ನಿತ್ಯ ಒಂದು ಕಡೆಯಿಂದ ಮತ್ತೊಂದು ಕಡೆಗೆ, ನಗರದ ಸಿಟಿ ಜೀವನದ ಧೂಳಿನಿಂದಾಗಿ ಅನೇಕರು ಅಲರ್ಜಿಯಿಂದಾಗಿ ನೆಗಡಿ, ಉಸಿರಾಟದ ಸಮಸ್ಯೆ, ಎದೆಯ ಬಿಗಿತ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಧೂಳಿನ ಅಲರ್ಜಿಗೆ ಏನೇನೋ ಔಷಧಿಗಳ ಪ್ರಯೋಗ ಮಾಡಿದ ನೀವು, ನಾವು ಹೇಳುವಂತೆ ಮನೆ ಮದ್ದು ಮಾಡಿಕೊಂಡು ಬಳಕೆ ಮಾಡಿದ್ರೇ, ಖಂಡಿತವಾಗಿ ನಿಮಗೆ ದೀರ್ಘವಾದಂತ ಪರಿಹಾರ ದೊರೆಯುತ್ತದೆ.
ಹೌದು… ಧೂಳಿನಿಂದ ಉಂಟಾಗುವ ಅಲರ್ಜಿ ನಿಮ್ಮನ್ನು ಮತ್ತಾವುದೋ ರೋಗಕ್ಕೆ ಗುರಿ ಮಾಡಬಹುದು. ಅಂತಹ ಸಮಸ್ಯೆಯಿಂದ ಪಾರಾಗಲು, ಬೇರೆ ಯಾವುದೋ ಔಷಧಿ ಬಳಸುವ ಬದಲು, ಮನೆಯಲ್ಲಿಯೇ ನೀವು ಮನೆ ಮದ್ದು ತಯಾರಿಸುವ ಮೂಲಕ, ಪರಿಹಾರವನ್ನು ಪಡೆಯಬಹುದಾಗಿದೆ. ಆ ಮನೆಮದ್ದುಗಳು ಈ ಕೆಳಗಿನಂತಿವೆ..
ಧೂಳಿನ ಅಲರ್ಜಿಗೆ ಇಲ್ಲಿವೆ ಮನೆಮದ್ದು
ತುಪ್ಪದಿಂದ ತಯಾರಿಕೆ ಮಾಡಬಹುದಾದ ಮನೆ ಮದ್ದು
ನೀವು ನಿತ್ಯ ಧೂಳಿನಿಂದ ಅಲರ್ಜಿ ಅನುಭವಿಸುತ್ತಿರುವಾಗ, ಇಂತಹ ಸಮಸ್ಯೆಯಿಂದ ಪಾರಾಗಲು ನಿಮ್ಮ ಮನೆಯಲ್ಲಿಯೇ ಸಿಗುವಂತ ತುಪ್ಪದಿಂದ ಮನೆ ಮದ್ದನ್ನು ತಯಾರಿಸಬಹುದಾಗಿದೆ. ಅಲರ್ಜಿಯಿಂದ ಉದ್ಬವಿಸುವ ಸೀನಿಗಾಗಿ ಕಾಲು ಚಮಟ ತುಪ್ಪ, ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ತಿಂದ್ರೇ, ಸೀನುವ ಸಮಸ್ಯೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ.
ಪುದಿನಾ ಬಳಸಿ ತಯಾರಿಸಬಹುದಾದಂತ ಮನೆ ಮದ್ದು
ಪುದಿನಾ ಎಲೆಯಲ್ಲಿ ವೊಲಾಟೈಲ್ ಎನ್ನುವಂತ ಮೆಂತಾಲ್ ಎಂಬ ಎಣ್ಣೆಯ ಅಂಶವಿದೆ. ಇದರಿಂದಾಗಿ ಶೀತ, ಕೆಮ್ಮಿಗೂ ರಾಮಬಾಣ. ಪುದೀನಾ ಎಲೆ ಹಾಗೂ ಒಂದು ಚಮಚ ಜೇನು ತುಪ್ಪವನ್ನು ಹಾಕಿದ ಟೀ ಮಾಡಿ, ದಿನದಲ್ಲಿ ಕನಿಷ್ಠ ಮೂರು ಬಾರಿ ಸೇವಿಸಿದ್ರೇ, ಅಲರ್ಜಿಯಿಂದ ನಿಮ್ಮನ್ನು ದೂರ ಮಾಡುತ್ತದೆ.
ಅರಿಶಿನ ಬಳಸಿ ತಯಾರಿಸಬಹುದಾಂತ ಮನೆ ಮದ್ದು
ಅರಿಶಿನ ಅಂದ್ರೇ ಸಾಕು ರೋಗ ನಿರೋಧಕ ಶಕ್ತಿ ಇರುವ ಮನೆ ಮದ್ದು. ಇಂತಹ ಅರಿಶಿನವನ್ನು ಒಂದು ಲೋಟ ಹಾಲಿಗೆ ಹಾಕಿಕೊಂಡು, ಜೊತೆಗೆ ಮೆಣಸು ಬೆರೆಸೆ, ಕುದಿಸಿದ ನಂತ್ರ ಅದಕ್ಕೆ ಜೇನುತುಪ್ಪ ಸೇರಿಸಿಕೊಂಡು ತಣ್ಣಗಾದ ನಂತ್ರ ಸೇವಿಸಿದ್ರೇ, ನಿಮ್ಮ ಅಲರ್ಜಿಗೆ ಶೀಘ್ರವಾದಂತ ನಿವಾರಣೆಯನ್ನು ನೀಡಲಿದೆ.
ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…
ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…
ವಿಧಾನ ಪರಿಷತ್ ಸಭಾ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್ ಕಲಾಪ…
ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…
ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…
ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…