Featured

ಧರ್ಮಸ್ಥಳ  : ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣ ;ವಿಚಾರಣೆ ನಡೆಸಿ ಕ್ರಮ : ಎಸ್ಪಿ ಡಾ.ಅರುಣ್ ಕೆ – vishwanews24

ಧರ್ಮಸ್ಥಳ  : ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣ ;ವಿಚಾರಣೆ ನಡೆಸಿ ಕ್ರಮ : ಎಸ್ಪಿ ಡಾ.ಅರುಣ್ ಕೆ

ಮಂಗಳೂರು : ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಅವರ ಹೆತ್ತವರು ದೂರು ನೀಡಿದ್ದಾರೆ. ದೂರಿನ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ.

2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಣ್ಮರೆಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಯುವತಿಯ ತಾಯಿ ಜು. 15 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆಗಮಿಸಿ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

ಅಸ್ಥಿ ಸಿಕ್ಕಿದರೆ ಸಂಪ್ರದಾಯ ಪ್ರಕಾರ ಅಂತ್ಯ ಸಂಸ್ಕಾರ: ಸಾಯುವುದಕ್ಕಿಂತ ಮೊದಲು ಮಗಳ ಮೃತದೇಹದ ಅಸ್ಥಿ ಏನಾದರೂ ದೊರೆತರೆ, ಸನಾತನ ಹಿಂದೂ ಧರ್ಮದ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನಡೆಸುವ ಆಲೋಚನೆಯಲ್ಲಿ ಹೊರಟಿರುವೆನು. ನನಗೆ ಈಗ ಬೇರೆ ಏನು ಉಳಿದಿಲ್ಲ. ಮಗಳು ನಾಪತ್ತೆ ಪ್ರಕರಣದಲ್ಲಿ ನ್ಯಾಯ ದೊರಕಬೇಕು ಎಂದು ತಾಯಿ ಸುಜಾತ ಭಟ್ ತಿಳಿಸಿದ್ದಾರೆ.

ಅನನ್ಯ ನಾಪಕ್ಕೆ ಪ್ರಕರಣದ ಬಗ್ಗೆ ದೂರು ನೀಡುವ ಕಾರಣಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿದ್ದೇವೆ. ಆದರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಸುಜಾತ ಭಟ್ ಪರ ವಕೀಲರಾದ ಮಂಜುನಾಥ್ ಎನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Vishwa News 24

Recent Posts

ಬೆಂಗಳೂರು:  ಏರ್‌ಪೋರ್ಟ್‌ನಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ, ಮಾದಕ ವಸ್ತು ವಶಕ್ಕೆ – vishwanews24

ಬೆಂಗಳೂರು:  ಏರ್‌ಪೋರ್ಟ್‌ನಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ, ಮಾದಕ ವಸ್ತು ವಶಕ್ಕೆ ಬೆಂಗಳೂರು: ಇಲ್ಲಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1.37…

3 hours ago

ಬಾರ್, ಪಬ್ ಗಳಿಗೆ ವಿದ್ಯಾರ್ಥಿಗಳು: ದೂರು ಬಂದ ಕಾರಣ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ : ಪ್ರಿಯಾಂಕ್ ಖರ್ಗೆ  – vishwanews24

ಬಾರ್, ಪಬ್‍ಗಳಿಗೆ ವಿದ್ಯಾರ್ಥಿಗಳು: ದೂರು ಬಂದ ಕಾರಣ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ : ಪ್ರಿಯಾಂಕ್ ಖರ್ಗೆ  ಬೆಂಗಳೂರು : ಬಾರ್,…

4 hours ago

ಕಾಂಗ್ರೆಸ್ ಬಡವರ ಪಕ್ಷ ; ಶಾಲು, ಹೂವು ಹಾಕುವ ಬದಲು ದೇಣಿಗೆ ನೀಡಿ: ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್ ಸಲಹೆ – vishwanews24

ಕಾಂಗ್ರೆಸ್ ಬಡವರ ಪಕ್ಷ , ಶಾಲು, ಹೂವು ಹಾಕುವ ಬದಲು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿ: ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್…

4 hours ago

ಹಾವೇರಿ : ಸ್ವಯಂ ಉದ್ಯೋಗದ ಹೆಸರಲ್ಲಿ ಮಹಿಳೆಯರಿಗೆ ಕೋಟ್ಯಾಂತರ ರೂ. ವಂಚನೆ – vishwanews24

ಸ್ವಯಂ ಉದ್ಯೋಗದ ಹೆಸರಲ್ಲಿ ಗೃಹಿಣಿಯರಿಗೆ ಪಂಗನಾಮ : 10 ಕೋಟಿ ವಂಚಿಸಿ ಪರಾರಿ ಹಾವೇರಿ : “ಮನೆಯಲ್ಲೇ ಕುಳಿತು ಕೈತುಂಬಾ…

4 hours ago

ಉಡುಪಿ:  ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ – vishwanews24

ಉಡುಪಿ:  ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಉಡುಪಿ: ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ…

4 hours ago

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು – vishwanews24

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್…

4 hours ago