ನಟೇಶ ನೃತ್ಯ ನಿಕೇತನ ಸಂಸ್ಥೆಯಿಂದ 16 ನೇ ವಾರ್ಷಿಕೋತ್ಸವ. ಪತ್ರಕರ್ತ ವಿಜಯ ಆಚಾರ್ಯ ಸೇರಿದಂತೆ ಸಾಧಕರಿಗೆ ಸನ್ಮಾನ.

ನಟೇಶ ನೃತ್ಯ ನಿಕೇತನ ಸಂಸ್ಥೆಯಿಂದ 16 ನೇ ವಾರ್ಷಿಕೋತ್ಸವ. ಪತ್ರಕರ್ತ ವಿಜಯ ಆಚಾರ್ಯ ಸೇರಿದಂತೆ ಸಾಧಕರಿಗೆ ಸನ್ಮಾನ.ಮಹಾನ್ ಕಲಾವಿದರನ್ನು ಬೆಳಕಿಗೆ ತಂದಿರುವ ನೃತ್ಯವು ಭಾರತೀಯ ಮೂಲ ಕಲೆ – ಶಾಸಕ ಲಾಲಾಜಿ ಮೆಂಡನ್.

ಪಡುಬಿದ್ರಿ: ನಟೇಶ ನೃತ್ಯ ನಿಕೇತನ ಸಂಸ್ಥೆಯ ಮೂಲಕ ಭಾರತದ ಮೂಲ ಕಲೆಯದ ನೃತ್ಯ – ಭರತನಾಟ್ಯದ ಸಾಧಕಿಯಾದ ಮಂಗಳಾ ಕಿಶೋರ್ ದೇವಾಡಿಗ ಅವರಿಗೆ ತಮ್ಮ ಅವಿರತ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಅವಕಾಶದ ಬಾಗಿಲು ತೆರೆದುಕೊಳ್ಳಲಿದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅಭಿಲಾಷೆ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆದ ಉಚ್ಚಿಲ ನಟೇಶ ನೃತ್ಯ ನಿಕೇತನ ಸಂಸ್ಥೆಯ 16 ನೇ ವಾರ್ಷಿಕೋತ್ಸವದ ಸಂದರ್ಭ ಮುಖ್ಯಅತಿಥಿಯಾಗಿ ಪಾಲ್ಗೊಂಡು ಸಾಧಕರನ್ನು ಸಮ್ಮಾನಿಸಿ ಮಾತನಾಡಿದರು.
ಈ ನೃತ್ಯ ಕಲೆಯ ಮೂಲಕವೇ ಹಲವಾರು ಮಹಾನ್ ಕಲಾವಿದರು ತಮ್ಮ ಪ್ರತಿಭೆಯನ್ನು ಬೆಳಕಿಗೆ ತಂದು ಗುರುತಿಸಿಕೊಳ್ಳುವಂತೆ ಉತ್ತಮ ನಾಯಕರಾಗಿ(ಸ್ಟಾರ್) ಮೂಡಿ ಬಂದಿರುತ್ತಾರೆ. ಅಂತಹ ನೃತ್ಯ ಕಲೆಯು ಭಾರತೀಯ ಮೂಲ ಕಲೆಯಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ಭಾರತೀಯ ಸಂಸ್ಕøತಿಯನ್ನು ನೃತ್ಯ, ಯಕ್ಷಗಾನ, ನಾಟಕ, ಸಂಗೀತ ಕಲೆಗಳು ಉಳಿಸಿಕೊಟ್ಟಿದೆ. ಅಂಗ ಸೌಷ್ಠವ, ಲಾಲಿತ್ಯ ಮನಸ್ಥಿತಿ, ಮನಸ್ಸಿನ ಪ್ರಫುಲ್ಲತೆಗೆ ಕಾರಣವಾಗುವ ನೃತ್ಯ ಕಲೆಯ ಬಗ್ಗೆ ತಾತ್ಸಾರ ಬೇಡ. ಆಪತಪಗಖಳಷ್ಠ ಲಲಿತ ಕಲೆಗಳ ಮೂಲಕ ಭಗವಂತನನನ್ನು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಆರ್ಚಕ ಯು. ಸೀತಾರಾಮ್ ಭಟ್ ಸಮಾರಂಭವನ್ನು ಉದ್ಘಾಟಿಸಿದರು. ನೃತ್ಯ ಗುರು ವಿದುಷಿ ವೀಣಾ ಎಂ. ಸಾಮಗ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರಂಭದಲ್ಲಿ ನಿವೃತ್ತ ಇಂಡಿಯನ್ ಆರ್ಮಿಯ ಮುತ್ತಯ್ಯ ಮೊಯ್ಲಿ, ವಾದ್ಯ ಸಂಗೀತ ಕ್ಷೇತ್ರದ ಶೇಖರ ಸೇರಿಗಾರ, ಶಿಕ್ಷಣ ಕ್ಷೇತ್ರದ ಸಾಧಕ ನಿವೃತ್ತ ಶಿಕ್ಷಕ ಎಂ. ಗೋಪಾಲಕೃಷ್ಣ ಅಡಿಗ, ವಿಲೇಜ್ ಎಕೌಂಟೆಂಟ್ ಶ್ರೇಯಾ ಕೆ ದೇವಾಡಿಗ ಉಚ್ಚಿಲ, ಯಕ್ಷಗಾನ ಕ್ಷೇತ್ರದ ಸಾಧಕ ಸುರೇಂದ್ರ ಪಿ. ಮುಲ್ಲಗುಡ್ಡೆ, ಪತ್ರಿಕಾರಂಗದ ವೈ ವಿಜಯ ಆಚಾರ್ಯ(ಎ.ವಿ. ಆಚಾರ್ಯ ಉಚ್ಚಿಲ) ಉಚ್ಚಿಲ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದ್ಯುಮಣಿ ಆರ್ ಭಟ್, ಉಡುಪಿ ಜಿಲ್ಲಾ ದೇವಾಡಿಗ ಸಂಘದ ಅಧ್ಯಕ್ಷ ರತ್ನಾಕರ ದೇವಾಡಿಗ, ಸಂಚಾಲಕರುಗಳಾದ ಪ್ರಕಾಶ ದೇವಾಡಿಗ, ಕಿಶೋರ್ ದೇವಾಡಿಗ ವೇದಿಕೆಯಲ್ಲಿದ್ದರು.
ಉಚ್ಚಿಲ ನಟೇಶ ನೃತ್ಯ ನಿಕೇತನದ ನಿರ್ದೇಶಕಿ ನೃತ್ಯ ವಿದುಷಿ ಮಂಗಳಾ ಕಿಶೋರ್ ದೇವಾಡಿಗ ಸ್ವಾಗತಿಸಿ ವಂದಿಸಿದರು. ವಿಜೇಶ್ ದೇವಾಡಿಗ ಸನ್ಮಾನಿತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು.

 ವರದಿ:   ಪುರುಷೋತ್ತಮ ಸಾಲಿಯಾನ್ ಮೂಳೂರು

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

10 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

11 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

11 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

11 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

11 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

11 hours ago