Featured

ನನ್ನ ಇಪ್ಪತ್ತೈದು ವರ್ಷಗಳ ರಾಜಕಾರಣದಲ್ಲಿ ಈ ರೀತಿ ಅಪಾದನೆ ಯಾವತ್ತೂ ಬಂದಿಲ್ಲ ; ನಾನು ನಿಷ್ಕಳಂಕ ರಾಜಕಾರಣಿ : ರೇವಣ್ಣ ಭಾವುಕ – Vishwanews24

ನನ್ನ ಇಪ್ಪತ್ತೈದು ವರ್ಷಗಳ ರಾಜಕಾರಣದಲ್ಲಿ ಈ ರೀತಿ ಅಪಾದನೆ ಯಾವತ್ತೂ ಬಂದಿಲ್ಲ : ರೇವಣ್ಣ ಭಾವುಕ

ಬೆಂಗಳೂರು: ‘ನನ್ನ ಇಪ್ಪತ್ತೈದು ವರ್ಷಗಳ ರಾಜಕಾರಣದಲ್ಲಿ ಈ ರೀತಿ ಅಪಾದನೆ ಯಾವತ್ತೂ ಬಂದಿಲ್ಲ. ನಾನು ನಿಷ್ಕಳಂಕ ರಾಜಕಾರಣಿ, ನನಗೆ ಹಿಂಸೆ ಕೊಟ್ಟು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಎಸ್‌ಐಟಿ ಅಧಿಕಾರಿಗಳು ಒತ್ತಡಹಾಕಿದರು’ ಎಂದು ಎಸ್ ಐಟಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಎಚ್.ಡಿ.ರೇವಣ್ಣ ಅವರು ನ್ಯಾಯಾಧೀಶರ ಎದುರು ಹೇಳಿದ್ದಾರೆ.

ಲೈಂಗಿಕ ಹಗರಣದ ಶೋಷಿತ ಮಹಿಳೆ ಅಪಹರಣ ಪ್ರಕರಣ ಸಂಬಂಧ ಪೊಲೀಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ಬುಧವಾರ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಈ ವೇಳೆ ನ್ಯಾಯಾಧೀಶರು, ರೇವಣ್ಣ ಅವರಿಗೆ ಪ್ರಕರಣ ಕುರಿತು ವಿಚಾರಿಸಿದರು. ಆಗ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ ರೇವಣ, ರಾಜಕೀಯ ಷಡ್ಕಂತ್ರ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

“ನಾನು 25 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂದಿಗೂ ಈ ರೀತಿ ಅಪಾದನೆ ಬಂದಿಲ್ಲ. ನಾನು ನಿಷ್ಕಳಂಕ ರಾಜಕಾರಣಿಯಾಗಿದ್ದೇನೆ. ನಾನು ತಪ್ಪು ಮಾಡಿಲ್ಲ. ಮಹಿಳೆ ಅಪಹರಣ ನಡೆದ ದಿನ ನಾನು ಊರಿನಲ್ಲೇ ಇರಲಿಲ್ಲ. ನಾನು ಯಾರಿಗೂ ಕರೆ ಮಾಡಿ ಮಾತು ಸಹ ಆಡಿಲ್ಲ. ಹೀಗಿದ್ದರೂ ನನ್ನನ್ನು ಮಹಿಳೆ ಅಪಹರಣದಲ್ಲಿ ಆರೋಪಿ ಮಾಡಿದ್ದಾರೆ’ ಎಂದು ತಿಳಿಸಿದರು.

‘ನನಗೆ ಎಸ್‌ಐಟಿ ಅಧಿಕಾರಿಗಳು ವಿವ ದೀತ ತೊಂದರೆ ಕೊಟ್ಟಿದ್ದಾರೆ. ವೈದ್ಯರು ಚಿಕಿತ್ಸೆ ಕೊಡಿಸುವಂತೆ ಹೇಳಿದರೂ ಕೂಡ ನನಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಯನ್ನು ಅಧಿಕಾರಿಗಳು ಕೊಡಿಸಿಲ್ಲ. ನಿನ್ನೆ ವಿಚಾರಣೆ ಎಲ್ಲ ಮುಗಿದಿದೆ ಎಂದು ಹೇಳಿ. ನನ್ನನ್ನು ಆಸ್ಪತ್ರೆಯಿಂದ ಅಧಿಕಾರಿಗಳು ಕರೆ ತಂದರು. ಆದರೆ ಇಂದು ಬೆಳಗ್ಗೆ ಮತ್ತೆ 2 ಗಂಟೆಗಳು ವಿಚಾರಣೆ ಮಾಡಿ ನನಗೆ ಕಿರು ಕುಳ ಕೊಟ್ಟಿದ್ದಾರೆ. ನಾನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಅಧಿಕಾರಿಗಳು ಒತ್ತಡ ಹಾಕಿದರು. ಮಾಡದ ತಪ್ಪನ್ನು ಹೇಗೆ ಒಪ್ಪಿ ಕೊಳ್ಳಲಿ ಎಂದು ರೇವಣ್ಣನಿವೇದಿಸಿದರು.

ನಾನು ನನ್ನ ಕೈಲಾದ ಮಟ್ಟಿಗೆ ಅಧಿಕಾರಿ ಗಳ ತನಿಖೆಗೆ ಸಹಕರಿಸಿದ್ದೇನೆ. ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಇದಕ್ಕಿಂತ ಅನ್ನು ತನಿಖೆಗೆ ಸಹರಿಸಲು ನನ್ನಿಂದ ಸಾಧ್ಯವಿಲ್ಲ ಕಳೆದ ಮೂರು ದಿನಗಳಿಂದ ನಾನು ನಿದ್ದೆ ಮಾಡಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ನಾನು ಸಭ್ಯ ರಾಜಕಾರಣ ಮಾಡಿದ್ದೇನೆ. ಕಾನೂನಿಗೆ ತಲೆಬಾಗಿ ನಡೆದುಕೊಂಡಿದ್ದೇನೆ ಎಂದು ಭಾವುಕರಾಗಿ ನುಡಿದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

4 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

5 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

5 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

5 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

6 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

6 days ago