ಬೆಂಗಳೂರು : ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10 ದರದಲ್ಲಿ ಸಣ್ಣ ಪ್ಯಾಕ್‌ಗಳಲ್ಲೂ ಲಭ್ಯವಾಗಲಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಗ್ರಾಹಕರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ಯಾಕ್‌ಗಳನ್ನು ಪರಿಚಯಿಸಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು ಹತ್ತು ಹೊಸ ನಂದಿನಿ ಉತ್ಪನ್ನಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಈ ಪೈಕಿ ರೂ.10 ದರದ ಹಾಲು ಹಾಗೂ ಮೊಸರಿನ ಸಣ್ಣ ಪ್ಯಾಕ್‌ಗಳ ಜೊತೆಗೆ ಮಧ್ಯಮ ಕೊಬ್ಬಿನ ಪನೀರ್, ಹೆಚ್ಚಿನ ಪರಿಮಳಯುಕ್ತ ತುಪ್ಪ, ಪ್ರೋಬಯಾಟಿಕ್ ಮಾವಿನ ಲಸ್ಸಿ, ಡೈರಿ ವೈಟ್‌ನರ್ ಸೇರಿದಂತೆ ಹಲವು ಹೊಸ ಉತ್ಪನ್ನಗಳು ಸೇರಿವೆ. ಇವುಗಳು ನಂದಿನಿ ಮಳಿಗೆಗಳಲ್ಲಿ ಲಭ್ಯವಿರಲಿವೆ.
ಹೊಸ ಬೆಲೆ ನಿಗದಿ ಪ್ರಕಾರ, ನಂದಿನಿ ಹಾಲು 160 ಮಿಲಿಲೀಟರ್ ಪ್ಯಾಕ್‌ನಲ್ಲಿ ರೂ.10ಕ್ಕೆ ಮಾರಾಟವಾಗಲಿದೆ. ಮೊಸರು 140 ಮಿಲಿಲೀಟರ್ ಪ್ಯಾಕ್‌ನಲ್ಲಿ ಇದೇ ದರಕ್ಕೆ ಲಭ್ಯವಾಗುತ್ತದೆ. ಇದುವರೆಗೆ ಹಾಲು ಮತ್ತು ಮೊಸರು 200 ಮಿಲಿಲೀಟರ್ ಪ್ಯಾಕ್‌ಗಳಲ್ಲಿ ಮಾರಾಟವಾಗುತ್ತಿತ್ತು. ಒಬ್ಬರೇ ವಾಸಿಸುವ ಮನೆಗಳಲ್ಲಿ ಅಥವಾ ಕಡಿಮೆ ಬಳಕೆಯ ಕುಟುಂಬಗಳಲ್ಲಿ 200 ಮಿಲಿಲೀಟರ್ ಹಾಲು ಅಥವಾ ಮೊಸರು ಸಂಪೂರ್ಣವಾಗಿ ಬಳಸಲಾಗದೆ ವ್ಯರ್ಥವಾಗುವ ಸಾಧ್ಯತೆ ಹೆಚ್ಚಾಗಿತ್ತು. ಉಳಿದ ಹಾಲು ಅಥವಾ ಮೊಸರನ್ನು ಸಂಗ್ರಹಿಸುವುದು ಗ್ರಾಹಕರಿಗೆ ಕಷ್ಟಕರವಾಗುತ್ತಿತ್ತು. ಈ ಹಿನ್ನೆಲೆ, ಕಡಿಮೆ ಬೆಲೆಯಲ್ಲಿ ಸಣ್ಣ ಪ್ರಮಾಣದ ಪ್ಯಾಕ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರು ದೈನಂದಿನ ಬಳಕೆಗೆ ತಕ್ಕಷ್ಟು ತಾಜಾ ಹಾಲು ಅಥವಾ ಮೊಸರನ್ನು ಖರೀದಿಸಬಹುದಾಗಿದೆ. ಇದರಿಂದ ವ್ಯರ್ಥ ಕಡಿಮೆಯಾಗುವುದರ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವೂ ದೊರೆಯಲಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…