Featured

ದೇಶ ದಿಂದ ಭಯೋತ್ಪಾದನೆ ಮತ್ತು ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡಿಯೇ ಸಿದ್ಧ: ಪ್ರಧಾನಿ ಮೋದಿ -Vishwanews24

ಹೊಸದಿಲ್ಲಿ: “ಹುತಾತ್ಮರ ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ ತೀರಿಸಿಯೇ ಸಿದ್ಧ ಎಂದು ನಾನು ಶಪಥ ಮಾಡಿದ್ದೇನೆ. ದೇಶ ದಿಂದ ಭಯೋತ್ಪಾದನೆ ಮತ್ತು ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡುತ್ತೇನೆ’.

ಮಧ್ಯಪ್ರದೇಶದ ಸಾಗರದಲ್ಲಿ ರವಿವಾರ ಚುನಾವಣ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ , ಈ ಚೌಕಿದಾರನು ಪ್ರತಿಯೊಬ್ಬ ಯೋಧನ ನೆತ್ತರಿಗೂ ಪ್ರತೀಕಾರ ತೀರಿಸಲು ಪಣ ತೊಟ್ಟಿದ್ದಾನೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕಿದೆ. ಪಾಕಿಸ್ಥಾನದ ಸೂಪರ್‌ ಫೇವರಿಟ್‌ ಭಯೋತ್ಪಾದಕ ಮಸೂದ್‌ ಅಜರ್‌ಗೆ ವಿಶ್ವಸಂಸ್ಥೆ ಹೇರಿದ ನಿಷೇಧ ಹಾಗೂ ಭಾರತದ ನಿಲುವಿಗೆ ಇತರೆಲ್ಲ ದೇಶಗಳೂ ಸಮ್ಮತಿಸಿದ ರೀತಿಯು ಪಾಕಿಸ್ಥಾನಕ್ಕೆ ಕಪಾಳ ಮೋಕ್ಷವಾದಂತಾಗಿದೆ. ಆದರೆ, ಇದು ಕೇವಲ ಆರಂಭವಷ್ಟೆ. ನಾವು ಇನ್ನೂ ಸಾಧಿಸಬೇಕಾದ್ದು ಬಹಳಷ್ಟಿದೆ. ಈಗ ಪಾಕಿಸ್ಥಾನವೇ ತಾವು ಯಾವ ಹಾದಿಯಲ್ಲಿ ಸಾಗಬೇಕು ಎಂಬುದನ್ನು ನಿರ್ಧರಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ಬ್ಯಾಕಾಪ್ಸ್‌ ಎಂಬ ಹೆಸರೇ ಕಾಂಗ್ರೆಸ್‌ ಅಧ್ಯಕ್ಷರ ಹಿಂಬಾಗಿಲ ಕಾರ್ಯಾಚರಣೆಯನ್ನು ಸೂಚಿಸುತ್ತದೆ. 21ನೇ ಶತಮಾನದ ಒಂದಿಡೀ ದಶಕವನ್ನೇ ಭಾರತವು ಕಳೆದುಕೊಂಡಿತು. 2004ರಲ್ಲಿ ಕಾಂಗ್ರೆಸ್‌ “ಕುಟುಂಬಕ್ಕೆ ವಿಧೇಯ’ರಾದ ಮನಮೋಹನ್‌ ಸಿಂಗ್‌ರನ್ನು ಪ್ರಧಾನಿ ಹುದ್ದೆಗೇರಿಸಿತು.

ಏಕೆಂದರೆ, ಆಗ ರಾಜಕುಮಾರ ಇನ್ನೂ ಆ ಹುದ್ದೆಗೇರಲು ಸಜ್ಜಾಗಿರಲಿಲ್ಲ. ಆತನಿಗೆ ತರಬೇತಿ ನೀಡುವ ಯತ್ನವೆಲ್ಲವೂ ವಿಫ‌ಲವಾಯಿತು’ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಅಧ್ಯಕ್ಷರ ಹಗರಣಗಳು ಈಗ ನೆಲ, ಜಲ ಹಾಗೂ ಆಕಾಶದಿಂದಲೂ ಒಂದೊಂದಾಗಿ ಹೊರಬರುತ್ತಿದೆ ಎಂದೂ ಹೇಳಿದ್ದಾರೆ.

 

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

4 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

6 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

6 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

6 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

6 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

7 hours ago