ದೇಶವಿರೋಧಿ ಹಾಗು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಲ್ಲಿ ಯಾವುದೇ ತನಿಖೆ ವಿಚಾರಣೆ ಮಾಡುವ ಅಗತ್ಯ ಇಲ್ಲದೆ ನೇರವಾಗಿ ಅವರನ್ನು ಎನ್ಕೌಂಟರ್ ಮಾಡಿ : ಕಾರ್ಕಳ ಶಾಸಕ ಸುನಿಲ್ ಕುಮಾರ್ -Vishwanews24

ಕಾರ್ಕಳ: ದೇಶವಿರೋಧಿ ಹಾಗು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಲ್ಲಿ ಯಾವುದೇ ತನಿಖೆ ವಿಚಾರಣೆ ಮಾಡುವ ಅಗತ್ಯ ಇಲ್ಲದೆ ನೇರವಾಗಿ ಅವರನ್ನು ಎನ್ಕೌಂಟರ್ ಮಾಡಬೇಕು ಎಂದು ಆಡಳಿತ ಪಕ್ಷದ ಸಚೇತಕ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ಅವರು ಶುಕ್ರವಾರ ಕಾರ್ಕಳ ಬಸ್ ನಿಲ್ದಾಣದಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದಲ್ಲಿ ಹುಟ್ಟಿ ಬೆಳೆದು ಇಲ್ಲಿಯ ಗಾಳಿ ನೀರು ಆಹಾರ ಜೊತೆಗೆ ಎಲ್ಲಾ ಸೌಲಭ್ಯ ಪಡೆದು ಪಾಕಿಸ್ತಾನದ ಪರ ಘೋಷಣೆ ಮಾಡುವವರಿಗೆ ಎನ್ಕೌಂಟರ್ ಮಾಡುವ ಮೂಲಕ ದೇಶ ವಿರೋಧಿಗಳಿಗೆ ಉತ್ತರ ನೀಡಬೇಕಾಗಿದೆ.

ಇಂದು ದೇಶವಿರೋಧಿ ಕೆಲಸ ಮಾಡಿದ ಯುವತಿಯ ಮನೆ ಕಾರ್ಕಳದಿಂದ 70 ಕಿಲೋಮೀಟರ್ ದೂರದಲ್ಲಿದೆ ನಕ್ಸಲ್ ಚಟುವಟಿಕೆಗಳಿಗೆ ಶೃಂಗೇರಿ ಕೊಪ್ಪ ಕೇಂದ್ರಸ್ಥಾನವಾಗಿತ್ತು ಎಡಪಂಥೀಯ ಚಟುವಟಿಕೆ ಮತ್ತೆ ಜೀವ ತುಂಬುವ ಮೂಲಕ ಶೃಂಗೇರಿ ಕೊಪ್ಪ ಮೂಲದ ಯುವತಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದಾರೆ ಮಂಗಳೂರುಗಳಲ್ಲಿ ಕೇರಳ ರಾಜ್ಯದಿಂದ ಬಂದು ಗಲಾಟೆ ಮಾಡುತ್ತಾರೆ ದೇಶದ ಒಳಗೆ ಅಭದ್ರತೆ ನಿರ್ಮಾಣ ಮಾಡಿ ಈ ರೀತಿ ಸಮಾಜದ್ರೋಹಿ ದೇಶದ್ರೋಹಿ ಘೋಷಣೆ ಕೂಗುವವರು ಹಾಗೂ ಅವರ ಹಿಂದೆ ಅಡಗಿರುವ ಕಾಣದ ಶಕ್ತಿಗಳ ನಿಜ ಮುಖವಾಡ ಬಯಲಾಗಬೇಕಾಗಿದೆ ಎಂದರು ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಆಯೋಜಕರ ಮೇಲೂ ಪ್ರಕರಣವನ್ನು ದಾಖಲಿಸುವಂತೆ ಗೃಹ ಇಲಾಖೆಯನ್ನು ಸುನೀಲ್ ಕುಮಾರ್ ಆಗ್ರಹಿಸಿದರು.

ಸಿಎಎ ಕಾಯ್ದೆ ವಿಚಾರದಲ್ಲಿ ಮುಸಲ್ಮಾನರಿಗೆ ತೊಂದರೆ ಇಲ್ಲವೆಂದು ಪದೇಪದೇ ಹೇಳುತ್ತಿದ್ದರು ಮುಸ್ಲಿಮರು ರಸ್ತೆಗೆ ಇಳಿದು ಪ್ರತಿಭಟನೆ ಮಾಡುವ ಅಗತ್ಯತೆ ಏನೀತ್ತು. ಸಿಎಎ ಪ್ರತಿಭಟನೆ ಹಿಂದಿದ್ದ ಮುಖವಾಡಗಳು ಯಾವುದು ಮನಸ್ಸಿಲ್ಲದ ಮನಸ್ಸಿಂದ ರಾಷ್ಟ್ರಧ್ವಜ ಹಿಡಿದು ಮನದಲ್ಲಿ ಪಾಕಿಸ್ತಾನ ಜಪ ಮಾಡುವ ಮೂಲಕ ಇಂದು ಸಿಎಂ ವಿರುದ್ಧ ಪ್ರತಿಭಟನಾಕಾರರ ನಿಜವಾದ ಬಣ್ಣ ಬಯಲಾಗಿದೆ ಎಂದರು

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

20 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

21 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

21 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

21 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

21 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

21 hours ago