Featured

ದ. ಕ.ದಲ್ಲಿ ಸೌಹಾರ್ದತೆಯ ಸಂದೇಶ ; ಆಕಸ್ಮಿಕವಾಗಿ ಪ್ರವಾಹದ ನೀರಿಗೆ ಬಿದ್ದ ಮುಸ್ಲಿಂ ಯುವಕ ಶರೀಫ್ ನನ್ನು ರಕ್ಷಿಸಿದ ಸೋಮಶೇಖರ್ – Vishwanews24

ದ. ಕ.ದಲ್ಲಿ ಸೌಹಾರ್ದತೆಯ ಸಂದೇಶ ; ಆಕಸ್ಮಿಕವಾಗಿ ಪ್ರವಾಹದ ನೀರಿಗೆ ಬಿದ್ದ ಮುಸ್ಲಿಂ ಯುವಕ ಶರೀಫ್ ನನ್ನು ರಕ್ಷಿಸಿದ ಸೋಮಶೇಖರ್

ಕಡಬ : ದ.ಕ. ಜಿಲ್ಲೆಯ ಕಡಬ ತಾಲೂಕಿನಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ಪ್ರವಾಹದ ನೀರಿಗೆ ಬಿದ್ದ ಯುವಕ ಶರೀಫ್ ನನ್ನು ಜೀವದ ಹಂಗು ತೊರೆದು ಸೋಮಶೇಖರ್ ಎಂಬವರು ರಕ್ಷಿಸಿ ಮಾನವೀಯತೆ ಮೆರೆಯುವ ಜೊತೆಗೆ ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.

ಆಕಸ್ಮಿಕವಾಗಿ ನದಿಗೆ ಬಿದ್ದ ಕ್ರೇನ್ ಆಪರೇಟರ್ ಆಗಿರುವ ಮುಸ್ಲಿಂ ಯುವಕನನ್ನು ಹಿಂದೂ ಯುವಕನೊಬ್ಬ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರದಲ್ಲಿ ನಡೆದಿದೆ. ಜೆಸಿಬಿ ಆಪರೇಟರ್‍ನನ್ನು ಷರೀಫ್ ಎಂದು ಗುರುತಿಸಲಾಗಿದ್ದು, ಇವರನ್ನು ಸೋಮಶೇಖರ್ ಕಟ್ಟೆಮನೆ ರಕ್ಷಿಸಿದ್ದಾರೆ.

ಹರಿಹರದ ಪಲ್ಲತಡ್ಕ ಎಂಬಲ್ಲಿ ಭಾರೀ ಮಳೆಯಿಂದ ತೇಲಿ ಬಂದು ಸೇತುವೆ ಮೇಲೆ ಸಿಲುಕಿದ್ದ ಮರಗಳನ್ನು ಜೆಸಿಬಿ ಹಾಗೂ ಕ್ರೇನ್ ಮುಲಕ ತೆರವುಗೊಳಿಸಲಾಗುತ್ತಿತ್ತು. ಅಂತೆಯೇ ಕಡಬ ತಾಲೂಕಿನ ಪಂಜ ಸಮೀಪದ ಪಡ್ಪಿನಂಗಡಿ ನಿವಾಸಿ ಷರೀಫ್ ಕ್ರೇನ್‍ನಿಂದ ಕೆಳಗಿಳಿದು ಸೇತುವೆಯ ಮೇಲೆ ನಿಂತಿದ್ದರು.

ಜೆಸಿಬಿಯಿಂದ ಮೇಲಕ್ಕೆತ್ತಲಾದ ಮರದ ದಿಮ್ಮಿಗಳನ್ನು ಸಾಗಿಸುವ ಸಂದರ್ಭ ಆಕಸ್ಮಾತ್ತಾಗಿ ಮರದ ದಿಮ್ಮಿಯೊಂದು ಷರೀಫ್ ಗೆ ತಾಗಿದ್ದು, ಅವರು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದಾರೆ. ಹೀಗೆ ನದಿಗೆ ಬಿದ್ದ ಷರೀಫ್ ನೀರಿನ ರಭಸಕ್ಕೆ ಈಜಲು ಸಾಧ್ಯವಾಗದೆ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿ ಸೋಮಶೇಖರ್ ತಕ್ಷಣ ನದಿಗೆ ಹಾರಿ ಷರೀಫ್ ಅವರನ್ನು ಸುಮಾರು 5 ನಿಮಿಷಗಳ ಕಾಲ ಹಿಡಿದುಕೊಂಡು ನೀರಿನಲ್ಲಿ ನಿಂತರು. ನಂತರ ಹಗ್ಗ ಬಳಸಿ ಜೆಸಿಬಿ ಮುಖಾಂತರ ಅವರನ್ನು ಮೇಲಕ್ಕೆತ್ತಲಾಯಿತು.

ಸದ್ಯ ಸೋಮಶೇಖರ್ ಕ್ಟೆಮನೆ ಅವರ ಕಾರ್ಯಕ್ಕೆ ಜಿಲ್ಲೆಯಾದ್ಯಾಂತ ಭಾರೀ ಪ್ರಶಶಮಸೆ ವ್ಯಕ್ತವಾಗುತ್ತಿದೆ. ಸದ್ಯ ಶರೀಫ್ ನನ್ನು ರಕ್ಷಣೆ ಮಾಡುತ್ತೊರುವ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಸೋಮಶೇಖರ್ ಅವರ ಧೈರ್ಯ ಹಾಗೂ ಸಾಹಸವನ್ನು ಜನ ಕೊಂಡಾಡುತ್ತಿದ್ದಾರೆ.

Vishwa News 24

Recent Posts

ಉಡುಪಿ : ಬಾಲಕಿ ನಾಪತ್ತೆ -vishwanews24

ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…

4 hours ago

ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಉಬರ್’ ಸೇವೆ ಆರಂಭ -vishwanews24

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…

7 hours ago

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ -vishwanews24

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…

10 hours ago

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ -vishwanews24

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…

11 hours ago

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ -vishwanews24

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…

11 hours ago

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ -vishwanews24

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…

11 hours ago