ಬೆಂಗಳೂರು : ಧರ್ಮದ ಉಳಿವಿಗಾಗಿ ರಾಜ್ಯದ ಅಧಿಕಾರವನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಯ ಕುರಿತಾಗಿ ಟ್ವೀಟ್ ಮಾಡಿದ್ದಾರೆ.
ಧರ್ಮದ ಉಳಿವಿಗಾಗಿ ಹಿಂದೂಗಳು ರಾಜ್ಯ ಅಧಿಕಾರವನ್ನು ನಿಯಂತ್ರಿಸುವುದು ಅತ್ಯಗತ್ಯ. ನಾವು ರಾಜ್ಯವನ್ನು ನಿಯಂತ್ರಿಸದಿದ್ದಾಗ, ನಮ್ಮ ದೇವಾಲಯವನ್ನು ಕಳೆದುಕೊಂಡಿದ್ದೇವೆ. ನಾವು ಮರಳಿ ಪಡೆದಾಗ, ನಾವು ಪುನರ್ನಿರ್ಮಿಸಿದ್ದೇವೆ ಎಂದು ಹೇಳಿರುವ ಅವರು, ರಾಮ ಮಂದಿರ ನಿರ್ಮಾಣದ ಪ್ರಧಾನಿ ನರೇಂದ್ರ ಮೋದಿಯವರಿಂದ ಸಾಧ್ಯವಾಗಿದೆ ಎಂದಿದ್ದಾರೆ.
ಸೂರ್ಯ ತನ್ನ ಇನ್ನೊಂದು ಟ್ವೀಟ್‌ನಲ್ಲಿ, ಭಾರತೀಯ ತತ್ವಜ್ಞಾನಿ ಅರವಿಂದ ಘೋಷ್ ಬಗ್ಗೆ ಉಲ್ಲೇಖಿಸಿದ್ದು ಸನಾತನ ಧರ್ಮವೆಂದರೆ ಅದು ರಾಷ್ಟ್ರೀಯತೆ ಎಂದು ಅರವಿಂದ ಘೋಷ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಇದರ ಅರ್ಥವೇನು? ಪುರೋಹಿತರು ಜೈ ಶ್ರೀ ರಾಮ್ ಜೊತೆಗೆ ಭಾರತ್ ಮಾತಾ ಕಿ ಜೈ ಎಂದು ಜಪಿಸಿದರು. ಅದು ಧರ್ಮ ರಾಷ್ಟ್ರೀಯತೆ. ಧರ್ಮ ಉಳಿದುಕೊಂಡರೆ ಭಾರತ ಬದುಕುಳಿಯುತ್ತದೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…