Featured

ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10 ದರದಲ್ಲಿ ಸಣ್ಣ ಪ್ಯಾಕ್‌ಗಳಲ್ಲೂ ಲಭ್ಯ – vishwanews24

ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10 ದರದಲ್ಲಿ ಸಣ್ಣ ಪ್ಯಾಕ್‌ಗಳಲ್ಲೂ ಲಭ್ಯ

ಬೆಂಗಳೂರು : ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10 ದರದಲ್ಲಿ ಸಣ್ಣ ಪ್ಯಾಕ್‌ಗಳಲ್ಲೂ ಲಭ್ಯವಾಗಲಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಗ್ರಾಹಕರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ಯಾಕ್‌ಗಳನ್ನು ಪರಿಚಯಿಸಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು ಹತ್ತು ಹೊಸ ನಂದಿನಿ ಉತ್ಪನ್ನಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಈ ಪೈಕಿ ರೂ.10 ದರದ ಹಾಲು ಹಾಗೂ ಮೊಸರಿನ ಸಣ್ಣ ಪ್ಯಾಕ್‌ಗಳ ಜೊತೆಗೆ ಮಧ್ಯಮ ಕೊಬ್ಬಿನ ಪನೀರ್, ಹೆಚ್ಚಿನ ಪರಿಮಳಯುಕ್ತ ತುಪ್ಪ, ಪ್ರೋಬಯಾಟಿಕ್ ಮಾವಿನ ಲಸ್ಸಿ, ಡೈರಿ ವೈಟ್‌ನರ್ ಸೇರಿದಂತೆ ಹಲವು ಹೊಸ ಉತ್ಪನ್ನಗಳು ಸೇರಿವೆ. ಇವುಗಳು ನಂದಿನಿ ಮಳಿಗೆಗಳಲ್ಲಿ ಲಭ್ಯವಿರಲಿವೆ.

ಹೊಸ ಬೆಲೆ ನಿಗದಿ ಪ್ರಕಾರ, ನಂದಿನಿ ಹಾಲು 160 ಮಿಲಿಲೀಟರ್ ಪ್ಯಾಕ್‌ನಲ್ಲಿ ರೂ.10ಕ್ಕೆ ಮಾರಾಟವಾಗಲಿದೆ. ಮೊಸರು 140 ಮಿಲಿಲೀಟರ್ ಪ್ಯಾಕ್‌ನಲ್ಲಿ ಇದೇ ದರಕ್ಕೆ ಲಭ್ಯವಾಗುತ್ತದೆ. ಇದುವರೆಗೆ ಹಾಲು ಮತ್ತು ಮೊಸರು 200 ಮಿಲಿಲೀಟರ್ ಪ್ಯಾಕ್‌ಗಳಲ್ಲಿ ಮಾರಾಟವಾಗುತ್ತಿತ್ತು. ಒಬ್ಬರೇ ವಾಸಿಸುವ ಮನೆಗಳಲ್ಲಿ ಅಥವಾ ಕಡಿಮೆ ಬಳಕೆಯ ಕುಟುಂಬಗಳಲ್ಲಿ 200 ಮಿಲಿಲೀಟರ್ ಹಾಲು ಅಥವಾ ಮೊಸರು ಸಂಪೂರ್ಣವಾಗಿ ಬಳಸಲಾಗದೆ ವ್ಯರ್ಥವಾಗುವ ಸಾಧ್ಯತೆ ಹೆಚ್ಚಾಗಿತ್ತು. ಉಳಿದ ಹಾಲು ಅಥವಾ ಮೊಸರನ್ನು ಸಂಗ್ರಹಿಸುವುದು ಗ್ರಾಹಕರಿಗೆ ಕಷ್ಟಕರವಾಗುತ್ತಿತ್ತು. ಈ ಹಿನ್ನೆಲೆ, ಕಡಿಮೆ ಬೆಲೆಯಲ್ಲಿ ಸಣ್ಣ ಪ್ರಮಾಣದ ಪ್ಯಾಕ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರು ದೈನಂದಿನ ಬಳಕೆಗೆ ತಕ್ಕಷ್ಟು ತಾಜಾ ಹಾಲು ಅಥವಾ ಮೊಸರನ್ನು ಖರೀದಿಸಬಹುದಾಗಿದೆ. ಇದರಿಂದ ವ್ಯರ್ಥ ಕಡಿಮೆಯಾಗುವುದರ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವೂ ದೊರೆಯಲಿದೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago