Featured

ನಟ ಕಮಲ್‌ ಹಾಸನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎ. ಅರುಣಾಚಲಂ ಬಿಜೆಪಿ ಸೇರ್ಪಡೆ -Vishwanews24

ನಟ ಕಮಲ್‌ ಹಾಸನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎ. ಅರುಣಾಚಲಂ ಬಿಜೆಪಿ ಸೇರ್ಪಡೆ -Vishwanews24

ಚೆನ್ನೈ: 2021ರ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷದ ಸಂಸ್ಥಾಪಕ, ನಟ ಕಮಲ್‌ ಹಾಸನ್‌ಗೆ ಹಿನ್ನಡೆಯಾಗಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಎ.ಅರುಣಾಚಲಂ ಅವರು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಅರುಣಾಚಲಂ ಅವರು ಟ್ಯುಟಿಕೋರಿನ್ ಜಿಲ್ಲೆಯವರಾಗಿದ್ದಾರೆ. ಕಮಲ್‌ ಹಾಸನ್‌ ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಅರುಣಾಚಲಂ ಪಕ್ಷ ತೊರೆದಿರುವುದು ಎಂಎನ್‌ಎಂಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಚೆನ್ನೈನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಕಾಶ್ ಜಾವಡೇಕರ್, ‘ತಮಿಳುನಾಡಿನಲ್ಲಿ ಬಿಜೆಪಿ ಅದ್ಭುತ ಪ್ರದರ್ಶನ ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ. ದೇಶದಾದ್ಯಂತ ಅನೇಕ ಪಕ್ಷಗಳು ಕುಟುಂಬ ಪಕ್ಷವನ್ನು ಹೊಂದಿವೆ. ಆದರೆ, ನಮಗೆ ನಮ್ಮ ಪಕ್ಷವೇ ಒಂದು ಕುಟುಂಬವಿದ್ದಂತೆ. ನಾವು ಚುನಾವಣೆಯಲ್ಲಿ ಸಾರ್ವತ್ರಿಕ ಪ್ರದರ್ಶನ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

‘ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌’ (ಜಿಎಚ್‌ಎಂಸಿ) ಚುನಾವಣೆಯಲ್ಲಿ ನಾವು ಈ ಹಿಂದೆ ಕೇವಲ ನಾಲ್ಕು ಸ್ಥಾನಗಳನ್ನು ಪಡೆದಿದ್ದೇವು. ಆದರೆ, ಈ ಬಾರಿ 48 ಸ್ಥಾನಗಳನ್ನು ಪಡೆದಿದ್ದೇವೆ. ಉತ್ತರ ಪ್ರದೇಶ, ಗುಜರಾತ್‌ನಲ್ಲಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಇತ್ತೀಚೆಗೆ ಜಮ್ಮು ಜಿಲ್ಲೆಯಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ತಮಿಳುನಾಡಿನಲ್ಲೂ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ’ ಎಂದು ಹೇಳಿದರು.

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

16 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

16 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

17 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

17 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

17 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

18 hours ago