ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಸುತ್ತಮುತ್ತ ಖಾಸಗಿ ಹೋಟೆಲ್‌ಗಳಿಗೆ ಅವಕಾಶ ನೀಡಬೇಡಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಅಭಿವೃದ್ಧಿ ಕಾರ್ಯ ಉದ್ಘಾಟನೆ ಬಳಿಕ ಮಾತನಾಡಿದ ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ದೇವಸ್ಥಾನದ ಒಂದೂವರೆ, ಎರಡು ಕಿಲೋ ಮೀಟರ್ ಸುತ್ತಮುತ್ತ ಖಾಸಗಿ ಹೊಟೇಲ್‌ಗಳಿಗೆ ಅವಕಾಶ ನೀಡಬೇಡಿ. ಮಾಂಸಹಾರ ಹೊಟೇಲ್‌ಗಳು ಬಂದರೆ ಬಾರ್‌ಗಳೂ ಬರುತ್ತವೆ. ನೇತ್ರಾವತಿ ನದಿ ಸೇರಿದಂತೆ, ಇತರ ನದಿಗಳ ಸುತ್ತ ಹೊಟೇಲ್‌ಗಳಿಗೆ ಅವಕಾಶ ನೀಡುವುದು ಬೇಡ. ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವುದಕ್ಕೆ ಸರ್ಕಾರ ಸಹಕರಿಸಬೇಕು. ರಾಜ್ಯಸಭೆ ಅಧಿವೇಶನದ ಮೊದಲ ಭಾಷಣದಲ್ಲೂ ಈ ಬಗ್ಗೆ ಮಾತನಾಡುವುದಾಗಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದ ವ್ಯಾಪ್ತಿಯನ್ನು ಇನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಇಲ್ಲಿಗೆ ಬರುವ ಜನರಿಗೆ ಧರ್ಮಸ್ಥಳದಲ್ಲಿ ಮದ್ಯ ಸಿಗುವುದಿಲ್ಲ ಅಂತಾ ಗೊತ್ತಿದೆ. ಅವರನ್ನು ವಾಹನದ ಡ್ರೈವರ್ ಉಜಿರೆಗೆ ಬಂದಾಗಲೇ ಎಚ್ಚರಿಸುತ್ತಾನೆ. ಧರ್ಮಸ್ಥಳದಲ್ಲಿ ಮದ್ಯ ಸಿಗುವುದಿಲ್ಲ. ತೆಗೆದುಕೊಳ್ಳುವುದಾದರೆ ಇಲ್ಲೇ ತೆಗೆದುಕೊಳ್ಳಿ ಅಂತಾ ಎಚ್ಚರಿಸುತ್ತಾನೆ ಎಂದು ಹೆಗ್ಗಡೆ ಹೇಳಿದರು.
ಕ್ಷೇತ್ರದ ಪಾವಿತ್ರ್ಯತೆ ಉಳಿಯಬೇಕು : ಧರ್ಮಸ್ಥಳದ ಸುತ್ತ ಮೂರು ನದಿಗಳು ಬರುತ್ತವೆ. ಈ ನದಿಗಳ ವ್ಯಾಪ್ತಿಯಲ್ಲಿ ಖಾಸಗಿ ಹೋಟೆಲ್, ವಸತಿ, ಬಾರ್‌ಗಳನ್ನು ತಲೆ ಎತ್ತದಂತೆ ಸರ್ಕಾರ ನೋಡಿಕೊಳ್ಳಬೇಕು. ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಿಗೆ ವಸತಿ ಸೌಲಭ್ಯ ಆಗಬೇಕು. ಆದರೆ ಮೋಜು ಮಸ್ತಿಗೆ ಧರ್ಮಸ್ಥಳದ ವ್ಯಾಪ್ತಿಯಲ್ಲಿ ಅವಕಾಶ ನೀಡಬಾರದು. ಕ್ಷೇತ್ರದ ಪಾವಿತ್ರ್ಯತೆ ಉಳಿಯಬೇಕು ಎಂದು ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡರು.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…