ಮಂಗಳೂರು/ ಉಡುಪಿ: : ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಸ್ತುತ ಅಹಿತಕರ ಘಟನೆಯ ಬಳಿಕ ಗಡಿಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಮಾತ್ರವಲ್ಲದೆ ಜಿಲ್ಲೆಯಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅನೇಕ ನಿರ್ಬಂಧಗಳನ್ನು ಹೇರಿವೆ.
ಇನ್ನೊಂದೆಡೆ ತಲಪಾಡಿ ಗಡಿಯಲ್ಲಿ ಕೇರಳದಿಂದ ಮಂಗಳೂರು ಹಾಗೂ ಮಂಗಳೂರಿನಿಂದ ಕೇರಳ ಕಡೆಗೆ ಸಂಚರಿಸುವ ವಾಹನಗಳನ್ನು ಪೊಲೀಸರು ತಪಾಸಣೆ ಆರಂಭಿಸಿದ್ದಾರೆ. ತಲಪಾಡಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಉಳ್ಳಾಲ, ಕೆಎಸ್‍ಆರ್‌ಪಿ ಮತ್ತು ಸಂಚಾರಿ ಪೊಲೀಸರು ತಪಾಸಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ ೧೧ ಕಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದುಮ್ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಯುತ್ತಿದೆ. ಹೆಜಮಾಡಿ , ಸಾಸ್ತಾನ , ಶಿರೂರು , ಟೋಲ್ ಗೇಟ್ ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಅತಿ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ…
ಮುಂಬಯಿ : ಮುಂಗಾರು ಮಳೆ ಅಬ್ಬರ; ಜನಜೀವನ ಅಸ್ತವ್ಯಸ್ತ: ಆರೆಂಜ್ ಅಲರ್ಟ್ ಘೋಷಣೆ ಮುಂಬಯಿ: ಮುಂಬಯಿಯಲ್ಲಿ ಮುಂಗಾರು ಮಳೆಯ ಅಬ್ಬರ…
ಉಡುಪಿ: ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡುವಂತೆ ಕೆಥೋಲಿಕ್ ಸಭಾದಿಂದ ಸಿಎಂಗೆ ಮನವಿ ಉಡುಪಿ: ಕಥೊಲಿಕ್ ಸಭಾ ಉಡುಪಿ ಹಾಗೂ…
ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ ಉಡುಪಿ:…
ಬೆಳ್ತಂಗಡಿ: ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಂಗಳೂರು: ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮನೆ…
ಉಡುಪಿ : ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ ಉಡುಪಿ : ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ…