ಹಾಸನ,: ಸುದೀರ್ಘ 60 ವರ್ಷದ ರಾಜಕೀಯ ಜೀವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಲೋಕಾಯುಕ್ತ, ಸಿಒಡಿ, ಸಿಬಿಐ ಎಲ್ಲ ತನಿಖೆ ನೋಡಿದೆ. ಯಾವುದಕ್ಕೂ ಹೆದರಿ ಓಡುವುದಿಲ್ಲ. ನಮಗೆ ದೈವಾನುಗ್ರಹವಿದೆ. ಐಟಿ ಶಾಕ್ ನೀಡಲು ಹೋದ್ರೆ ಮಾಡಿಸಿದವ್ರಿಗೆ ಶಾಕ್ ತಿರುಗಿ ತಟ್ಟುತ್ತದೆ. ಇದು ರಾಷ್ಟ್ರ ರಾಜಕಾರಣದ ತಿರುವಿಗೆ ದಿಕ್ಸೂಚಿ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
”ನಮ್ಮ ಮನೆದೇವರು ಈಶ್ವರ, ಆರಾಧ್ಯ ದೇವಿ ಶೃಂಗೇರಿ ಶಾರದೆ. ನನ್ನದು ಸ್ವಾತಿ ನಕ್ಷತ್ರ. ನಮ್ಮ ಕುಟುಂಬಕ್ಕೆ ದಾಳಿ, ಮಾಟ, ಮಂತ್ರ ಯಾವುದೂ ತಟ್ಟಲ್ಲ” ಯಾಕೆಂದರೆ ನಮಗೆ ದೈವಾನುಗ್ರಹವಿದೆ. ಐಟಿ ಶಾಕ್ ನೀದಿದ್ರೆ , ಮಾಡಿಸಿದವ್ರಿಗೆ ಶಾಕ್ ತಿರುಗಿ ತಟ್ಟುತ್ತದೆ ನೋಡುತ್ತಿರಿ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಎಚ್ಚರಿಕೆ ನೀಡಿದ್ದಾರೆ..
ಹಾಸನ ಹಾಗೂ ರಾಮನಗರದಲ್ಲಿ ಮಾತ್ರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೆಲ್ಲ ದೇವೇಗೌಡರು ಹೆದರುವುದಿಲ್ಲ. ದೇಶದಲ್ಲಿ ಏನೇನೆಲ್ಲ ನಡಿತಿದೆ ಎಂದು ಜನ ನೋಡುತ್ತಿದ್ದಾರೆ. ಬಿಜೆಪಿಯವರು ಚುನಾವಣೆ ಹತ್ತಿರ ಬಂದಾಗ ದುರುದ್ದೇಶದಿಂದ ಹೀಗೆಲ್ಲ ಮಾಡುತ್ತಿದ್ದಾರೆ. ನಮ್ಮಲ್ಲಿ ಅಕ್ರಮ ಹಣ ಇದ್ದರೆ ಹೊತ್ತುಕೊಂಡು ಹೋಗಲಿ. ನಮಗೆ ಅದು ಬೆಡ. ಅದನ್ನು ಬಿಟ್ಟು ದೇವೇಗೌಡರು ಹಾಗೂ ಮುಖ್ಯಮಂತ್ರಿ ಹಾಗೂ ನನ್ನನ್ನು ಐಟಿ ದಾಳಿ ನಡೆಸುತ್ತೇವೆ ಅಂದರೆ ಅದು ಸಾಧ್ಯವಿಲ್ಲ. ಇದಕ್ಕೆಲ್ಲ ಚುನಾವಣೆ ಫಲಿತಾಂಶ ಉತ್ತರವಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
”ಬಿಜೆಪಿಯವರು ಇಷ್ಟುದಿನ ರಾಮನ ಜಪ ಮಾಡುತ್ತಾ ಇಟ್ಟಿಗೆ ಸಂಗ್ರಹಿದರು. ಈಗ ಪ್ರತಿನಿತ್ಯ ದೇವೇಗೌಡರ ಜಪ ಮಾಡದಿದ್ದರೆ ತಿಂದದ್ದು ಅರಗುವುದಿಲ್ಲ. ಕಳೆದ ಒಂಬತ್ತು ತಿಂಗಳಿಂದ ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರ ಮನೆಗೆ ತಿರುಗಿದ ರಾಜ್ಯ ಬಿಜೆಪಿ ಮುಖಂಡರು, ಈಗ ಕೇಂದ್ರದವರಿಗೆ ಪಟ್ಟಿ ಕೊಟ್ಟು ಐಟಿ ದಾಳಿ ಮಾಡಿಸುತ್ತಿದ್ದಾರೆ” ಎಂದರು.
ಮಲ್ಪೆ : ಸೈಂಟ್‌ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…