ಉಡುಪಿ ತಂಡದ ಶಶಿಧರ್ ತಲ್ಲೂರಂಗಡಿ
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…