ಬೆಂಗಳೂರು: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್‍ರವರು ನನ್ನ ಅಭಿಮಾನಿಗಳಲ್ಲಿ ನನ್ನ ತಾಯಿಯನ್ನ ಕಾಣುತ್ತೇನೆ ಎಂದು ಹೇಳಿದ್ದಾರೆ.
ನಟ ದುನಿಯ ವಿಜಯ್‍ರವರ ತಾಯಿ ನಾರಾಯಣಮ್ಮ ಗುರುವಾರ ನಿಧನರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಾಕಾರಿಯಾಗದೇ ಜುಲೈ 8ರಂದು ಕೊನೆಯುಸಿರೆಳೆದಿದ್ದರು. ಹೀಗಾಗಿ ಗುರುವಾರ ರಾತ್ರಿಯಿಂದಲೇ ಸ್ಯಾಂಡಲ್‍ವುಡ್‍ನ ಹಲವು ನಟ-ನಟಿಯರು ಅಂತಿಮ ದರ್ಶನ ಪಡೆದಿದ್ದಾರೆ. ಸದ್ಯ ಇಂದು ಹೊಸಕೆರೆ ಹಳ್ಳಿ ನಿವಾಸದಿಂದ ವಿಜಯ್ ಅವರ ತಂದೆ ಹುಟ್ಟೂರು ಆನೇಕಲ್ ನ ಕುಂಬಾರನಹಳ್ಳಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗಿದ್ದು, ಮಧ್ಯಾಹ್ನದ ವೇಳೆಗೆ ವಿಜಯ್ ಅವರ ಜಮೀನಿನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದುನಿಯಾ ವಿಜಯ್‍ರವರು, ಇಂದು ಹೊಸಕೆರೆಹಳ್ಳಿಯ ತಮ್ಮ ನಿವಾಸದಿಂದ ಆನೆಕಲ್ ನ ಕುಂಬಾರಹಳ್ಳಿಗೆ ತಾಯಿಯ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ನಮ್ಮ ಮನೆಯಲ್ಲಿ ಅಮ್ಮ 21 ದಿನಗಳ ಕಾಲ ಮಗು ರೀತಿ ಇದ್ದರು. ಒಂದು ರೀತಿ ನನ್ನ ಮಗನಾ ನಾನು ಕಳ್ಕೊಂಡಿದ್ದೀನಿ ಎಂದು ಅಮ್ಮನ ಅಗಲಿಕೆ ನೋವಲ್ಲಿ ಕಣ್ಣೀರಿಟ್ಟಿದ್ದಾರೆ.
ನಂತರ ನನ್ನ ಅಭಿಮಾನಿಗಳಲ್ಲಿ ನನ್ನ ತಾಯಿಯನ್ನ ಕಾಣುತ್ತೇನೆ. ನಾನು ನಿರ್ದೇಶಿಸಿ, ನಟಿಸಿರುವ ಸಲಗ ಸಿನಿಮಾವನ್ನು ಅವರಿಗೆ ನೋಡುವ ಆಸೆ ಇತ್ತು. ಆದರೆ ಅದು ಈಡೇರಲಿಲ್ಲ ಎಂಬ ನೋವಿದೆ. ಅಮ್ಮನ ಆಸೆಯಂತೆಯೇ ಎಲ್ಲ ನಡೆಯುತ್ತಿದೆ. ಕಾಶಿಯಿಂದ ಗಂಗಾಜಲ ತರಿಸಲಾಗಿತ್ತು, ಅದನ್ನು ಕುಡಿದ ನಂತರವೇ ಅಮ್ಮ ನಮ್ಮನ್ನು ಅಗಲಿದರು. ಅವರ ಇಚ್ಚೆಯಂತೆ ಅವರು ಹೇಳಿದ್ದ ಸ್ಥಳದಲ್ಲಿಯೇ ಅಂತ್ಯ ಕ್ರಿಯೆ ಕೂಡ ಆಗುತ್ತಿದೆ ಎಂದು ಹೇಳಿದ್ದಾರೆ.
ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಉಡುಪಿ : ಮಲಬಾರ್…
ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…
ಪ್ರಧಾನಿ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…
ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…
ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…
ಮೋದಿ ತಮ್ಮ ಸುಳ್ಳು ಭಾಷಣಗಳ ಮೂಲಕ ಪ್ರಧಾನಿ ಕುರ್ಚಿಯ ಘನತೆ ಮಣ್ಣುಪಾಲು ಮಾಡುತ್ತಿದ್ದಾರೆ: ಸಿದ್ದರಾಮಯ್ಯ ಕಿಡಿ ಬೆಂಗಳೂರು: ಪ್ರಧಾನಿ ಕುರ್ಚಿಯ…