Featured

ನನ್ನದು ಸ್ವಾತಿ ನಕ್ಷತ್ರ, ನಮ್ಮ ಕುಟುಂಬಕ್ಕೆ ದಾಳಿ, ಮಾಟ, ಮಂತ್ರ ಯಾವುದೂ ತಟ್ಟಲ್ಲ :ಎಚ್‌.ಡಿ.ರೇವಣ್ಣ – Vishwanews24

ಹಾಸನ,: ಸುದೀರ್ಘ 60 ವರ್ಷದ ರಾಜಕೀಯ ಜೀವನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ಲೋಕಾಯುಕ್ತ, ಸಿಒಡಿ, ಸಿಬಿಐ ಎಲ್ಲ ತನಿಖೆ ನೋಡಿದೆ. ಯಾವುದಕ್ಕೂ ಹೆದರಿ ಓಡುವುದಿಲ್ಲ. ನಮಗೆ ದೈವಾನುಗ್ರಹವಿದೆ. ಐಟಿ ಶಾಕ್‌ ನೀಡಲು ಹೋದ್ರೆ ಮಾಡಿಸಿದವ್ರಿಗೆ ಶಾಕ್‌ ತಿರುಗಿ ತಟ್ಟುತ್ತದೆ. ಇದು ರಾಷ್ಟ್ರ ರಾಜಕಾರಣದ ತಿರುವಿಗೆ ದಿಕ್ಸೂಚಿ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

”ನಮ್ಮ ಮನೆದೇವರು ಈಶ್ವರ, ಆರಾಧ್ಯ ದೇವಿ ಶೃಂಗೇರಿ ಶಾರದೆ. ನನ್ನದು ಸ್ವಾತಿ ನಕ್ಷತ್ರ. ನಮ್ಮ ಕುಟುಂಬಕ್ಕೆ ದಾಳಿ, ಮಾಟ, ಮಂತ್ರ ಯಾವುದೂ ತಟ್ಟಲ್ಲ” ಯಾಕೆಂದರೆ ನಮಗೆ ದೈವಾನುಗ್ರಹವಿದೆ. ಐಟಿ ಶಾಕ್‌ ನೀದಿದ್ರೆ , ಮಾಡಿಸಿದವ್ರಿಗೆ ಶಾಕ್‌ ತಿರುಗಿ ತಟ್ಟುತ್ತದೆ ನೋಡುತ್ತಿರಿ ಎಂದು  ಸುದ್ದಿಗೋಷ್ಠಿಯಲ್ಲಿ ಗುರುವಾರ ಎಚ್ಚರಿಕೆ ನೀಡಿದ್ದಾರೆ..

ಹಾಸನ ಹಾಗೂ ರಾಮನಗರದಲ್ಲಿ ಮಾತ್ರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೆಲ್ಲ ದೇವೇಗೌಡರು ಹೆದರುವುದಿಲ್ಲ. ದೇಶದಲ್ಲಿ ಏನೇನೆಲ್ಲ ನಡಿತಿದೆ ಎಂದು ಜನ ನೋಡುತ್ತಿದ್ದಾರೆ. ಬಿಜೆಪಿಯವರು ಚುನಾವಣೆ ಹತ್ತಿರ ಬಂದಾಗ ದುರುದ್ದೇಶದಿಂದ ಹೀಗೆಲ್ಲ ಮಾಡುತ್ತಿದ್ದಾರೆ. ನಮ್ಮಲ್ಲಿ ಅಕ್ರಮ ಹಣ ಇದ್ದರೆ ಹೊತ್ತುಕೊಂಡು ಹೋಗಲಿ. ನಮಗೆ ಅದು ಬೆಡ. ಅದನ್ನು ಬಿಟ್ಟು ದೇವೇಗೌಡರು ಹಾಗೂ ಮುಖ್ಯಮಂತ್ರಿ ಹಾಗೂ ನನ್ನನ್ನು ಐಟಿ ದಾಳಿ ನಡೆಸುತ್ತೇವೆ ಅಂದರೆ ಅದು ಸಾಧ್ಯವಿಲ್ಲ. ಇದಕ್ಕೆಲ್ಲ ಚುನಾವಣೆ ಫಲಿತಾಂಶ ಉತ್ತರವಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

”ಬಿಜೆಪಿಯವರು ಇಷ್ಟುದಿನ ರಾಮನ ಜಪ ಮಾಡುತ್ತಾ ಇಟ್ಟಿಗೆ ಸಂಗ್ರಹಿದರು. ಈಗ ಪ್ರತಿನಿತ್ಯ ದೇವೇಗೌಡರ ಜಪ ಮಾಡದಿದ್ದರೆ ತಿಂದದ್ದು ಅರಗುವುದಿಲ್ಲ. ಕಳೆದ ಒಂಬತ್ತು ತಿಂಗಳಿಂದ ಅಧಿಕಾರಕ್ಕಾಗಿ ಕಾಂಗ್ರೆಸ್‌ ನಾಯಕರ ಮನೆಗೆ ತಿರುಗಿದ ರಾಜ್ಯ ಬಿಜೆಪಿ ಮುಖಂಡರು, ಈಗ ಕೇಂದ್ರದವರಿಗೆ ಪಟ್ಟಿ ಕೊಟ್ಟು ಐಟಿ ದಾಳಿ ಮಾಡಿಸುತ್ತಿದ್ದಾರೆ” ಎಂದರು.

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

3 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

3 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

3 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

3 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

3 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

3 days ago