Featured

ದೇಹ ಸದೃಢವಾಗಿಸುತ್ತದೆ ಎಂದು 39 ನಾಣ್ಯಗಳು ಮತ್ತು 37 ಅಯಸ್ಕಾಂತ  ನುಂಗಿದ ವ್ಯಕ್ತಿ – Vishwanews24

ದೇಹ ಸದೃಢವಾಗಿಸುತ್ತದೆ ಎಂದು 39 ನಾಣ್ಯಗಳು ಮತ್ತು 37 ಅಯಸ್ಕಾಂತ  ನುಂಗಿದ ವ್ಯಕ್ತಿ

ನವದೆಹಲಿ: ಸತು ದೇಹವನ್ನು ಸದೃಢವಾಗಿಸುತ್ತದೆ ಎಂದು ನಾಣ್ಯಗಳು ಹಾಗೂ ಅಯಸ್ಕಾಂತಗಳನ್ನು ನುಂಗಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಸುಮಾರು 39 ನಾಣ್ಯಗಳು ಮತ್ತು 37 ಅಯಸ್ಕಾಂತಗಳನ್ನು  ವೈದ್ಯರು ಹೊರತೆಗೆದಿದ್ದಾರೆ.

ದೆಹಲಿಯ  26 ವರ್ಷದ ರೋಗಿಯೊಬ್ಬರು 20 ದಿನಗಳಿಗೂ ಹೆಚ್ಚು ಕಾಲ ಪದೇ ಪದೇ ವಾಂತಿ ಮತ್ತು ಹೊಟ್ಟೆ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿ ಏನನ್ನು ತಿನ್ನದೇ ಇದ್ದಾಗ ಅನುಮಾನಗೊಂಡು ವೈದ್ಯರು, ಎಕ್ಸ್ ರೇ ಮಾಡಿ ನೋಡಿದಾಗ ನಾಣ್ಯಗಳು ಹಾಗೂ ಅಯಸ್ಕಾಂತಗಳು ಕರುಳಿನಲ್ಲಿ ಇರುವುದು ಬೆಳಕಿಗೆ ಬಂದಿದೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರಗೆ ತೆಗೆದಿದ್ದಾರೆ.

ವ್ಯಕ್ತಿಯ ಹೊಟ್ಟೆಯಿಂದ 1, 2, 5 ರೂ.ಗಳ ನಾಣ್ಯಗಳು ಮತ್ತು ಹೃದಯ, ಗೋಳ, ನಕ್ಷತ್ರ, ಬುಲೆಟ್ ಮತ್ತು ತ್ರಿಕೋನ ಆಕಾರದ ಅಯಸ್ಕಾಂತಗಳನ್ನು ಹೊರತೆಗೆಯಲಾಗಿದೆ. ಈ ಹಿಂದೆಯೂ ರೋಗಿಗಳು ಅಯಸ್ಕಾಂತ ಹಾಗೂ ನಾಣ್ಯಗಳನ್ನು ಸೇವಿಸಿದ ಸಾಕಷ್ಟು ಉದಾಹರಣೆಗಳಿವೆ ಎಂದು ಚಿಕಿತ್ಸೆ ನೀಡಿದ ವೈದ್ಯರಾದ ಡಾ.ತರುಣ್ ಮಿತ್ತಲ್ ಹೇಳಿದ್ದಾರೆ.

ನಾಣ್ಯವನ್ನು ನುಂಗಿದ ವ್ಯಕ್ತಿಯು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ದೇಹ ಗಟ್ಟಿಯಾಗುತ್ತದೆ ಎಂದು ನಾಣ್ಯಗಳು ಮತ್ತು ಅಯಸ್ಕಾಂತಗಳನ್ನು ನುಂಗಿದ್ದಾನೆ ಎಂದು ತಿಳಿದು ಬಂದಿದೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

3 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

3 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

4 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

4 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

4 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

5 hours ago