Featured

ದೇಶದ ರಕ್ಷಣೆಗಾಗಿ ಉಗ್ರಗಾಮಿಗಳ ಗುರುತು ಪತ್ತೆ ಮಾಡಲು ಬುರ್ಖಾ ನಿಷೇಧಿಸಿದ ಶ್ರೀಲಂಕಾ – Vishwanews24

ಕೊಲಂಬೋ,: ನಿರಂತರ ಬಾಂಬ್ ಸ್ಪೋಟದಿಂದ ತತ್ತರಿಸಿ ಹೋದ ಶ್ರೀಲಂಕಾ ಭದ್ರತಾ ದೃಷ್ಟಿಯಿಂದ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೇ ಕಾರಣಕ್ಕಾಗಿ ಬುರ್ಖಾ ತೊಡುವುದನ್ನೂ ನಿಷೇಧಿಸಿದೆ. ಸೋಮವಾರದಿಂದಲೇ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಬುರ್ಖಾಕ್ಕೆ ನಿಷೇಧ ವಿಧಿಸಿ ಆದೇಶಿಸಿದ್ದಾರೆ.

ಬುರ್ಖಾ ತೊಡುವುದರಿಂದ ದೇಶದ ಭದ್ರತೆಗೆ ತೊಂದರೆಯುಂಟಾಗುತ್ತಿದೆ. ಮಾತ್ರವಲ್ಲದೆ ಮೂಲಭೂತವಾದದ ಸಂಕೇತವಾಗುತ್ತಿದ್ದು, ದೇಶದ ರಕ್ಷಣೆಗಾಗಿ ಉಗ್ರಗಾಮಿಗಳ ಗುರುತು ಪತ್ತೆ ಮಾಡಲು ಶ್ರೀಲಂಕಾ ಅಧ್ಯಕ್ಷರು ಖಡಕ್ ನಿರ್ಧಾರ ತಳೆದಿದ್ದಾರೆ.

ದಿ ನ್ಯಾಷನಲ್ ತವಹೀದ್​ ಜಮಾತ್ ಮತ್ತು ಜಮಾಥಿ ಮಿಲ್ಲಾಥು ಇಬ್ರಾಹಿಂ ಸಂಘಟನೆಗಳ ಮೇಲೆ ಶ್ರೀಲಂಕಾ ಸರ್ಕಾರ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಇಂದಿನಿಂದ ಬುರ್ಖಾ ಮೇಲೂ ನಿಷೇಧ ಹೇರಲಾಗಿದೆ. ಈ ಬಗ್ಗೆ ನಿನ್ನೆ ಶ್ರೀಲಂಕಾ ಸರ್ಕಾರ ಆದೇಶ ಹೊರಡಿಸಿದೆ. ಬುರ್ಖಾ ಜೊತೆಗೆ ಮುಖವನ್ನು ಮುಚ್ಚಿಕೊಳ್ಳುವಂತೆ ಬಟ್ಟೆ ಸುತ್ತಿಕೊಳ್ಳುವುದನ್ನು ಕೂಡ ನಿಷೇಧಿಸಿದೆ. ಭಯೋತ್ಪಾದಕ ಕೃತ್ಯಗಳ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಮುಖವನ್ನು ಮುಚ್ಚಿಕೊಂಡಿರುವವರನ್ನು ಅನುಮಾನಾಸ್ಪದ ವ್ಯಕ್ತಿಗಳೆಂದು ಪರಿಗಣಿಸಬೇಕಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಈ ನಿಷೇಧದ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಬುರ್ಖಾ ಧರಿಸಿದ ಮಹಿಳಾ ಬಾಂಬರ್ ಆತ್ಮಾಹುತಿ ದಾಳಿಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ, ದ್ವೀಪ ರಾಷ್ಟ್ರದ ಕೆಲ ಸಂಸದರು ಬುರ್ಖಾ ನಿಷೇಧಗೊಳಿಸುವಂತೆ ಧ್ವನಿ ಎತ್ತಿದ್ದರು. ಯು ಎನ್ ಪಿ ಪಕ್ಷದ ನಾಯಕ ಅಶು ಮಾರಸಿಂಘೆ, ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ’ಬುರ್ಖಾ ಧರಿಸಿದ ಮಹಿಳೆ ಬಾಂಬ್ ದಾಳಿಯಲ್ಲಿ ನೇರ ಭಾಗಿಯಾಗಿರುವುದು ಕಂಡುಬಂದಿದೆ. ಮಾತ್ರವಲ್ಲದೆ ಅನೇಕ ಉಗ್ರರು ಬುರ್ಖಾ ಧರಿಸಿ ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ. ಬುರ್ಖಾ ಎನ್ನುವುದು ಮುಸ್ಲಿಂ ಮಹಿಳೆಯರ ಸಾಂಪ್ರದಾಯಿಕ ವಸ್ತ್ರ ಅಲ್ಲ, ದೇಶದ ಕೆಲ ಭಾಗದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಪ್ರವೇಶಿಸುವಾಗ ಬುರ್ಖಾ ಕಡ್ಡಾಯವಾಗಿ ತೆಗೆಯಬೇಕೆಂಬ ಸೂಚನೆ ನೀಡಲಾಗಿದೆ. ದೇಶದ ಭದ್ರತೆಯ ದೃಷ್ಟಿಯಿಂದ ಬುರ್ಖಾ ನಿಷೇಧ ಒಳಿತು ಎಂದು ಸೂಚಿಸಿದ್ದರು.

 

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

15 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

17 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

17 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

17 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

18 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

18 hours ago