ಉಡುಪಿ: ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ಸೃಷ್ಟಿಸಿ ಸರಕಾರ ಹಾಗೂ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಲಾಭ ಪಡೆ ಯುತ್ತಿದ್ದವರ ಮೇಲೆ ಇದೀಗ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ನಕಲಿ ಕಾರ್ಮಿಕ ಕಾರ್ಡ್ ಗಳನ್ನು ಪತ್ತೆಹಚ್ಚಲು ಇಲಾಖೆ ಮುಂದಾಗಿದ್ದು ಈ ವರೆಗೆ ಉಭಯ ಜಿಲ್ಲೆಯಲ್ಲಿ 1,286 ನಕಲಿ ಕಾರ್ಡ್ ಗಳನ್ನು ಅಮಾನತುಗೊಳಿಸಲಾಗಿದೆ.
ರಾಜ್ಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 38.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 2,46,951 ಕಾರ್ಡ್ ನಕಲಿ ಎಂದು ಪಟ್ಟಿ ಮಾಡಿ ಕಾರ್ಮಿಕ ಇಲಾಖೆ ಈ ಎಲ್ಲ ಕಾರ್ಡ್‌ಗಳನ್ನು ಅಮಾನತುಗೊಳಿಸಿದೆ.
ಕಾರ್ಮಿಕರಲ್ಲದವರು ನಕಲಿ ಕಾರ್ಡ್‌ಗಳನ್ನು ಮಾಡಿಸಿ ಸರಕಾರದ ಯೋಜನೆಗಳ ಲಾಭ ಪಡೆಯು ತ್ತಿರುವ ಬಗ್ಗೆ ಇಲಾಖೆಗೆ ದೂರುಗಳು ಬಂದಿದ್ದವು. ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು 1,69,180 ಕಾರ್ಡ್‌ಗಳು ಪತ್ತೆಯಾಗಿದೆ.
ಮಾನದಂಡಗಳೇನು?
ನಿರ್ಮಾಣಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರಬೇಕು. ಪ್ಲಂಬರ್, ಪೇಂಟಿಂಗ್, ರಸ್ತೆ ನಿರ್ಮಾಣ, ಇಟ್ಟಿಗೆ ನಿರ್ಮಾಣ ಸೇರಿ 56 ವೃತ್ತಿ ಮಾಡುವವರು ಈ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ.ನಿರ್ಮಾಣಕ್ಕೆ ಸಂಬಂಧಪಟ್ಟಂತೆ 90 ದಿನ ಕೆಲಸ ಮಾಡಿದ್ದರೆ ಅಂತವರು ಕಾರ್ಮಿಕರ ಕಾರ್ಡ್ ಪಡೆಯಲು ಅರ್ಹರು.
ಪ್ರತೀ ವರ್ಷ 1,800 ಕೋಟಿ ರೂ. ಹಣವನ್ನು ಈ ಯೋಜನೆಗಳಿಗೆ ಮೀಸಲಿಡುವ ಇಲಾಖೆ 1,800 ರೂ. ಕೋಟಿ ಪೈಕಿ 1,209 ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ನೀಡುತ್ತಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಕಾರ್ಡ್ ರದ್ದಾಗಲಿದೆ
ಬೆಂ.ಗ್ರಾಮಾಂತರ 402, ಬೆಂ.ನಗರ 2,967, ಬಾಗಲಕೋಟೆ 2,039, ಬೆಳಗಾವಿ 1,136, ಬಳ್ಳಾರಿ 1,498, ಬೀದರ್ 25,759, ವಿಜಯಪುರ 2,097, ಚಾಮರಾಜನಗರ 743, ಚಿಕ್ಕಬಳ್ಳಾಪುರ 1,242, ಚಿಕ್ಕಮಗಳೂರು 1,173, ಚಿತ್ರದುರ್ಗ 859, ದಕ್ಷಿಣ ಕನ್ನಡ 1,076, ದಾವಣಗೆರೆ 3,659, ಧಾರವಾಡ 3,503, ಗದಗ 3,051, ಕಲಬುರಗಿ 2,280, ಹಾಸನ 2,266, ಹಾವೇರಿ 1,69,180, ಕೊಡಗು 175, ಕೋಲಾರ 1988, ಕೊಪ್ಪಳ 2083, ಮಂಡ್ಯ 396, ಮೈಸೂರು 1,316, ರಾಯಚೂರು 383, ರಾಮನಗರ 2748, ಶಿವಮೊಗ್ಗ 6,900, ತುಮಕೂರು 1,210, ಉಡುಪಿ 210, ಉತ್ತರ ಕನ್ನಡ 4,155.
ಕಾರ್ಮಿಕ ಕಾರ್ಡ್‌ಗಳ ದುರುಪಯೋಗ ಸಲ್ಲದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
– ಕಮಲ್ ಶಾ ಅಲ್ತಫ್ ಅಹಮ್ಮದ್,
ಜಿಲ್ಲಾ ಕಾರ್ಮಿಕ ಅಧಿಕಾರಿ, ಉಡುಪಿ
-ಬಾಲಕೃಷ್ಣ ಭೀಮಗುಳಿ
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…