ಹರಿಕೋಟ: ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಪಿಎಸ್‌ಎಲ್‌ವಿ ಸಿ 46 ಉಪಗ್ರಹ ಉಡಾವಣೆಯನ್ನು ಇಂದು ಬುಧವಾರ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಯಶಸ್ವಿಯಾಗಿ ನಡೆಸಿದೆ.
ಬುಧವಾರ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಡೆಸಿದ, ಪಿಎಸ್‌ಎಲ್‌ವಿ ಸಿ 46 ಉಪಗ್ರಹ ರಿಸ್ಯಾಟ್-2ಬಿ ಹೊತ್ತ ಉಡಾವಣೆಯಾಗಿದ್ದು ಯಶಸ್ವಿಯಾಗಿ ಕಕ್ಷೆ ಸೇರಿದೆ.
ನಸುಕಿನ 5.30ರ ವೇಳೆಗೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದಿಂದ ಉಡಾವಣೆಯನ್ನು ನಡೆಸಲಾಗಿದೆ. ಇದು ಕೃಷಿ, ಅರಣ್ಯ ಪ್ರದೇಶ ಸಂರಕ್ಷಣೆ, ನೈಸರ್ಗಿಕ ವಿಕೋಪ ನಿರ್ವಹಣೆ, ಹಾಗೂ ಉಗ್ರರ ಕಾರ್ಯ ಚಟುವಟಿಕೆ ಮೇಲೆ ಕಣ್ಗಾವಲು ಸೇರಿದಂತೆ ರಿಸ್ಯಾಟ್ ಸಹಕಾರಿಯಾಗಲಿದೆ.
615 ಕೆಜಿ ತೂಕದ ರಿಸ್ಯಾಟ್ 2 ಬಿ ಉಪಗ್ರಹ ಭೂಮಿಯಿಂದ 557 ಕಿ.ಮೀ ಎತ್ತರದಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ.ಮಿಷನ್ ಅತ್ಯುತ್ತಮ ಯಶಸ್ಸು ಪಡೆದಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ. ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ ಎಂದು ಟ್ವೀಟ್ ಮಾಡಿದೆ.
ಗಡಿ ಭದ್ರತೆಯ ವಿಚಾರವಾಗಿ ಉಪಗ್ರಹ ಮಹತ್ವದ ಕೆಲಸ ನಿರ್ವಹಿಸಲಿದ್ದು, ದಟ್ಟ ಮೋಡಗಳು ಕವಿದಿದ್ದರೂ ಗಡಿಯಲ್ಲಿನ ಚಿತ್ರಗಳನ್ನುಸೆರೆ ಹಿಡಿಯುವ ಸಾಮರ್ಥ್ಯವನ್ನು ಉಪಗ್ರಹ ಹೊಂದಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…