ಮಂಗಳೂರು: ಹಿಜಾಬ್ ಮುಸ್ಲಿಮ್ ಸ್ತ್ರೀಯರ ಸಾಂವಿಧಾನಿಕ ಮತ್ತು ಧಾರ್ಮಿಕ ಹಕ್ಕು, ಧಾರ್ಮಿಕವಾದ ಸರ್ವ ಹಕ್ಕುಗಳನ್ನು ರಕ್ಷಿಸಲು ನಾವು ಬದ್ದರಿದ್ದೇವೆ.
ಈ ಹಕ್ಕುಗಳ ಜೊತೆಗೆ ಸಾರ್ವತ್ರಿಕ ಶಿಕ್ಷಣ ಮತ್ತು ದೇಶಪ್ರೇಮವನ್ನು ನಾವು ಚೆನ್ನಾಗಿಯೇ ಬಲ್ಲೆವು. ಧಾರ್ಮಿಕ ಸಂಪ್ರದಾಯದ ರಕ್ಷಣೆ, ಶಿಕ್ಷಣ ಮತ್ತು ದೇಶ ಪ್ರೇಮ ನಮ್ಮ ರಕ್ತದಲ್ಲಿದೆ.
ಇದರ ಪಾಠವನ್ನು ನಮಗೆ ಒಂದು ರಾಜಕೀಯ ಪಕ್ಷದ ವಕ್ತಾರೆ ಎಂದು ಅಹಂಕಾರದಿಂದ ಬೀಗುತ್ತಾ ಬಾಯಿಗೆ ಬಂದಂತೆ ಮಾತಾಡುತ್ತಿರುವ ಸುರಯ್ಯಾ ಅಂಜುಮ್ ನಿಂದ ಕಲಿತು ಕೊಳ್ಳುವ ಅಗತ್ಯವಿಲ್ಲ. ಕಾರಣ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಏನೇನೂ ತಿಳಿಯದ ಸುರಯ್ಯ ಅಂಜುಮ್ ತಾನು ಒಮ್ಮಿಂದೊಮ್ಮೆಲೆ ಪ್ರಚಾರಕ್ಕೆ ಬರಬೇಕು ಎಂಬ ನೆಲೆಯಲ್ಲಿ ಬೊಗಳುತಿದ್ದಾರೆ.
ಅದಕ್ಕಾಗಿ ಇನ್ನೂ ಸುಲಭದ ಮಾರ್ಗ ತಾನು ಪ್ರತಿನಿಧಿಸುವ ಪಕ್ಷದಿಂದ ಹಿಜಾಬ್ ಅನ್ನು ವಿರೋಧಿಸುವ ರಾಷ್ಟ್ರೀಯ ಪಕ್ಷಕ್ಕೆ ಪಕ್ಷಾಂತರ ಗೊಂಡರೆ ಇನ್ನೂ ಹೆಚ್ಚಿನ ಪ್ರಚಾರ ಗಿಟ್ಟಿಸ ಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಒಂದು ನಿರ್ಧಿಷ್ಟ ಧರ್ಮದ ಮಹಿಳೆಯರ ಸಾಂವಿಧಾನಿಕ ಹಕ್ಕನ್ನು ಹೀಯಾಳಿಸಿದರೆ ಮತ್ತು ತೆಗಳಿದರೆ ಸಾಮೂಹಿಕ ಬಹಿಷ್ಕಾರಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು ಎಂದು ಸುರಯ್ಯ ಅಂಜುಮ್ ಅರ್ಥ ಮಾಡಿಕೊಂಡು ಇತರರಿಗೆ ಭೋಧನೆ ಮಾಡುವುದು ಒಳಿತು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…