ಬೆಂಗಳೂರು : ಜನವರಿ 28ರಂದು ನನ್ನ ಜನ್ಮ ದಿನ. ಇಂತಹ ಜನ್ಮ ದಿನವನ್ನು ಕೊರೋನಾ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ. ಯಾವುದೇ ಕಾರ್ಯಕರ್ತರು ಫ್ಲೆಕ್, ಬ್ಯಾನರ್, ಹೋರ್ಡಿಂಗ್ಸ್ ಹಾಕಬೇಡಿ. ನಾನು ಅಂದು ಇಲಾಖೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತೇನೆ. ಯಾರೂ ಶುಭಾಶಯ ತಿಳಿಸಲು ಬರಬೇಡಿ ಎಂಬುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವ ಅವರು ದಿನಾಂಕ 28-01-2021, ಗುರುವಾರದಂದು ನನ್ನ ಜನ್ಮದಿನವಿದ್ದು, ಈ ಮೂಲಕ ವಿನಂತಿಸುವುದೇನೆಂದರೆ ನನ್ನ ಜನ್ಮದಿನದಂದು ಯಾರೂ ಕೂಡ ಫ್ಲೆಕ್ಸ್ ಬ್ಯಾನರ್ಸ್, ಹೋರ್ಡಿಂಗ್ಸ್ ಹಾಕಬೇಡಿ. ಕೋವಿಡ್ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಉಡುಗೋರೆ, ಶಾಲು, ಮಾಲೆ, ಹೂಗುಚ್ಚಗಳೊಂದಿಗೆ ಶಿಭಾಶಯ ಕೋರಲು ಆಗಮಿಸಬಾರದೆಂದು ಮನವಿ ಮಾಡಿಕೊಳ್ಳುತ್ತೇನೆ.
ಅಲ್ಲದೇ ಆ ದಿನದಂದು ನಾನು ಇಲಾಖೆಗಳ ಕಾರ್ಯಕ್ರಮಗಳ ನಿಮಿತ್ಯ ಪ್ರವಾಸದಲ್ಲಿರುತ್ತೇನೆ. ಈ ಸಂಬಂಧ ಯಾವುದೇ ಚಟುವಟಿಕೆಗಳಿಗೆ ದುಂದು ವೆಚ್ಚ ಮಾಡದೇ, ಅದೇ ಹಣದಿಂದ ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಬಡಜನರ ಸೇವೆಗೈಯಿರಿ ಎಂದು ನನ್ನ ಎಲ್ಲಾ ಕಾರ್ಯಕರ್ತರು, ಸ್ನೇಹಿತರು ಹಾಗೂ ಹಿತೈಷಿಗಳಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.
ರೈತರ ಹೋರಾಟ : ಸಾವು-ನೋವುಗಳು ಸಂಭವಿಸುತ್ತಿರುವುದು ನಿಜಕ್ಕೂ ದುಖದ ಸಂಗತಿ : ಸಚಿವ ಯು.ಟಿ.ಖಾದರ್ -Vishwanews24
ಕಾರ್ಕಳ: ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಾರ್ಕಳ: ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…
ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…