ಹೈದರಾಬಾದ್ : ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಮದುವೆ ಬಗ್ಗೆ ಊಹಾಪೋಹಗಳು ಹಲವು ವರ್ಷಗಳಿಂದ ಕೇಳಿ ಬರುತ್ತಿವೆ. ಆದರೆ ರಾಹುಲ್ ಗಾಂಧಿ ಮಾತ್ರ ತುಟಿ ಬಿಚ್ಚಿರಲಿಲ್ಲ. ಆದರೀಗ ತಮ್ಮ ಮದುವೆಯ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ.”ನನಗೆ ಈಗಾಗಲೇ ಮದುವೆಯಾಗಿದೆ. ನಿಮಗೆ ಯಾರು ಹೇಳಿದ್ದು ನನಗೆ ಮದುವೆಯಾಗಿಲ್ಲ ಎಂದು?,” ಈ ಮಾತನ್ನು ಹೇಳಿದ್ದು ರಾಹುಲ್ ಗಾಂಧಿ. ಸಂಪಾದಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ರಾಹುಲ್ ಈ ರೀತಿ ಉತ್ತರ ಕೊಟ್ಟ ತಕ್ಷಣ ಎಲ್ಲರೂ ಸ್ಥಬ್ದರಾದರು. ಇಷ್ಟು ದಿನಗಳ ಕಾಲ ಕಾಯುತ್ತಿದ್ದ ಉತ್ತರವನ್ನು ರಾಹುಲ್ ಇಷ್ಟು ಅನಾಯಾಸವಾಗಿ ಹೇಳಿ ಬಿಡುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.
ತಮಗೆ ಮದುವೆಯಾಗಿದೆ ಎಂಬುದನ್ನು ಹೇಳಿದ ನಂತರ ರಾಹುಲ್ ಗಾಂಧಿ, ನಂತರ ಇದೊಂದು ಹಾಸ್ಯ ಚಟಾಕಿ ಎಂಬ ರೀತಿ ಪ್ರತಿಕ್ರಿಯಿಸಿದರು. ನಾನು ಮದುವೆಯಾಗಿರುವುದು ನಿಜ ಆದರೆ ಅದು ಕಾಂಗ್ರೆಸ್ ಪಕ್ಷದ ಜತೆ. ಕಾಂಗ್ರೆಸ್ ಪಕ್ಷದ ಜತೆ ನನಗೆ ಮದುವೆಯಾಗಿ ಯಾವುದೋ ಕಾಲವಾಗಿದೆ, ಅದರ ಜತೆಗೇ ನಾನು ಬಾಳ್ವೆ ನಡೆಸುತ್ತಿದ್ದೇನೆ ಎಂಬ ರೀತಿ ರಾಹುಲ್ ಮಾತನಾಡಿದರು.
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…
ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…
ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್ ವಾಹನ ಡಿಕ್ಕಿ : ಐವರು ದುರ್ಮರಣ ಕೊಪ್ಪಳ: ಗೂಡ್ಸ್ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…
ಮಲ್ಪೆ ಪ್ರಕರಣ: ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಬೆಂಗಳೂರು: ಕಳೆದ ವರ್ಷ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ…
ರಾಮ ಮಂದಿರದಲ್ಲಿ ಅವ್ಯವಹಾರದಂತಹ ಘೋರ ಅಪಚಾರಗಳು ನಡೆಯಬಾರದಿತ್ತು.. ಮಂದಿರದ ಅವ್ಯವಹಾರ ಆರೋಪಗಳು ಸತ್ಯವಾಗಿದ್ದರೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು : ಪೇಜಾವರ…
ಪರ್ಕಳ: ಹೆದ್ದಾರಿಯಲ್ಲಿ ಕಂಟೇನರ್ ಲಾರಿ ಪಲ್ಟಿ: ತಪ್ಪಿದ ದುರಂತ ಮಣಿಪಾಲ: ಪರ್ಕಳದ ಕೆಳಪರ್ಕಕಳ ಹೆದ್ದಾರಿಯಲ್ಲಿ ಕೆನರಾ ಬ್ಯಾಂಕಿನ ತಿರುವಿನಲ್ಲಿ ಕಂಟೇನರ್…