ಮುಂಬೈ: ಬಾಲಿವುಡ್ ನಟಿ ತನುಶ್ರೀ ದತ್ತ ಹಾಗೂ ನಟ ನಾನಾ ಪಾಟೇಕರ್ ವಿವಾದದ ಮಧ್ಯೆ ಈಗ ಹಾಟ್ ಬೆಡಗಿ ರಾಖಿ ಸಾವಂತ್ ಎಂಟ್ರಿ ಕೊಟ್ಟಿದ್ದು, ತನುಶ್ರೀ ದತ್ತ ಸಲಿಂಗಕಾಮಿ, ಆಕೆ ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರ ನಡೆಸಿದ್ದಾರೆ ಎನ್ನುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ತನುಶ್ರೀ ದತ್ತಾ ನನ್ನ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದಾಳೆ. ತನುಶ್ರೀ ಯುವತಿಯಲ್ಲ. ಆಕೆ ಹುಡುಗರ ಸ್ವಭಾವ ಹೊಂದಿರುವವಳು. ಅವಳು ಸಲಿಂಗಿ(ಲೆಸ್ಬಿಯನ್). ಎಲ್ಲರೂ ಮೀಟೂ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಶಿ ಟೂ(#SheToo) ಎನ್ನುತ್ತೇನೆ ಎಂದು ಹೇಳಿಕೊಂಡಿರುವ ರಾಖಿ, ತನುಶ್ರೀ ನನ್ನ ಆತ್ಮೀಯ ಗೆಳತಿಯಾಗಿದ್ದಳು. ನನ್ನನ್ನು ಪಾರ್ಟಿಗಳಿಗೆ ಕರೆದೊಯ್ದಿದ್ದಾಳೆ ಎಂದರು.
ಈ ಘಟನೆ ನಡೆದಿದ್ದು 12 ವರ್ಷಗಳ ಹಿಂದೆ. ನಾನು ತನುಶ್ರೀ ಮನೆಗೆ ತೆರಳಿದ್ದಾಗ ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಈ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ ಎಂದು ಆರೋಪಿಸಿದ್ದಾರೆ.
ಈ ಎಲ್ಲಾ ಮಾಹಿತಿ ಬಹಿರಂಗೊಳಿಸಿದಂತೆ ನನಗೆ ಸಾಕಷ್ಟು ಜೀವ ಬೆದರಿಕೆ ಕರೆ ಬರುತ್ತಿವೆ. ಅದನ್ನು ಬೆದರಿಕೆಗಳನ್ನು ನೆನೆದರೆ ನನ್ನ ಕೈ ಕಾಲುಗಳು ಭಯದಿಂದ ನಡುಗುತ್ತಿವೆ. ಈಗ ನನಗೆ ಆಕೆಯ ಹೆಸರು ಹೇಳಲು ಸಹ ಭಯವಾಗುತ್ತಿದೆ. ತನುಶ್ರೀಯೇ ನನ್ನನ್ನು ಬಲತ್ಕಾರ ಮಾಡಿದ್ದು, ಇದು ಆಗಿನ 377 ಕಲಂ ವ್ಯಾಪ್ತಿಗೆ ಇದು ಬರುತ್ತದೆ. ತನುಶ್ರೀ ಹುಡುಗಿಯಲ್ಲ. ಆಕೆ ಮಿಸ್ ಇಂಡಿಯಾ ಆಗಿ ನನ್ನ ಉತ್ತಮ ಸ್ನೇಹಿತಳಾಗಿದ್ದಳು. ಸಿಗರೇಟ್ ನಲ್ಲಿ ತಂಬಾಕು ಖಾಲಿ ಮಾಡಿ ಡ್ರಗ್ಸ್ ಸೇರಿಸಿ, ತಾನು ಸೇವನೆ ಮಾಡಿದ್ದಲ್ಲದೆ, ನನಗೂ ಕೊಡಿಸಿದ್ದಳು..
ನನಗೆ ಇದನ್ನು ಹೇಳುವುದ್ದಕ್ಕೆ ತುಂಬಾ ನಾಚಿಕೆ ಆಗುತ್ತಿದೆ ಹಾಗೂ ದುಃಖವಾಗುತ್ತಿದೆ. ಒಬ್ಬಳು ಯುವತಿಯಾಗಿ ನಾನು ಈ ರೀತಿ ಹೇಳುವುದು ಸರಿಯಲ್ಲ. ಆದರೆ ನನಗೆ ಇಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ರಾಖಿ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…