ಬೆಂಗಳೂರು : ಕಾಂತಾರ ಸಿನೆಮಾದ ಹಾಡುಗಳಿಗೆ ದೈವದ ಅವಹೇಳನ ಮಾಡುವ ರೀತಿಯಲ್ಲಿ ರೀಲ್ಸ್ ಅಥವಾ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುವುದರ ವಿರುದ್ದ ಕಾಂತಾರ ನಟ ರಿಷಬ್ ಶೆಟ್ಟಿ ಅಸಮಧಾನ ವ್ಯಕ್ತಪಡಿಸಿದ್ದು. ಈ ರೀತಿ ಮಾಡುವುದರಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ,
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೈವಾರಧನೆ ಬಗ್ಗೆ ಕಾಂತಾರ ಮೊದಲ ಸಿನೆಮಾ ಅಲ್ಲ , ತುಳು ಮತ್ತು ಕನ್ನಡದಲ್ಲೂ ಸಿನೆಮಾಗಳು ಬಂದಿವೆ. ಚೋಮನದುಡಿಯಲ್ಲೂ ದೈವದ ಬಗ್ಗೆ ಹೇಳಿದ್ದಾರೆ. ಆದರೆ ಕಾಂತಾರ ಸಿನೆಮಾ ಮಾಡಿದ ರೀತಿ ಜನರಿಗೆ ತಲುಪಿದೆ. ನಮ್ಮ ಉದ್ದೇಶ ಇದ್ದಿದ್ದು, ದೈವದ ಆರಾಧನೆ ಬಗ್ಗೆ ಅದರ ಶಕ್ತಿ ಬಗ್ಗೆ ತಿಳಿಸುವುದು ಮಾತ್ರ ಆಗಿತ್ತು ಎಂದರು. ಕಾಂತಾರದ ಗೆಲುವು ಎಷ್ಟು ಖುಷಿ ಕೊಡ್ತೋ, ಅಷ್ಟೇ ದುಃಖವೂ ಕೊಟ್ಟಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ರಿಷಬ್ ಶೆಟ್ಟಿ ನಂದಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಈ ಸಮಾರಂಭದಲ್ಲಿ ಮಾತನಾಡಿದ ಅವರು, ದೈವರಾಧನೆ ಕುರಿತು ಸಾಕಷ್ಟು ತುಳು, ಕನ್ನಡ ಸಿನಿಮಾ ಬಂದಿವೆ. ಈ ಕಾಲಘಟ್ಟದಲ್ಲಿ ದೈವರಾಧನೆ ಶ್ರೇಷ್ಠತೆ ಹೇಳೋಕೆ ಈ ಸಿನಿಮಾ ಮಾಡಿದ್ದೀನಿ. ಆದರೆ ಕಾಂತಾರ ನಂತರ ದೈವದ ಹಾಡಿಗೆ ತಪ್ಪಾಗಿ ರೀಲ್ಸ್ ಮಾಡ್ತಿರೋದು ಜಾಸ್ತಿ ಆಗ್ತಿದೆ. ದಯವಿಟ್ಟು ಅದೆಲ್ಲವನ್ನೂ ಮಾಡ್ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ದೈವರಾಧನೆಗೆ ಅಪಮಾನ ಮಾಡ್ಬೇಡಿ. ದೈವರಾಧನೆ, ಪಂಜುರ್ಲಿ, ಕೋಲ ನಮ್ಮ ನೆಲಮೂಲ ಸಂಸ್ಕೃತಿ. ನಮ್ಮ ನೆಲದ ಕಥೆ ಹೇಳಬೇಕು ಅಂತಾ ಈ ಸಿನಿಮಾ ಮಾಡಿರೋದು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…