ಬೆಂಗಳೂರು : ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ನಂದಿನಿ ಮೊಸರಿನ ಮಾರಾಟ ದರವನ್ನು 1 ಲೀಟರ್‌ಗೆ 2 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಈ ಪರಿಷ್ಕೃತ ದರವು ಇದೇ ನವೆಂಬರ್ 29 ಭಾನುವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ರಾಜ್ಯದ ಹಾಲು ಉತ್ಪಾದಕ ರೈತರ ಮನವಿಯ ಮೇರೆಗೆ ಕಳೆದ ನವೆಂಬರ್ 1 ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನು ಪರಿಷ್ಕರಿಸಿ ಏರಿಕೆ ಮಾಡಲಾಗಿತ್ತು. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಇಳಿಕೆ ಮಾಡುವಂತೆ ಸಿಎಂ ಡಿಕೆ ಶಿವಕುಮಾರ್ ಕೆಎಂಎಫ್‌ಗೆ ಸೂಚನೆ ನೀಡಿದ್ದರು. ಸಿಎಂ ಈ ನಿರ್ದೇಶನದಂತೆ ಕೆಎಂಎಫ್ ಇದೀಗ ದರ ಕಡಿತಗೊಳಿಸಿದೆ.
ನಂದಿನಿ ಮೊಸರಿನ ದರವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್‌ಗೆ 14 ರೂ. ಮತ್ತು ಅರ್ಧ ಲೀಟರ್‌ಗೆ 6 ರೂ. ಏರಿಕೆ ಮಾಡಲಾಗಿತ್ತು. ಇದರಿಂದಾಗಿ 1 ಲೀಟರ್ ಮೊಸರು 54 ರಿಂದ 68 ರೂ.ಗೆ ಏರಿಕೆಯಾಗಿದ್ದರೆ ಅರ್ಧ ಲೀಟರ್ ಮೊಸರಿನ ಬೆಲೆ 28 ರಿಂದ 34 ರೂ.ಗೆ ಹೆಚ್ಚಳ ಮಾಡಲಾಗಿತ್ತು.
ಕುಂದಾಪುರ : ದೇವಸ್ಥಾನದಲ್ಲಿ ಮಹಿಳೆಯ ಕರಿಮಣಿ ಸರ ಕಳವು ಪ್ರಕರಣ ; ನಾಲ್ವರು ಮಹಿಳೆಯರ ಸಹಿತ ಐವರ ಬಂಧನ ಕುಂದಾಪುರ:…
ಸೌಜನ್ಯಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ನಮಗೆ ನ್ಯಾಯ ಕೊಡಿಸಬೇಕು : ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹ ಮಂಗಳೂರು : ಸೌಜನ್ಯಾ ಪ್ರಕರಣದಲ್ಲಿ…
ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು ; ತಾಳ್ಮೆಯಿಂದ ಹೋರಾಟ ವಾಪಸ್ ತೆಗೆದುಕೊಳ್ಳಿ : ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿ ಬೆಂಗಳೂರು:…
ಮೋದಿ ಸಾರ್ವಜನಿಕ ಜೀವನಕ್ಕೆ 25 ವರ್ಷ – ಡಿ.1ರಿಂದ ದೇಶಾದ್ಯಂತ ಬಿಜೆಪಿಯ 'ಸೇವಾ ದೂತ’ ಅಭಿಯಾನ ನವದೆಹಲಿ: ಪ್ರಧಾನಿ ನರೇಂದ್ರ…
ನ. 27ರಿಂದ 29ರವರೆಗೆ ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ: ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಉಡುಪಿ : ಕಾರ್ಕಳ ಶ್ರೀವೆಂಕಟರಮಣ…
ಉಡುಪಿ : ಅಕ್ರಮವಾಗಿ ನೆಲೆಸಿದ್ದ 10 ಬಾಂಗ್ಲಾ ಪ್ರಜೆಗಳ ಗಡಿಪಾರು ಪ್ರಕ್ರಿಯೆಗೆ ಚಾಲನೆ ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ…