Featured

ದೇಶಾದ್ಯಂತ ಹವಾ ಎಬ್ಬಿಸಿದ ಪ್ರಧಾನಿ ಮೋದಿ ಅವರ “ಮೈ ಭಿ ಚೌಕಿದಾರ್‌’ ಕರೆ – Vishwanews24

ನವದೆಹಲಿ: ಪ್ರಧಾನಿ ಮೋದಿ ಅವರ “ಮೈ ಭಿ ಚೌಕಿದಾರ್‌’ ಕರೆ ದೇಶಾದ್ಯಂತ ಹವಾ ಎಬ್ಬಿಸಿದೆ. ಶನಿವಾರವಷ್ಟೇ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಪ್ರಧಾನಿ, ಎಲ್ಲರೂ “ನಾನೂ ಚೌಕಿದಾರ’ ಎಂದು ಘೋಷಿಸುವಂತೆ ಕರೆ ನೀಡಿದ್ದರು. ಇದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಈ ಲೋಕಸಭೆ ಚುನಾವಣೆಗೆ “ಚೌಕಿದಾರ್‌’ ಟ್ಯಾಗ್‌ ಅನ್ನು ಬಳಸಿಕೊಂಡು ಮತ ಬೇಟೆಗೆ ಬಿಜೆಪಿ ಮುಂದಾಗಿದೆ.

ಭಾನುವಾರ ಪ್ರಧಾನಿ ತಮ್ಮ ಟ್ವಿಟರ್‌ ಖಾತೆಯ ಹೆಸರನ್ನು “ಚೌಕಿದಾರ್‌ ನರೇಂದ್ರ ಮೋದಿ’ ಎಂದು ಬದಲಿಸಿಕೊಂಡಿದ್ದಾರೆ. ಬೆನ್ನಲ್ಲೇ ಬಿಜೆಪಿಯ ಉಳಿದ ನಾಯಕರೂ ಅವರನ್ನೇ ಅನುಸರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೂ ಟ್ವಿಟರ್‌ ಖಾತೆಯ ಪ್ರೊಫೈಲ್‌ ಅನ್ನು “ಚೌಕಿದಾರ್‌ ಅಮಿತ್‌ ಶಾ’ ಎಂದು ಬದಲಾಯಿಸಿದ್ದಾರೆ. ನಂತರದ ಕೆಲವೇ ಕ್ಷಣಗಳಲ್ಲಿ ದೇಶಾದ್ಯಂತ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಶಾಸಕರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯ ಮಂತ್ರಿಗಳು ಸೇರಿದಂತೆ ಅನೇಕರು “ಚೌಕಿದಾರ’ರಾಗಿ ಬದಲಾಗಿದ್ದಾರೆ.

ರಾಜ್ಯದಲ್ಲೂ ಅಲೆ: ಕರ್ನಾಟಕದಲ್ಲೂ ಚೌಕಿದಾರರ ಅಲೆ ಎದ್ದಿದ್ದು, ಕೆ.ಎಸ್‌. ಈಶ್ವರಪ್ಪ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಪ್ರಹ್ಲಾದ್‌ ಜೋಷಿ, ಸಿ.ಟಿ. ರವಿ, ಪ್ರತಾಪ್‌ ಸಿಂಹ, ಸುರೇಶ್‌ ಕುಮಾರ್‌, ನಳಿನ್‌ ಕುಮಾರ್‌ ಕಟೀಲು, ಸದಾನಂದ ಗೌಡ ಸೇರಿದಂತೆ ಅನೇಕರು ತಮ್ಮ ಹೆಸರಿನ ಮೊದಲು “ಚೌಕಿದಾರ’ ಎಂಬ ಪದ ಸೇರಿಸಿದ್ದಾರೆ.

ಇದಲ್ಲದೆ, ಟ್ವಿಟರ್‌ನಲ್ಲಿಯೂ “ಚೌಕಿದಾರ್‌ ಫಿರ್‌ ಸೆ’ (ಮಗದೊಮ್ಮೆ ಚೌಕಿದಾರ), “ಚೌಕಿದಾರ್‌’, “ಚೌಕಿ ದಾರ್‌ ನರೇಂದ್ರ ಮೋದಿ’ ಎಂಬಿತ್ಯಾದಿ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago