Featured

ದೇಹದಾನ ಮಾಡಿ ಎಲ್ಲರಿಗೂ ಮಾದರಿಯಾದ ಬಾಲಕಿ ; ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಗಳೂರಿನ ಪ್ರತೀಕ್ಷಾ

ಮಂಗಳೂರು: ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ದೇಹದಾನ, ಅಂಗಾಂಗ ದಾನಗಳ ಕುರಿತು ಜನರಲ್ಲಿ ಸಾಕಷ್ಟು ಅರಿವು ಮೂಡುತ್ತಿರುವ ದಿನಗಳಲ್ಲಿ ಈಕೆಯೂ ಅಂಥದ್ದೇ ಒಂದು ಉದಾಹರಣೆಯನ್ನು ಉಳಿಸಿಹೋಗಿದ್ದಾಳೆ. ಅಶೋಕ ನಗರದ ಪ್ರತೀಕ್ಷಾ (16) ಪ್ರತಿಭಾವಂತ ವಿದ್ಯಾರ್ಥಿನಿ. ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆಗೆ ಸಾವೇ ಖಚಿತ ಎನಿಸತೊಡಗಿದ್ದಾಗ ತನ್ನ ಪೋಷಕರಲ್ಲಿ, “ನಾನು ಒಂದುವೇಳೆ ಇಲ್ಲವಾದರೆ ದೇಹವನ್ನು ದಾನ ಮಾಡಿ’ ಎಂದಿದ್ದಳಂತೆ. ಅದು ಅವಳ ಕೊನೆ ಇಚ್ಛೆ. ಅದೃಷ್ಟ ಕೈಗೂಡಲಿಲ್ಲ; ಕೊನೆಯುಸಿರೆಳೆದಳು. ಆಕೆಯ ಪೋಷಕರಾದ ಕುಮಾರಸ್ವಾಮಿ ಕೊಕ್ಕಡ ಹಾಗೂ ವಂದನಾ ದಂಪತಿ ತಮ್ಮ ಮಗಳ ಇಚ್ಛೆಯನ್ನು ಗುರುವಾರ ನೆರವೇರಿಸಿದರು.

ಕುಮಾರಸ್ವಾಮಿ – ವಂದನಾ ದಂಪತಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಪ್ರಜ್ವಲ್‌ ಕೃಷ್ಣ ಸಂತ ಅಲೋಶಿಯಸ್‌ ಕಾಲೇಜಿನ ದ್ವಿತೀಯ ವರ್ಷದ ಪದವಿ ಕಲಿಯುತ್ತಿದ್ದರೆ, ಅನಂತರ ಹುಟ್ಟಿದ ಪ್ರತೀಕ್ಷಾ ಮತ್ತು ಪ್ರೀತಂ ಅವಳಿ ಮಕ್ಕಳು. ಇಬ್ಬರೂ ಈಗ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. ಪ್ರತೀಕ್ಷಾಳಿಗೆ 6ನೇ ತರಗತಿ ಓದುತ್ತಿದ್ದಾಗ ಎಲುಬಿನ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು. ಎರಡು ವರ್ಷಗಳ ಚಿಕಿತ್ಸೆಯ ಬಳಿಕ ಗುಣಮುಖ ಹೊಂದಿದ್ದಳು. ಆದರೆ ಒಂದೇ ವರ್ಷದಲ್ಲಿ ಕಾಯಿಲೆ ಮರುಕಳಿಸಿತ್ತು. ಆ ಬಳಿಕ ಚಿಕಿತ್ಸೆ ಪಡೆಯುತ್ತಲೇ ವ್ಯಾಸಂಗವನ್ನು ಮುಂದುವರಿಸಿದ್ದಳು. ಒಟ್ಟು ಐದು ವರ್ಷಗಳ ಸುದೀರ್ಘ‌ ಅವಧಿಯ ಚಿಕಿತ್ಸೆಯೂ ಫ‌ಲಕಾರಿಯಾಗದೆ ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಳು.

ಪ್ರತೀಕ್ಷಾ 20 ದಿನಗಳ ಹಿಂದೆ, ತಾನು ಸತ್ತರೆ ದೇಹವನ್ನು ಕೆಎಂಸಿಗೆ ದಾನ ಮಾಡಬೇಕೆಂದು ತಾಯಿಯ ಬಳಿ ಹೇಳಿದ್ದಳು. ಅದರಂತೆ ಗುರುವಾರ ದೇಹವನ್ನು ಹಸ್ತಾಂತರಿಸಲಾಯಿತು.

ಜಾಹೀರಾತುಗಳು

 

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

1 day ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

2 days ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

2 days ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

2 days ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

3 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

3 days ago